Monday, January 20, 2025
HomeNewsಲೆಕ್ಚರರ್ ಜೊತೆ Student ಎಸ್ಕೇಪ್.!
spot_img
spot_img
spot_img
spot_img

ಲೆಕ್ಚರರ್ ಜೊತೆ Student ಎಸ್ಕೇಪ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರು ಜಿಲ್ಲೆಯ ಹುಣಸೂರು (Hunsuru in Mysore district) ಪಟ್ಟಣದ ಖಾಸಗಿ ಕಾಲೇಜೊಂದರಲ್ಲಿ ಲೆಕ್ಚರರ್ ಹಾಗೂ ವಿದ್ಯಾರ್ಥಿನಿ (lecture and student) ಓಡಿಹೋದ ಘಟನೆ ನಡೆದಿದೆ.

24 ವರ್ಷದ ವಿದ್ಯಾರ್ಥಿನಿಯೊಂದಿಗೆ 39 ವರ್ಷದ ಲೆಕ್ಚರರ್ ಪರಾರಿಯಾಗಿದ್ದಾನೆ (escape) ಎಂದು ತಿಳಿದು ಬಂದಿದೆ.

ಇಬ್ಬರ ಲವ್ ಸ್ಟೋರಿ ವಿದ್ಯಾರ್ಥಿನಿಯ ಮನೆಯವರಿಗೆ ಗೊತ್ತಾಗಿದ್ದು, ಅವರು ಇದನ್ನು ಇಲ್ಲಿಗೆ ನಿಲ್ಲಿಸು, ಲೆಕ್ಚರರ್ ಸಹವಾಸ ಬಿಟ್ಟುಬಿಡು ಎಂದು ತಿಳಿಸಿ ಹೇಳಿದ್ದರು. ಅಲ್ಲದೇ ಆಕೆಯನ್ನು ಹೊರಗೆ ಹೋಗಲು ಬಿಡುತ್ತಿರಲಿಲ್ಲ.

ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!

ಆದರೆ ಡಿ. 26 ರಂದು ಯುವತಿಯು ಸರ್ಟಿಫಿಕೇಟ್ ತರುವುದಾಗಿ ಹೇಳಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ ಎನ್ನಲಾಗಿದೆ.

ಇತ್ತ ಪೋಷಕರು ಮಗಳ ವಿದ್ಯಾಭ್ಯಾಸಕ್ಕಾಗಿ ಕೈತುಂಬಾ ಸಾಲ (Huge loan for daughter’s education) ಮಾಡಿಕೊಂಡಿದ್ದಾರೆ. ಆದರೆ, ಮಗಳು ಲೆಕ್ಚರರ್‌ ಜೊತೆ ಪ್ರೀತಿ ಗೀತಿ ಅಂತ ಮನೆ ಬಿಟ್ಟು ಹೋಗಿದ್ದಾಳೆ. ಇದರಿಂದ ತೀವ್ರ ಮನನೊಂದ ಯುವತಿಯ ತಂದೆ ಹಾಸಿಗೆ ‌ಹಿಡಿದಿದ್ದಾರೆ.

ಇದನ್ನು ಓದಿ : ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಪ್ರಕರಣದ ಆರೋಪಿ ಜಯೇಶ್‌ ಹಿಂಡಲಗಾ ಜೈಲಲ್ಲೇ ಆತ್ಮಹತ್ಯೆಗೆ ಯತ್ನ.!

ಯುವತಿಯು, ನಮಗೆ ತೊಂದರೆ ಕೊಡಬೇಡಿ, ನಾವು ಮದುವೆ ಆಗಿದ್ದೀವಿ ಎಂದು ತನ್ನ ಪೋಷಕರಿಗೆ ವಾಟ್ಸಾಪ್‌ ಮೆಸೇಜ್ ಕಳುಹಿಸಿದ್ದಾಳೆ. ಇದರಿಂದ ಪೋಷಕರು ಕಂಗಾಲಾಗಿದ್ದು, ಈ ಬಗ್ಗೆ ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಹಿಂದಿನ ಸುದ್ದಿ : ಎಣ್ಣೆಗಾಗಿ ಬಾರ್ ಕಳ್ಳತನಕ್ಕೆ ಹೋದ ; ಮುಂದಾದದ್ದು ಮಾತ್ರ ವಿಚಿತ್ರ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಕಳ್ಳತನ ‌ಮಾಡುವವರು ಕತ್ತಲೆಯಲ್ಲಿ ಕಳ್ಳ ಬೆಕ್ಕಿನಂತೆ ಹೆಜ್ಜೆ ಇಡುತ್ತ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಕದ್ದುಕೊಂಡು ಬರುತ್ತಾರೆ. ಆದರೆ ತೆಲಂಗಾಣದ ಮೇದಕ್ ಜಿಲ್ಲೆಯಿಂದ (Medak district of Telangana) ಕಳ್ಳತನದ ವಿಚಿತ್ರ ಘಟನೆಯೊಂದು ನಡೆದಿದೆ.

ಕಳ್ಳನೋರ್ವ ಮದ್ಯದಂಗಡಿಗೆ ಕದಿಯಲು ಹೋಗಿ ಮದ್ಯ ಸೇವಿಸಿ ಅಲ್ಲಿಯೇ ನಿದ್ರೆಗೆ ಜಾರಿದ ಘಟನೆ ಮೇದಕ್ ಜಿಲ್ಲೆಯ ನರಸಿಂಗ್ ಮಂಡಲದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ನರಸಿಂಗಿ ಮಂಡಲ ಕೇಂದ್ರದ ವೈನ್‌ ಶಾಪ್ ನ ಮ್ಯಾನೇಜರ್ ರಾತ್ರಿ ಕೆಲಸ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದರು. ಮದ್ಯದಂಗಡಿಗೆ (Liquor store) ನುಗ್ಗಿದ ವ್ಯಕ್ತಿ, ಹಣ ಹಾಗೂ ಮದ್ಯದ ಬಾಟಲಿಗಳನ್ನೆಲ್ಲ ಪ್ಯಾಕ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!

ಆದರೆ ಅಂಗಡಿಯಿಂದ ಹೊರಗೆ ಬರಬೇಕು ಎನ್ನುವಷ್ಟರಲ್ಲಿ ಮದ್ಯದ ಬಾಟಲಿಗಳನ್ನು ನೋಡಿ ಅದೇನಾಯ್ತೋ ಗೊತ್ತಿಲ್ಲ. ಹೇಗಾದ್ರೂ ಯಾರು ಇಲ್ಲ, ಆರಾಮವಾಗಿ ಕುಳಿತು ಕುಡಿದು ಹೋಗೋಣ ಅಂತ ಅಲ್ಲಿಯೇ ಮದ್ಯ ಸೇವಿಸಲು ಆರಂಭಿಸಿದ್ದಾನೆ.

ಯಾರೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಪುಕ್ಸಟ್ಟೆ ಸಿಕ್ಕಿದೆಯಂತಾ ಅತಿಯಾಗಿ ಮದ್ಯ ಸೇವಿಸಿ ನಶೆಯಲ್ಲಿ ಪ್ರಜ್ಞೆ ತಪ್ಪಿ (lose consciousness) ಅಲ್ಲೇ ಮಲಗಿದ್ದಾನೆ.

ಇದನ್ನು ಓದಿ : Weather : ನಾಳೆಯಿಂದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆಯಿಂದ ಮುನ್ಸೂಚನೆ.!

ಇದಾದ ಬಳಿಕ ಬೆಳಗ್ಗೆ ಅಂಗಡಿ ಸಿಬ್ಬಂದಿಗಳು ಬಂದು ಆತನನ್ನು ಹಿಡಿದಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಅಂಗಡಿಗೆ ಕಳ್ಳ ನುಗ್ಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!