Wednesday, February 5, 2025
HomeCrime Newsಸಚಿವ ಖರ್ಗೆ ಆಪ್ತನಿಂದ ಜೀವ ಬೆದರಿಕೆ ಆರೋಪ ; ಗುತ್ತಿಗೆದಾರ ರೈಲಿಗೆ ತಲೆ ಕೊಟ್ಟು Suicide.!
spot_img
spot_img
spot_img
spot_img

ಸಚಿವ ಖರ್ಗೆ ಆಪ್ತನಿಂದ ಜೀವ ಬೆದರಿಕೆ ಆರೋಪ ; ಗುತ್ತಿಗೆದಾರ ರೈಲಿಗೆ ತಲೆ ಕೊಟ್ಟು Suicide.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿ ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನಲ್ಲಿ ಸಚಿವ ಪ್ರಿಯಾಂಕ್​​ ಖರ್ಗೆ ಅವರ ಬಲಗೈ ಬಂಟ, ಆಪ್ತ ಎನ್ನಲಾದ ಮಾಜಿ ಕಾರ್ಪೋರೇಟರ್ ರಾಜು ಕಪನೂರ್​ ಅವರಿಂದ ಗುತ್ತಿಗೆದಾರನಿಗೆ (contractor) ಕೊಲೆ ಬೆದರಿಕೆ ಆರೋಪದ ಹಿನ್ನೆಲೆ ಜೀವ ಬೆದರಿಕೆಯಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಏಳು ಪುಟಗಳ ಡೆತ್​ನೋಟ್​ ಬರೆದಿಟ್ಟು (A seven-page death note was written) ಕಟ್ಟಿತೂಂಗಾವ್ ಗ್ರಾಮದ ಗುತ್ತಿಗೆದಾರ ಸಚಿನ್ (26) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Read it : Special news : ಗುಡ್ಡದಂತ ಸಮಸ್ಯೆ ಬಂದರೂ ಎಳ್ಳಷ್ಟು ಹೆದರಿಕೊಳ್ಳದವರಿಗೆ ಧೈರ್ಯ, ವಿಶ್ವಾಸ ಬರೋದೆಲ್ಲಿಂದ.?

ರೈಲ್ವೆ ಟ್ರ್ಯಾಕ್ ನಲ್ಲಿ ಸಚಿನ್​ ರುಂಡ- ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇನ್ನು ಡೆತ್​ ನೋಟ್​ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಾಜು ಕಪನೂರು ವಿರುದ್ಧ ಆರೋಪಗಳನ್ನು ಉಲ್ಲೇಖಿಸಲಾಗಿದೆ.

Read it : ಭಾರತೀಯ ರೈಲ್ವೆ ಇಲಾಖೆಯಲ್ಲಿ 50,000 ಕ್ಕೂ ಹೆಚ್ಚು ಗ್ರೂಪ್ ಡಿ ಹುದ್ದೆಗಳ ನೇಮಕಾತಿ.!

ರಾಜು ಕಪನೂರು ವಿರುದ್ಧ 15 ಲಕ್ಷಕ್ಕೂ ಹೆಚ್ಚು ಹಣ ಪಡೆದು ಟೆಂಡರ್ ನೀಡದೆ ವಂಚನೆ ಮಾಡಿದ್ದು, 1 ಕೋಟಿ ರೂ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸದ್ಯ ಪೊಲೀಸರು ಸಚಿನ್ ಮೃತದೇಹವನ್ನು ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಬೀದರ್ ರೈಲ್ವೆ ಪೊಲೀಸ್ (Bidar Police Station) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!