ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರು (Tumakur) ನಗರದ ಬಂಡೆಪಾಳ್ಯದ ಮನೆಯೊಂದರಲ್ಲಿ ಬಾಲಕಿಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ (gang rape) ದುಷ್ಕೃತ್ಯ ನಡೆದಿದ್ದು, ಈ ಕುರಿತು ಮೂವರನ್ನು ಅರೆಸ್ಟ್ ಮಾಡಲಾಗಿದೆ.
ಬಂಧಿತ ಆರೋಪಿಗಳು ಬಂಡೆಪಾಳ್ಯದಲ್ಲಿ ವಾಸವಿರುವ ಅಮೋಘ, ಹನುಮಂತ ಹಾಗೂ ಪ್ರತಾಪ್ ಎಂದು ತಿಳಿದು ಬಂದಿದೆ.
ಇದನ್ನು ಓದಿ : ವರದಿಗಾರ್ತಿಯನ್ನು ಅಸಭ್ಯವಾಗಿ ಮುಟ್ಟಿ ಕಿರುಕುಳ ನೀಡಿದ ರೋಬೋಟ್ ; Video viral.!
ಸಿದ್ದಗಂಗಾ ಮಠದ ಜಾತ್ರೆಗೆ ಬಂದಿಂದ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಮೊಬೈಲ್ನಲ್ಲಿ ಬಾಲಕಿ ತನ್ನ ಬಾಯ್ ಫ್ರೆಂಡ್ ಜೊತೆ ಇದ್ದ ದೃಶ್ಯವನ್ನು ರೆಕಾರ್ಡ್ (video record) ಮಾಡಿಕೊಂಡಿದ್ದಾರೆ. ಬಳಿಕ ಆ ವಿಡಿಯೋವನ್ನು ಬಾಲಕಿಗೆ ತೋರಿಸಿ, ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಬಲವಂತವಾಗಿ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ.
ಇದನ್ನು ಓದಿ : ಆಹಾರ ನೀಡಲು ಬಂದವನ ಮೇಲೆ ದಾಳಿ ಮಾಡಿ ನೀರಿಗೆ ಎಳೆದೊಯ್ದ ಮೊಸಳೆ ; Video viral.!
ಪ್ರಕರಣ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.