Friday, March 14, 2025
HomeNewsಮಹಿಳೆ ಕಳುಹಿಸಿದ Whatsapp Message ನೋಡಿ ಶಾಕ್ ಆದ ವೈದ್ಯ.!
spot_img
spot_img
spot_img
spot_img
spot_img

ಮಹಿಳೆ ಕಳುಹಿಸಿದ Whatsapp Message ನೋಡಿ ಶಾಕ್ ಆದ ವೈದ್ಯ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ‌ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಮಹಿಳೆಯೊಬ್ಬರ ಕಡೆಯಿಂದ ಬೆಂಗಳೂರಿನ ವೈದ್ಯರೊಬ್ಬರಿಗೆ ವಿಚಿತ್ರ ಸಂದೇಶಗಳು (Strange messages) ಬಂದಿವೆ.

ಆದರೆ ಇವು ಪ್ರಾಂಕ್ ಸಂದೇಶನಾ ಅಥವಾ ನಿಜವಾದ ಮೆಸೇಜ್ (Is it a prank message or a real message)? ಎಂದು ಶಂಕೆ ವ್ಯಕ್ತವಾಗಿದೆ. ಆ ರೀತಿಯ ಬೆಚ್ಚಿಬೀಳಿಸುವ ಮೇಸೆಜ್‌ಗಳು ವೈದ್ಯರಿಗೆ ಬಂದಿವೆ.

ಇದನ್ನು ಓದಿ : ಮಗುವನ್ನು ಎದೆಗೆ ಕಟ್ಟಿಕೊಂಡು ಮಹಿಳಾ RPF ಸಿಬ್ಬಂದಿ ಸೇವೆ : ವಿಡಿಯೋ ವೈರಲ್.!

ಡಾಕ್ಟರ್ ಸುನೀಲ್ ಕುಮಾರ್ ಎಂಬುವವರಿಗೆ ಒಬ್ಬ ಮಹಿಳೆ ವಾಟ್ಸಪ್‌ನಲ್ಲಿ ಮೆಸೇಜ್ ಮಾಡಿ ‘ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ (Prescribe a pill to kill my mother in law)’ ಎಂದು ಕೇಳಿದ್ದಾರೆ. ಇದರಿಂದ ಅಚ್ಚರಿಗೊಳಗಾದ ಡಾಕ್ಟರ್ ಸುನೀಲ್ ಕುಮಾರ್, ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆ ಮಹಿಳೆ ಇನ್ಸ್ಟಾಗ್ರಾಮ್ ಮೂಲಕ ಡಾಕ್ಟರ್ ನಂಬರ್ ಪಡೆದು, ಬಳಿಕ ನಿನ್ನೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : ಅಧಿಕಾರಿಗಳ ಹಣದಾಹಕ್ಕೆ ಬೇಸರ : ದುಡ್ಡು ಎಸೆದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ; Video Viral.!

ನಮ್ಮ ಅತ್ತೆಗೆ ವಯಸ್ಸಾಗಿದೆ, ತುಂಬಾ ಹಿಂಸೆ ಕೊಡ್ತಾರೆ, ಏನಾದ್ರೂ ಹೇಳ್ತಿರಾ ಹೇಗೆ ಸಾಯಿಸೋದು ಎಂದು ಮೆಸೇಜ್ ಮಾಡಿದ್ದಾಳೆ.

ಅಲ್ಲದೇ ಮಹಿಳೆ, ಒಂದು – ಎರಡು ಟ್ಯಾಬ್ಲೆಟ್‌ ತಗೊಂಡ್ರೆ ಸಾಯ್ತಾರಲ್ಲ ಅದು ಹೇಳಿ ಅಂತ ಕೇಳಿದ್ದಾರೆ. ಬಳಿಕ ಕೂಡಲೇ ಮೆಸೇಜ್ ಗಳನ್ನು ಡಿಲೀಟ್ ಮಾಡಿ, ನಂಬರ್ ಬ್ಲಾಕ್ ಮಾಡಿದ್ದಾರೆ ಎಂದು ವೈದ್ಯ ಸುನೀಲ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಹಿಂದಿನ ಸುದ್ದಿ : ಖಾಸಗಿ ಕ್ಷಣ ಕಳೆಯಲು ಕರೆದು ಹನಿಟ್ರ್ಯಾಪ್ ಮಾಡಿದ ಮಾಯಾಂಗಿನಿ & ಗ್ಯಾಂಗ್ ಅರೆಸ್ಟ್.!

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಸದ್ದುಗುಂಟೆಪಾಳ್ಯ ಠಾಣೆಯ ಪೊಲೀಸರು (Sadduguntepalya Police Station, Bangalore), ಹನಿಟ್ರ್ಯಾಪ್‌ ಮಾಡಿದ್ದ ಯುವತಿ ಸೇರಿ ಆರು ಜನರನ್ನು ಅರೆಸ್ಟ್ ಮಾಡಿದ ಘಟನೆ ನಡೆದಿದೆ.

ಮೊಹಮ್ಮದ್‌ ಇರ್ಫಾನ್‌(29), ಸಲ್ಮಾನ್‌ ಖಾನ್‌ (26), ಸುಹೈನ್‌ ಖಾನ್‌ (42), ವಹೀದ್‌ ಖಾನ್‌ (27), ಸೈಯದ್‌ ಶಮಾಲುದ್ದೀನ್‌(29), ಈತನ ಪ್ರೇಯಸಿ 29 ವರ್ಷದ ಯುವತಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ವಕ್ಪ್‌ ಬೋರ್ಡ್‌ ಲೆಕ್ಕಾಧಿಕಾರಿ ಸೇರಿ ಇಬ್ಬರು Lokayukta ಬಲೆಗೆ.!

ಆರೋಪಿಗಳು ಜ. 25ರಂದು ತಮಿಳುನಾಡು ಮೂಲದ ಯುವಕನನ್ನು ಯುವತಿ ಮೂಲಕ ಬೆಂಗಳೂರಿಗೆ ಕರೆಸಿಕೊಂಡು ಹನಿಟ್ರ್ಯಾಪ್‌ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪೈಕಿ 29 ವರ್ಷದ ಯುವತಿ ಜಿಗಣಿ ಮೂಲದವಳಾಗಿದ್ದು, ಕೆಲ ವರ್ಷಗಳ ಕಾಲ ತಮಿಳುನಾಡಿನಲ್ಲಿದ್ದಳು. ಈಕೆ ಬ್ಯೂಟಿಷಿಯನ್‌ ಮತ್ತು ನೃತ್ಯಗಾರ್ತಿಯಾಗಿದ್ದಾಳೆ (beautician and dancer).

ಇದನ್ನು ಓದಿ : ಮಗುವನ್ನು ಎದೆಗೆ ಕಟ್ಟಿಕೊಂಡು ಮಹಿಳಾ RPF ಸಿಬ್ಬಂದಿ ಸೇವೆ : ವಿಡಿಯೋ ವೈರಲ್.!

2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಸಂದರ್ಭ ಪರಿಚಯಸ್ಥರ ಮೂಲಕ ಈಕೆಗೆ ಸೈಯದ್‌ ಶಮಾಲುದ್ದೀನ್‌ ಪರಿಚಯಯವಾಗಿತ್ತು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಬಾಣಸವಾಡಿಯಲ್ಲಿ ಸಹಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಮಧ್ಯೆ ಸೋಶಿಯಲ್ ಮೀಡಿಯಾದ ಮೂಲಕ ತಮಿಳುನಾಡು ಮೂಲದ ಯುವಕನ ಜತೆ ಸ್ನೇಹ ಬೆಳೆಸಿ ಆತನೊಂದಿಗೆ ಚಾಟಿಂಗ್‌ ಮಾಡಿದ್ದ ಯುವತಿ, ಖಾಸಗಿ ಕ್ಷಣ ಕಳೆಯಲು ಬೆಂಗಳೂರಿಗೆ ಬಾ ಎಂದು ಕರೆದಿದ್ದಳು.

ಇದನ್ನು ಓದಿ : ಅಧಿಕಾರಿಗಳ ಹಣದಾಹಕ್ಕೆ ಬೇಸರ : ದುಡ್ಡು ಎಸೆದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ; Video Viral.!

ಅಲ್ಲದೇ ಆತ ಬರುತ್ತಿರುವ ವಿಚಾರವನ್ನು ತನ್ನ ಪ್ರಿಯಕರ (lover) ಶಮಾಲುದ್ದೀನ್‌ಗೆ ತಿಳಿಸಿದ್ದಾಳೆ. ಈತ ಸ್ನೇಹಿತ ಇರ್ಫಾ ನ್‌ಗೆ ತಿಳಿಸಿದ್ದು, ವಹಿದ್‌ ಖಾನ್‌ ಮೂಲಕ ಸಂಚು ರೂಪಿಸಿದ ಮೂವರು, ಸುಹೈಲ್‌ ಮತ್ತು ಸಲ್ಮಾನ್‌ನನ್ನು ಬಳಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದರು (plotted to commit robbery) ಎಂದು ಪೊಲೀಸರು ತಿಳಿಸಿದ್ದಾರೆ.

ಜ. 25ರಂದು ರಾತ್ರಿ 10 ಗಂಟೆ ಸುಮಾರಿಗೆ ತಮಿಳುನಾಡಿನಿಂದ ನಗರದ ಸ್ಯಾಟಲೈಟ್‌ ನಿಲ್ದಾಣಕ್ಕೆ ಯುವಕ ಬರುವಷ್ಟರಲ್ಲೇ ಸುಹೈಲ್‌ ಖಾನ್‌ನ ಆಟೋದಲ್ಲಿ ಯುವತಿ ಕುಳಿತಿದ್ದಳು. ಬಳಿಕ ಆಟೋದಲ್ಲಿ ಕುಳಿತ ಸಂತ್ರಸ್ತ ಯುವಕ, ಆಟೋ ಚಾಲಕನಿಗೆ ಯಾವುದಾದರೂ ರೂಮ್‌ ಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾನೆ.

ಇದನ್ನು ಓದಿ : BSNL Offers : ಪೂರ್ತಿ 425 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 850GB ಡೇಟಾದ ಮಸ್ತ್ ರಿಚಾರ್ಜ್ ಪ್ಲಾನ್.!

ನಗರದ ವಿವಿಧೆಡೆ ಸುತ್ತಾಡಿಸಿ, ತಡರಾತ್ರಿ ಬನ್ನೇರುಘಟ್ಟದ ಜಯದೇವ ಬಸ್‌ ಸ್ಟಾಪ್ ಸಮೀಪ ಆಟೋ ನಿಲ್ಲಿಸಿ ಇಲ್ಲೇ ಹತ್ತಿರದಲ್ಲೇ ರೂಮ್‌ ಇದೆ, ಹೋಗುವಂತೆ ಸುಹೈಲ್‌ ಹೇಳಿದ್ದಾನೆ. ಅಲ್ಲದೆ, ಫೋನ್‌ ಪೇ ಮೂಲಕ 900 ರೂ. ಬಾಡಿಗೆ ಪಡೆದಿದ್ದಾನೆ.

ಇತ್ತ ಮೂರು ಬೈಕ್‌ಗಳಲ್ಲಿ ಹಿಂಬಾಲಿಸುತ್ತಿದ್ದ ಇತರೆ ಆರೋಪಿಗಳು, ಆಟೋ ಇಳಿದು ಇವರಿಬ್ಬರೂ ಸ್ವಲ್ಪ ದೂರ ಹೋಗುತ್ತಿದ್ದಂತೆ ದಾಳಿ ನಡೆಸಿ, ಸಂತ್ರಸ್ತನ ಬಳಿಯಿದ್ದ 2 ಮೊಬೈಲ್‌, ಚಿನ್ನದ ಬಳೆ, ಸರ ಕಸಿದುಕೊಂಡಿದ್ದಾರೆ. ರೇಖಾಳ ಮೊಬೈಲ್‌ ಕೂಡ ಕಸಿದುಕೊಂಡು ಎಸ್ಕೇಪ್ ಆಗಿದ್ದಾರೆ.

ಇದನ್ನು ಓದಿ : Video : ಬೇರೊಬ್ಬಳೊಂದಿಗೆ ಸುತ್ತಾಟ ; ರೆಡ್ ಹ್ಯಾಂಡ್ಆಗಿ ಪ್ರೇಯಸಿಗೆ ಸಿಕ್ಕಿಬಿದ್ದ ಪ್ರೇಮಿ.!

ಈ ವೇಳೆ ಭಯವಾದಂತೆ ಡ್ರಾಮಾ ಮಾಡಿದ ಯುವತಿ,‌ ಈ ಜಾಗದಲ್ಲಿ ನಾನು ಇರುವುದಿಲ್ಲ ಎಂದು ಸ್ಥಳದಿಂದ ಕಾಲ್ಕಿತ್ತಿದ್ದಳು. ಇತ್ತ ಸಂತ್ರಸ್ತ ಯುವಕ ಠಾಣೆಗೆ ಬಂದು, ಯುವತಿಯ ವಿಚಾರ ಪ್ರಸ್ತಾಪಿಸದೆ, ರಾಬರಿ ಮಾಡಿದ ವಿಚಾರ ಸಂಬಂಧ ದೂರು ನೀಡಿದ್ದ ಎಂದು ತಿಳಿದು ಬಂದಿದೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!