ಜನಸ್ಪಂದನ ನ್ಯೂಸ್, ಬೆಂಗಳೂರು : ಶಾಲಾ ಕಟ್ಟಡದಿಂದ ಹಾರಿ 10 ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರದಲ್ಲಿರುವ ಶಾಸ್ತ್ರ ಗ್ಲೋಬಲ್ (Shastra Global School building) ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಕೆಳಗೆ ಬಿದ್ದ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿಯು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಅವನು ಚಿಕಿತ್ಸೆ ಫಲಕಾರಿಯಾಗದೆ ಗಂಭಿರವಾಗಿ ಗಾಯಗೊಂಡ (succumbed to his injuries) ಹಿನ್ನಲೆಯಲ್ಲಿ ಸಾವನ್ನಪ್ಪಿದ್ದಾನೆ.
ಮೃತ ವಿದ್ಯಾರ್ಥಿಯನ್ನು ಬಿಜೆಪಿ (BJP) ಶಾದ್‌ನಗರ ಪಟ್ಟಣ ಅಧ್ಯಕ್ಷ ಹರಿ ಭೂಷಣ್ ಅವರ ಮಗ ನೀರಜ್ ಎಂದು ಗುರುತಿಸಲಾಗಿದೆ. ನೀರಜ್ (Neeraj) ಮತ್ತು ಅವನ ಸ್ನೇಹಿತ ಬಾಲ್ಕನಿಯಲ್ಲಿ ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಮಾತನಾಡುತ್ತಿದ್ದಾಗ ಪ್ರಾಂಶುಪಾಲ (principal) ರು ಇಬ್ಬರನ್ನು ತನ್ನ ಕೋಣೆಗೆ ಕರೆದು ತೀವ್ರವಾಗಿ ಖಂಡಿಸಿದರು.
ಇದನ್ನು ಓದಿ : ನೀವೂ ಎಂದಾದರೂ ಭೂಮಿ ತಿರುಗುವುದನ್ನು ನೋಡಿದ್ದೀರಾ.? ಇಲ್ವಾ, ಹಾಗಾದರೆ ಈ Vedio ನೋಡಿ.!
ಇಷ್ಟಕ್ಕೆ ಆತ ಅಸಮಾಧಾನಗೊಂಡು ಶೌಚಾಲಯ (toilet) ಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದನು. ನಂತರ ನೇರವಾಗಿ ನೀರಜ್ ಕಟ್ಟಡವನ್ನು ಹತ್ತಿ ಮೊದಲ ಮಹಡಿಯಿಂದ ಹಾರಿದ್ದಾನೆ (jumped from the first floor).
ಪೊಲೀಸರ ಪ್ರಕಾರ, ಫೆಬ್ರವರಿ 5 ರ ಬುಧವಾರ ಸಂಜೆ 4 ಗಂಟೆಗೆ (incident took place at 4 pm on Wednesday, February 5) ಈ ಘಟನೆ ನಡೆದಿದೆ. ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದರೂ, ಚಿಕಿತ್ಸೆ ಪಡೆಯುತ್ತಿದ್ದಾಗ ನೀರಜ್ ಗಾಯಗೊಂಡು ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿಯ ಪೋಷಕರು ತಮ್ಮ ಮಗನ ಸಾವು ಶಾಲಾ ಆಡಳಿತ ಮಂಡಳಿ, ವಿಶೇಷವಾಗಿ ಶಾಲಾ ಪ್ರಾಂಶುಪಾಲರ ಚಿತ್ರಹಿಂಸೆ ಮತ್ತು ಕಿರುಕುಳ (torture and harassment) ದ ಪರಿಣಾಮವಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ : ಭಾರತೀಯ ಅಂಚೆ ಇಲಾಖೆಯಲ್ಲಿ ನೌಕರಿ ; ರೂ.19,900/- ಪ್ರತಿ ತಿಂಗಳು ವೇತನ.!
ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ (no case has been registered) ಎಂದು ತಿಳಿದು ಬಂದಿದೆ.
ప్రిన్సిపల్ తిట్టాడని పాఠశాల భవనం పై నుండి దూకి పదవ తరగతి విద్యార్థి ఆత్మహత్య
రంగారెడ్డి జిల్లా షాద్ నగర్ ప్రైవేట్
పాఠశాల భవనం పై నుండి దూకి పదవ తరగతి విద్యార్థి ఆత్మహత్యప్రిన్సిపల్ తిట్టాడని మనస్థాపన చెందిన విద్యార్థి నీరజ్
బీజేపీ షాద్ నగర్ పట్టణ అధ్యక్షుడు హరి భూషణ్… pic.twitter.com/uaNGgzCGmw
— Telugu Scribe (@TeluguScribe) February 5, 2025
ಹಿಂದಿನ ಸುದ್ದಿ : ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ಹುದ್ದೆ : ಅರ್ಜಿ ಸಲ್ಲಿಕೆ ಬಗ್ಗೆ ಮಹತ್ವದ Update.!
ಜನಸ್ಪಂದನ ನ್ಯೂಸ್, ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು (KPSC- Karnataka Public Service Commission) ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಕುರಿತು ಮಹತ್ವದ ಅಪ್‌ಡೇಟ್ ನೀಡಿದೆ.
ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದ ಸಂದರ್ಭ ತಾಂತ್ರಿಕ ಸಮಸ್ಯೆ (Technical problem) ಉಂಟಾದ ಕಾರಣ ಅರ್ಜಿ ಸಲ್ಲಿಕೆ ಮಾಡುವ ಅವಧಿ ವಿಸ್ತರಣೆ ಮಾಡುವಂತೆ ಕೋರಿದ್ದರು.
ಇದನ್ನು ಓದಿ : ಮದುವೆಯ ದಿನವೇ ವಧುವಿನ ಮೇಲೆ ಕೈ ಮಾಡಿದ PSI ; ವಿಡಿಯೋ ವೈರಲ್.!
ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ರಮಣದೀಪ್ ಚೌಧರಿ ಮಾಹಿತಿ ನೀಡಿದ್ದಾರೆ. ಅರ್ಜಿ ಸಲ್ಲಿಸುವ ಕಾಲಾವಧಿ ವಿಸ್ತರಣೆ ಮಾಡಲಾಗಿದ್ದು (application deadline has been extended), ಉಳಿದಂತೆ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದಿನಾಂಕ 20-0-2024ರ ಅಧಿಸೂಚನೆಯಲ್ಲಿ ಕೃಷಿ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಕೃಷಿ ಅಧಿಕಾರಿ 86 (Agricultural Officer 86) ಮತ್ತು ಸಹಾಯಕ ಕೃಷಿ ಅಧಿಕಾರಿ 586 ಹುದ್ದೆಗಳಿಗೆ (Assistant Agricultural Officer 586 posts) ಅರ್ಜಿ ಸಲ್ಲಿಕೆಯ ದಿನಾಂಕವನ್ನು 03-01-2025 ರಿಂದ 01-02-2025 ರವರೆಗೆ ಜಾರಿ ಮಾಡಲಾಗಿತ್ತು.
ಇದನ್ನು ಓದಿ : ಭಾರತೀಯ ಅಂಚೆ ಇಲಾಖೆಯಲ್ಲಿ ನೌಕರಿ ; ರೂ.19,900/- ಪ್ರತಿ ತಿಂಗಳು ವೇತನ.!
ಆದರೆ ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಯಾದ ಹಿನ್ನೆಲೆ ಕೆಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕಾಲಾವಧಿಯನ್ನು ವಿಸ್ತರಿಸುವಂತೆ ಕೋರಿಕೊಂಡಿದ್ದರು. ಆದ್ದರಿಂದ ಅಭ್ಯರ್ಥಿಗಳ ಹಿತದೃಷ್ಟಿಯಿಂದ (Interest of candidates) ಅರ್ಜಿ ಸಲ್ಲಿಕೆಯ ಪ್ರಾರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕಗಳನ್ನು 05-02-2025 ರಿಂದ 15-02-2025ರವರೆಗೆ ವಿಸ್ತರಿಸಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ವಿದ್ಯಾರ್ಹತೆ, ಮೀಸಲಾತಿ, ಅರ್ಜಿ ಶುಲ್ಕ, ವಯೋಮಿತಿ, ಇತ್ಯಾದಿ ವಿವರಗಳಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದಿನಾಂಕ 20-09-2024ರ ಅಧಿಸೂಚನೆಯನ್ನು ನೋಡಬಹುದು.
ಇದನ್ನು ಓದಿ : ಮೊದಲ ಗಂಡನಿಂದ ಡಿವೋರ್ಸ್ ಪಡೆಯದಿದ್ದರೂ 2ನೇ ಪತಿಯಿಂದ ಹೆಂಡತಿ ಜೀವನಾಂಶ ಪಡೆಯಬಹುದು : ಸುಪ್ರೀಂ ಕೋರ್ಟ್
ಇನ್ನೂ ಅರ್ಜಿ ಸಲ್ಲಿಕೆ ಮಾಡಲು ಕನಿಷ್ಠ ವಯೋಮಿತಿ 18 ವರ್ಷಗಳು, ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆ 38 ವರ್ಷಗಳು, ಪ್ರವರ್ಗ 2ಎ/ 2ಬಿ/ 3ಎ/ 3ಬಿ 41 ವರ್ಷಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 43 ವರ್ಷಗಳು.
ವಿದ್ಯಾರ್ಹತೆಯ ವಿವರ, ಹೆಚ್ಚಿನ ಮಾಹಿತಿ, ಅಧಿಸೂಚನೆಗಾಗಿ ಅಭ್ಯರ್ಥಿಗಳು https://kpsc.kar.nic.in/ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ವಿಭಾಗದಲ್ಲಿ notification for the post of AO and AAO In the department of Agriculture(RPC) ಮೇಲೆ ಕ್ಲಿಕ್ ಮಾಡಿ.
Disclaimer : The above given information is available On online, candidates should check it properly before applying. This is for information only.