ಜನಸ್ಪಂದನ ನ್ಯೂಸ್, ಡೆಸ್ಕ್ : ಶಬರಿಮಲೆಯಲ್ಲಿ ಕರ್ನಾಟಕದ (Karnataka) ಭಕ್ತರೊಬ್ಬರು ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ ಹಾರಿ ಆತ್ಮಹತ್ಯೆಗೆ ಶರಣಾದ (suicide attempt) ಘಟನೆ ಸೋಮವಾರ ತಡರಾತ್ರಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಸಾವಿಗೀಡಾದ ಅಯ್ಯಪ್ಪ ಸ್ವಾಮಿಯ ಭಕ್ತ ಕರ್ನಾಟಕದ ಕನಕಪುರದ (Kanakapur) ನಿವಾಸಿ ಕುಮಾರಸ್ವಾಮಿ (40) ಎಂದು ತಿಳಿದು ಬಂದಿದೆ.
ಶಬರಿಮಲೆಯಲ್ಲಿ ಎಲ್ಲ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭಕ್ತನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇದನ್ನು ಓದಿ : Video : ಮೆಟ್ರೋ ನಿಲ್ದಾಣದಲ್ಲಿ ಲಿಪ್ ಟು ಲಿಪ್ ಕಿಸ್ ಮಾಡುತ್ತ ನಿಂತ ಜೊಡಿ ; ಸಾರ್ವಜನಿಕರು ಶಾಕ್.!
ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ (Hall of ghee anointing counters) ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಭಕ್ತ ಶಬರಿಮಲೆಯ ತುಪ್ಪದ ಅಭಿಷೇಕ ಕೌಂಟರ್ ಗಳ ಮಂಟಪದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಾಗ ಅಲ್ಲಿದ್ದವರು ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ (local hospital) ಕರೆದೊಯ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನು ಓದಿ : Hubli : ಇನ್ಸ್‌ಪೆಕ್ಟರ್‌ನಿಂದ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ.?
ಕುಮಾರಸ್ವಾಮಿ ಖಿನ್ನತೆಯಿಂದ (depression) ಬಳಲುತ್ತಿದ್ದು, ಈ ಹಿನ್ನೆಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
శబరిమలలోని నెయ్యాభిషేకం కౌంటర్ల మండపంపై నుంచి దూకి ఆత్మహత్యయత్నం చేసిన ఓ భక్తుడు.. ఘటనకు సంబంధించిన పూర్తి వివరాలు తెలియాల్సి వుంది.
A devotee in Sabarimala attempted suicide by jumping from the top of the Neyyabhishekam counters.#sabarimala #shabarimala pic.twitter.com/caTrhftZAK
— Telugu Scribe (@TeluguScribe) December 16, 2024