ಜನಸ್ಪಂದನ ನ್ಯೂಸ್, ಡೆಸ್ಕ್ : ಕಳ್ಳತನ ಮಾಡುವವರು ಕತ್ತಲೆಯಲ್ಲಿ ಕಳ್ಳ ಬೆಕ್ಕಿನಂತೆ ಹೆಜ್ಜೆ ಇಡುತ್ತ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಕದ್ದುಕೊಂಡು ಬರುತ್ತಾರೆ. ಆದರೆ ತೆಲಂಗಾಣದ ಮೇದಕ್ ಜಿಲ್ಲೆಯಿಂದ (Medak district of Telangana) ಕಳ್ಳತನದ ವಿಚಿತ್ರ ಘಟನೆಯೊಂದು ನಡೆದಿದೆ.
ಕಳ್ಳನೋರ್ವ ಮದ್ಯದಂಗಡಿಗೆ ಕದಿಯಲು ಹೋಗಿ ಮದ್ಯ ಸೇವಿಸಿ ಅಲ್ಲಿಯೇ ನಿದ್ರೆಗೆ ಜಾರಿದ ಘಟನೆ ಮೇದಕ್ ಜಿಲ್ಲೆಯ ನರಸಿಂಗ್ ಮಂಡಲದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ನರಸಿಂಗಿ ಮಂಡಲ ಕೇಂದ್ರದ ವೈನ್ ಶಾಪ್ ನ ಮ್ಯಾನೇಜರ್ ರಾತ್ರಿ ಕೆಲಸ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದರು. ಮದ್ಯದಂಗಡಿಗೆ (Liquor store) ನುಗ್ಗಿದ ವ್ಯಕ್ತಿ, ಹಣ ಹಾಗೂ ಮದ್ಯದ ಬಾಟಲಿಗಳನ್ನೆಲ್ಲ ಪ್ಯಾಕ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!
ಆದರೆ ಅಂಗಡಿಯಿಂದ ಹೊರಗೆ ಬರಬೇಕು ಎನ್ನುವಷ್ಟರಲ್ಲಿ ಮದ್ಯದ ಬಾಟಲಿಗಳನ್ನು ನೋಡಿ ಅದೇನಾಯ್ತೋ ಗೊತ್ತಿಲ್ಲ. ಹೇಗಾದ್ರೂ ಯಾರು ಇಲ್ಲ, ಆರಾಮವಾಗಿ ಕುಳಿತು ಕುಡಿದು ಹೋಗೋಣ ಅಂತ ಅಲ್ಲಿಯೇ ಮದ್ಯ ಸೇವಿಸಲು ಆರಂಭಿಸಿದ್ದಾನೆ.
ಯಾರೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಪುಕ್ಸಟ್ಟೆ ಸಿಕ್ಕಿದೆಯಂತಾ ಅತಿಯಾಗಿ ಮದ್ಯ ಸೇವಿಸಿ ನಶೆಯಲ್ಲಿ ಪ್ರಜ್ಞೆ ತಪ್ಪಿ (lose consciousness) ಅಲ್ಲೇ ಮಲಗಿದ್ದಾನೆ.
ಇದಾದ ಬಳಿಕ ಬೆಳಗ್ಗೆ ಅಂಗಡಿ ಸಿಬ್ಬಂದಿಗಳು ಬಂದು ಆತನನ್ನು ಹಿಡಿದಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಅಂಗಡಿಗೆ ಕಳ್ಳ ನುಗ್ಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಿಂದಿನ ಸುದ್ದಿ : ಹಣ ಪಡೆದ ಆರೋಪ ; ರೈಲ್ವೆ ಟಿಕೆಟ್ ಮುಖ್ಯ ಇನ್ಸ್‌ಪೆಕ್ಟರ್ ಅರೆಸ್ಟ್.!
ಜನಸ್ಪಂದನ ನ್ಯೂಸ್, ಬೆಂಗಳೂರು : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು (To clear competitive exams) ಸಹಾಯ ಮಾಡುತ್ತೇನೆ ಎಂದು ಹೇಳಿ ಅಭ್ಯರ್ಥಿಗಳಿಂದ 50 ಲಕ್ಷ ರೂ. ವಸೂಲಿ ಮಾಡಿದ ಆರೋಪದ ಮೇಲೆ ಪೊಲೀಸರು ರೈಲ್ವೆ ಟಿಕೆಟ್ ಮುಖ್ಯ ಇನ್‌ಸ್ಪೆಕ್ಟರ್‌ನನ್ನು (Chief Inspector of Railway Tickets) ಅರೆಸ್ಟ್ ಮಾಡಿದ ಘಟನೆ ನಡೆದಿದೆ.
ರೈಲ್ವೆ ಟಿಕೆಟ್ ಮುಖ್ಯ ಇನ್‌ಸ್ಪೆಕ್ಟರ್ ಗೋವಿಂದರಾಜು (49) ಬಂಧಿತ ಆರೋಪಿ ಎಂದು ತಿಳಿದು ಬಂದಿದ್ದು, ಈತ ನೈಋತ್ಯ ರೈಲ್ವೆಯಲ್ಲಿ ರೈಲ್ವೆ ಟಿಕೆಟ್ ಮುಖ್ಯ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!
ಘಟನೆಯ ಹಿನ್ನೆಲೆ :
ಸ್ಪರ್ಧಾತ್ಮಕ ಪರೀಕ್ಷೆಗಳಾದ ಗ್ರಾಮ ಲೆಕ್ಕಾಧಿಕಾರಿ (Village Accountant), ಕೆಎಎಸ್ ಮತ್ತು ಪಿಡಿಒ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳನ್ನು ಮಧ್ಯವರ್ತಿಗಳ (the mediator) ಮೂಲಕ ಈ ಗೋವಿಂದರಾಜು ಸಂಪರ್ಕಿಸುತ್ತಿದ್ದರು.
ಬಳಿಕ ಹಣ ನೀಡಿದರೆ ಪರೀಕ್ಷೆಯಲ್ಲಿ ಪಾಸ್ ಆಗಲು ಸಹಾಯ ಮಾಡುವುದಾಗಿ ಭರವಸೆ ನೀಡುತ್ತಿದ್ದರು. ಪಿಡಿಒ ಹುದ್ದೆಗಳಿಗೆ 25 ಲಕ್ಷ ಮತ್ತು ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ (Preliminary examination) 50 ಲಕ್ಷ ರೂ. ನಿಗದಿ ಮಾಡಿದ್ದಾಗಿ ತಿಳಿದು ಬಂದಿದೆ.
ಈ ಬಗ್ಗೆ ಸುಳಿವು (clue) ದೊರೆತ ಮೇಲೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಈ ಮಾಹಿತಿ ದೃಢೀಕರಿಸಿ (Confirm) ಆರೋಪಿಗಳನ್ನು ಪತ್ತೆ ಹಚ್ಚಿ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿತ್ತು.
ಇದನ್ನು ಓದಿ : Special news : ಗುಡ್ಡದಂತ ಸಮಸ್ಯೆ ಬಂದರೂ ಎಳ್ಳಷ್ಟು ಹೆದರಿಕೊಳ್ಳದವರಿಗೆ ಧೈರ್ಯ, ವಿಶ್ವಾಸ ಬರೋದೆಲ್ಲಿಂದ.?
ಅಂತೆಯೇ ಡಿಸೆಂಬರ್ 28ರಂದು ರಾತ್ರಿ ವೇಳೆ ರಮೇಶ್ ಎಂಬುವವರ ಮನೆಯಲ್ಲಿ ಆರೋಪಿ ಗೋವಿಂದರಾಜು ಇರುವುದು ಗೊತ್ತಾಗಿದೆ. ಈ ರಮೇಶ್ ಅವರ ಮಗಳು ಕೆಎಎಸ್ ಪರೀಕ್ಷೆಗೆ ಹಾಜರಾಗಬೇಕಿತ್ತು. ಪರೀಕ್ಷೆಯಲ್ಲಿ ತೇರ್ಗಡೆಯಾಗಲು (to pass) ಸಹಾಯ ಮಾಡುವ ಕುರಿತು ಚರ್ಚಿಸಲು ಗೋವಿಂದರಾಜು ಅಲ್ಲಿಗೆ ಭೇಟಿ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.
ರಮೇಶ್ ಅವರ ಮನೆಗೆ ಬಂದ ಪಿಎಸ್‌ಐ ಭೀಮಾಶಂಕರ್ ಮತ್ತು ಹೆಡ್ ಕಾನ್ಸ್‌ಟೇಬಲ್ ಗಿರೀಶ್ ಕುಮಾರ್, ಗೋವಿಂದರಾಜುನನ್ನು ಫಾಲೋ ಮಾಡಿ ಬಳಿಕ ಬಂಧಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯ ಬಳಿ ನಾಲ್ಕು ಮೊಬೈಲ್ ಫೋನ್‌ಗಳು ಇರುವುದು ಕಂಡುಬಂದಿದೆ. ಆತನ ಫೋನ್‌ಗಳಲ್ಲಿ ಒಂದನ್ನು ಪರಿಶೀಲಿಸಿದಾಗ, ಅದರಲ್ಲಿ 46 ಹೆಸರುಗಳು ಮತ್ತು ಇತರ ದಾಖಲೆಗಳು ಪತ್ತೆಯಾಗಿವೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇದನ್ನು ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ Green signal.!
ಹೆಚ್ಚಿನ ತನಿಖೆಗಾಗಿ ಅವರನ್ನು ಠಾಣೆಗೆ ಕರೆದೊಯ್ಯಲಾಗಿದೆ ಮತ್ತು ವಿಚಾರಣೆ ವೇಳೆ 2018ರಲ್ಲಿ ಸಿಸಿಬಿ ಕಚೇರಿಯಲ್ಲಿ ದಾಖಲಾಗಿರುವ ಪರೀಕ್ಷಾ ವಂಚನೆ (Exam cheating) ಪ್ರಕರಣದಲ್ಲಿ ಈತ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಒಎಂಆರ್ ಶೀಟ್‌ನಲ್ಲಿ ನಿಮಗೆ ಗೊತ್ತಿರುವ ಉತ್ತರಗಳನ್ನು ಭರ್ತಿ ಮಾಡಿ, ಉಳಿದವುಗಳನ್ನು ಹಾಗೆ ಬಿಟ್ಟು ಬಿಡಿ. ನಂತರ ನಾವು ಕರೆಕ್ಟ್ ಉತ್ತರಗಳನ್ನು ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಆರೋಪಿಯು ಅಭ್ಯರ್ಥಿಗಳ ಪ್ರಮಾಣಪತ್ರಗಳು, ಪ್ರವೇಶ ಕಾರ್ಡ್‌ಗಳು ಮತ್ತು ಚೆಕ್‌ಗಳನ್ನು ಸಂಗ್ರಹಿಸುತ್ತಿದ್ದ ಎಂದು ತಿಳಿದು ಬಂದಿದೆ.