Sunday, December 22, 2024
HomeNewsಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದ Goa ಪೊಲೀಸ್ ಅಧಿಕಾರಿ.!
spot_img

ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದ Goa ಪೊಲೀಸ್ ಅಧಿಕಾರಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಹುಬ್ಬಳ್ಳಿ‌ (Hubli) ನಗರದಲ್ಲಿ ಪೊಲೀಸ್​ ಅಧಿಕಾರಿಯೊಬ್ಬ ನಟೋರಿಯಸ್​ ಕ್ರಿಮಿನಲ್​ (Notorious criminal) ಒಬ್ಬನನ್ನು ಜೈಲಿನಿಂದ ಪರಾರಿಯಾಗುವಂತೆ ಮಾಡಿ, ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

ಬಂಧಿತನನ್ನು (arrested) ಅಮಿತ್​​ ನಾಯಕ್ ಎಂದು ತಿಳಿದು ಬಂದಿದೆ. ಈತ ಗೋವಾ ಕ್ರೈಂ ಬ್ರ್ಯಾಂಚ್​ನಲ್ಲಿ (In Goa Crime Branch) ಕೆಲಸ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.

ಇದನ್ನು ಓದಿ : ಟ್ಯಾಂಕ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ Engineer.!

ಪೊಲೀಸ್ ಅಧಿಕಾರಿ ಅಮಿತ್​​ ನಾಯಕ್ ನಟೋರಿಯಸ್​ ಕ್ರಿಮಿನಲ್​ ಸುಲೇಮಾನ್​ ಸಿದ್ದಿಕ್ಕಿ ಎಂಬಾತನನ್ನು ಜೈಲಿನಿಂದ ಎಸ್ಕೇಪ್​ ಮಾಡಿಸಿದ್ದು (He escaped from jail), ಬಳಿಕ ಆತನೊಂದಿಗೆ ಹುಬ್ಬಳ್ಳಿಗೆ ಬಂದಿದ್ದ.

ಸುಲೇಮಾನ್​ ವಿರುದ್ಧ ಪುಣೆ, ಹೈದರಾಬಾದ್, ಗೋವಾ, ದೆಹಲಿಯಲ್ಲಿ ಭೂ ಮಾಫಿಯಾ, ಕೊಲೆ‌ ಯತ್ನ, ಬೆದರಿಕೆ, ವಂಚನೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

ಸದ್ಯ ಈತನನ್ನು ಗೋವಾದ ಕಾರಾಗೃಹದಲ್ಲಿ ಇರಿಸಲಾಗಿತ್ತು. ಹತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿದ್ದ ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿಯನ್ನು ಅರೆಸ್ಟ್ ಮಾಡಿ ಗೋವಾ ಪೊಲೀಸರು ಕಂಬಿ ಹಿಂದೆ ತಳ್ಳಿದ್ದರು. ಈತನ ಕಾವಲಿಗೆ ಅಮಿತ್​ನನ್ನು ನೇಮಿಸಲಾಗಿತ್ತು.

ಇದನ್ನು ಓದಿ : KSFES : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಆದರೆ, ಕಾವಲಿಗಿದ್ದ (was on guard) ಅಮಿತ್, ಸುಲೇಮಾನ್ ಸಿದ್ದಿಕಿಯನ್ನು ಶುಕ್ರವಾರ (ಡಿ.13) ಮಧ್ಯರಾತ್ರಿ ಕಸ್ಟಡಿಯಿಂದ ಎಸ್ಕೇಪ್​ ಮಾಡಿಸಿ ಬಳಿಕ ಆರೋಪಿಯೊಂದಿಗೆ ತಾನೂ ಕೂಡ ಪರಾರಿಯಾಗಿದ್ದ.

ತಲೆಮಾರಿಸಿಕೊಳ್ಳಲು ಹುಬ್ಬಳ್ಳಿಗೆ ಬಂದಿದ್ದ ವಿಚಾರ ತಿಳಿದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಅಮಿತ್​ನನ್ನು ಬಂಧಿಸಿದ್ದಾರೆ. ಆರೋಪಿ ಸಿದ್ದಿಕ್ಕಿ ಪರಾರಿಯಾಗಿದ್ದು, ಆತನ ಶೋಧ ಕಾರ್ಯ ನಡೆದಿದೆ.

ಹಿಂದಿನ ಸುದ್ದಿ : ಪತ್ನಿ ಮತ್ತು ಮಾವನ ಕಿರುಕುಳ; ರೈಲಿಗೆ ತಲೆಕೊಟ್ಟು ಹೆಡ್ ಕಾನ್ಸಟೇಬಲ್ ಆತ್ಮಹತ್ಯೆ.!

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಹುಸಗೂರು ರೈಲ್ವೆ ಗೇಟ್ (Husaguru Railway Gate) ಬಳಿ ಹೆಂಡತಿ ಕಾಟಕ್ಕೆ ಬೇಸತ್ತು ಪೊಲೀಸ್ ಹೆಡ್ ಕಾನ್ಸಟೇಬಲ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ (ಶುಕ್ರವಾರ) 10: 45 ರ ಸುಮಾರಿಗೆ ನಡೆದಿದೆ.

ಇದನ್ನು ಓದಿ : ಹಾಸ್ಟೆಲ್‌ನಲ್ಲಿ ಹುಟ್ಟುಹಬ್ಬಕ್ಕೆ ಸ್ನೇಹಿತನಿಗೆ ಚಿತ್ರಹಿಂಸೆ ; ಎಂದೂ ನೋಡಿರದ Video ವೈರಲ್.!

ಹೆಡ್ ಕಾನ್ಸಟೇಬಲ್ ತಿಪ್ಪಣ್ಣ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪೇದೆ (Head Constable of Hulimavu Police Station) ತಿಪ್ಪಣ್ಣ ಕರ್ತವ್ಯ ನಿರ್ವಹಿಸುತ್ತಿದ್ದರು.

ಹೆಡ್ ಕಾನ್ಸಟೇಬಲ್ ತಿಪ್ಪಣ್ಣ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ ಹೆಂಡತಿ ಹಾಗೂ ಮಾವನ ವಿರುದ್ಧ ಕಿರುಕುಳ ಆರೋಪ (Harassment by wife and father- in -law) ಮಾಡಿದ್ದಾರೆ. ಮಾವ ಯಮನಪ್ಪ ಜೀವ ಬೆದರಿಕೆ ಹಾಕಿರುವುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ : Health : ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ.?

ಸಾವಿಗೀಡಾದ ತಿಪ್ಪಣ್ಣ ಅವರ ತಂದೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ (Baiyappanahalli Railway Police Station) ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಬೈಕ್ ನಲ್ಲಿ ಬಂದು ತಿಪ್ಪಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ಐಡಿಕಾರ್ಡ್ ಹಾಗೂ ಡೆತ್ ನೋಟ್ ಅನ್ನು ತಿಪ್ಪಣ್ಣ ತೆಗೆದುಕೊಂಡು ಹೋಗಿದ್ದರು.

ಘಟನೆ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಡೆತ್ ನೋಟ್ ಆಧರಿಸಿ ಹೆಂಡತಿ ಹಾಗೂ ಮಾವನ ಮೇಲೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments