ಜನಸ್ಪಂದನ ನ್ಯೂಸ್, ಡೆಸ್ಕ್ : ಸಬ್ ಇನ್ಸ್ಪೆಕ್ಟರ್, ಲೇಡಿ ಕಾನ್‌ಸ್ಟೆಬಲ್ ಹಾಗೂ ಯುವಕನೋರ್ವ ಕೆರೆಗೆ ಹಾರಿ (Jump into the lake) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಘಟನೆ ಈಗ ತೆಲಂಗಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ (Kamareddy District of Telangana) ಭಿಕ್ಕುನೂರಿನಲ್ಲಿ ಕೆಲಸ ಮಾಡುತ್ತಿರುವ ಸಬ್ ಇನ್ಸ್ಪೆಕ್ಟರ್ ಸಾಯಿಕುಮಾರ್, ಬೀಬಿಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ Constable ಶೃತಿ (33) ಹಾಗೂ ಕಂಪ್ಯೂಟರ್ ಆಪರೇಟರ್ ನಿಖಿಲ್ (29) ಆತ್ಮಹತ್ಯೆಗೆ ಶರಣಾದ (suicide) ಘಟನೆ ತೀವ್ರ ಸಂಚಲನಕ್ಕೆ (Severe agitation) ಕಾರಣವಾಗಿದೆ.
Read it : ಸಚಿವ ಖರ್ಗೆ ಆಪ್ತನಿಂದ ಜೀವ ಬೆದರಿಕೆ ಆರೋಪ ; ಗುತ್ತಿಗೆದಾರ ರೈಲಿಗೆ ತಲೆ ಕೊಟ್ಟು Suicide.!
ಈ ಮೂವರು ಕೆರೆಗೆ ಹಾರಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಜಿಲ್ಲಾಸ್ಪತ್ರೆ ಸಮೀಪದ ರಾಷ್ಟ್ರೀಯ ಹೆದ್ದಾರಿ (national highway) ಸಂಖ್ಯೆ 44ರ ಅಡ್ಲೂರು ಎಲ್ಲರೆಡ್ಡಿ ಕೆರೆ ಸಮೀಪ sub-inspector ಸಾಯಿಕುಮಾರ್ ಅವರ ಕಾರು ಪತ್ತೆಯಾಗಿತ್ತು. ಅಲ್ಲದೆ, ಅದೇ ಕೆರೆಯ ಬಳಿ ಚಪ್ಪಲಿ (Slipper’s) ಸಿಕ್ಕ ಹಿನ್ನೆಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು.
Read it : Special news : ಗುಡ್ಡದಂತ ಸಮಸ್ಯೆ ಬಂದರೂ ಎಳ್ಳಷ್ಟು ಹೆದರಿಕೊಳ್ಳದವರಿಗೆ ಧೈರ್ಯ, ವಿಶ್ವಾಸ ಬರೋದೆಲ್ಲಿಂದ.?
ನಿನ್ನೆ ಸಂಜೆಯಿಂದಲೇ ಮೃತ ದೇಹಗಳಿಗಾಗಿ (dead bodies) ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಲೈಫ್ ಗಾರ್ಡ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಮೃತ ದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಗುರುವಾರ (ಡಿ.26) ಬೆಳಗ್ಗೆ, ಕಾನ್‌ಸ್ಟೆಬಲ್ ಶೃತಿ ಮತ್ತು ಯುವಕ ನಿಖಿಲ್ ಶವ ಪತ್ತೆಯಾಗಿದೆ. ಸದ್ಯ ಎಸ್‌ಐ ಸಾಯಿಕುಮಾರ್ ಶವವನ್ನು ಹೊರತೆಗೆಯಲಾಗಿದೆ.
ನಿನ್ನೆ (ದಿ.25) ಬುಧವಾರ ಮಧ್ಯಾಹ್ನ 3 ಗಂಟೆಯಿಂದ SI ಸಾಯಿಕುಮಾರ್ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಶೃತಿ ಮತ್ತು ಸಾಯಿಕುಮಾರ್ ಅವರ mobile phoneಗಳು ಮತ್ತು ಶವಗಳು ಕೆರೆ ಬಳಿ ಪತ್ತೆಯಾಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
Read it : ಭಾರತೀಯ ರೈಲ್ವೆ ಇಲಾಖೆಯಲ್ಲಿ 50,000 ಕ್ಕೂ ಹೆಚ್ಚು ಗ್ರೂಪ್ ಡಿ ಹುದ್ದೆಗಳ ನೇಮಕಾತಿ.!
ಇದೀಗ SI ಸಾಯಿಕುಮಾರ್, ಕಾನ್‌ಸ್ಟೆಬಲ್ ಶ್ರುತಿ ಮತ್ತು ಆಪ್ತ ಸಿಬ್ಬಂದಿ ನಿಖಿಲ್ ಸೇರಿದಂತೆ ಮೂರು ಮೊಬೈಲ್ ಫೋನ್‌ಗಳು ಪೊಲೀಸರಿಗೆ ಸಿಕ್ಕಿವೆ ಎನ್ನಲಾಗುತ್ತಿದೆ.
ಈಗ SI, ಮಹಿಳಾ ಪೇದೆ ಹಾಗೂ ಯುವಕ ಒಟ್ಟಿಗೆ ಕೆರೆಗೆ ಹಾರಿದ್ರಾ? ಅವರೇಕೆ ಆತ್ಮಹತ್ಯೆ ಮಾಡಿಕೊಂಡರು? ಅವರ ನಡುವೆ ಏನಾದರೂ ಜಗಳ ಆಗಿದೆಯಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದು (Questions arose) ತನಿಖೆ ಆರಂಭವಾಗಿದೆ.