ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ವಲ್ಪ ವರ್ಷಗಳ ಹಿಂದೆ ಕೊಲೆಸ್ಟ್ರಾಲ್ ಎನ್ನುವುದು 50 ವರ್ಷ ದಾಟಿದ ಮಹಿಳೆಯರಲ್ಲಿ ಕಂಡು ಬರುವ ಸಮಸ್ಯೆಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ 30 ವರ್ಷಕ್ಕೆಲ್ಲಾ ಕೊಲೆಸ್ಟ್ರಾಲ್ (cholesterol) ಸಮಸ್ಯೆ ಕಂಡು ಬರುತ್ತದೆ. ವಯಸ್ಸು, ಲಿಂಗ ಬೇಧವಿಲ್ಲದೆ ಈ ಸಮಸ್ಯೆ ಕಂಡು ಬರುತ್ತಿದೆ.
ಆದರೆ ಮಹಿಳೆಯರಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಕಂಡು ಬಂದಾಗ 7 ಲಕ್ಷಣಗಳು ಕಂಡು ಬರುತ್ತವೆ. ಆದರೆ ಹೆಚ್ಚಿನವರು ಪ್ರಾರಂಭದಲ್ಲಿ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ.
ಇದನ್ನು ಓದಿ : Health : ಅರಿಶಿನ ಬೆರೆಸಿದ ನೀರು ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ನಾಲಿಗೆಯಲ್ಲಿ ಕಂಡುಬರುವ 7 ಲಕ್ಷಣಗಳು :
* ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಂಡು ಬರುವ ಲಕ್ಷಣವಾಗಿದೆ. ನಾಲಗೆಯಲ್ಲಿ ಸೂಕ್ಷ್ಮಾಣುಗಳ ಉತ್ಪತ್ತಿ (Germ production) ಹೆಚ್ಚಾದಾಗ ಈ ರೀತಿ ಉಂಟಾಗುವುದು.
* ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತುಂಬಿಕೊಂಡರೆ ಬಾಯಿ ತುಂಬಾ ಡ್ರೈಯಾಗುವುದು. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಬಾಯಿ ತುಂಬಾ ಒಣಗುವುದು. ಇದನ್ನು ನಿರ್ಲಕ್ಷ್ಯ (neglect) ಮಾಡಬೇಡಿ, ಇದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುವುದರ ಆರಂಭಿಕ ಸೂಚನೆಯಾಗಿದೆ.
* ನಾಲಗೆಯ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ನಾಲಗೆಯಲ್ಲಿ ಉರಿಯೂತ (inflammation) ಉಂಟಾಗುವುದು.
* ನಾಲಗೆಯಲ್ಲಿ ವೈಟ್ ಪ್ಯಾಚ್ ಕಂಡು ಬರುವುದು. ಇದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುವುದರ ಸೂಚನೆಯಾಗಿದೆ. ಇದನ್ನು ಲಿಕೊಪ್ಲೇಕಿಯಾ ಎಂದು ಕರೆಯಲಾಗುವುದು.
* ಕೆಟ್ಟ ಕೊಲೆಸ್ಟ್ರಾಲ್ ಉಂಟಾದರೆ ಆಹಾರ ನುಂಗಲು ಕಷ್ಟವಾಗುವುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ dysphagia ಎಂದು ಕರೆಯಲಾಗುವುದು. ಆದ್ದರಿಂದ ಆಹಾರ ನುಂಗಲು ಕಷ್ಟವಾಗುತ್ತಿದ್ದರೆ ನೀವು ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸುವುದು ಒಳ್ಳೆಯದು.
* ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ನಾಲಗೆಯಲ್ಲಿ ರುಚಿ ಬದಲಾವಣೆಯಾಗುತ್ತದೆ (change), ಬಾಯಿ ಒಂಥರಾ ಕಹಿ ಕಹಿಯಾದಂತೆ ಅನಿಸುವುದು.
ಕಾರಣ :
ತುಂಬಾ ಕೊಬ್ಬಿನಂಶ ಆಹಾರದ ಸೇವನೆ, ವ್ಯಾಯಾಮ ಮಾಡದಿರುವುದು, ಮೈ ತೂಕ ಹೆಚ್ಚಾಗುವುದು, ಧೂಮಪಾನ, ಮದ್ಯಪಾನ ಈ ಬಗೆಯ ಅಭ್ಯಾಸಗಳಿಂದ ಉಂಟಾಗುವುದು. ಇನ್ನು ಕೆಲವರಿಗೆ ವಂಶಪಾರಂಪರ್ಯವಾಗಿ ಕಂಡು ಬರುವುದು.
ಇದನ್ನು ಓದಿ : Health : ಪ್ರತಿದಿನವೂ ಮೊಸರು ಸೇವಿಸುವುದು ಒಳ್ಳೆಯದೇ.?
ಸಮಸ್ಯೆ ನಿವಾರಣೆ :
* ಪ್ರತಿದಿನ ವ್ಯಾಯಾಮ ಮಾಡುವುದರಿಂದ ಈ ಸಮಸ್ಯೆ ತಡೆಗಟ್ಟಬಹುದು.
* ಕೊಲೆಸ್ಟ್ರಾಲ್ ಸಮಸ್ಯೆ ತಡೆಗಟ್ಟಲು ಆರೋಗ್ಯಕರ ಮೈ ತೂಕ ಕಾಪಾಡಿಕೊಳ್ಳಿ.
* ಒಮೆಗಾ 3 ಕೊಬ್ಬಿನಂಶವಿರುವ ಆಹಾರ ಸೇವಿಸಿ, ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶ ಹೆಚ್ಚಾಗುವುದು. ಮೀನು ತಿನ್ನದವರು ಒಮೆಗಾ 3 ಕೊಬ್ಬಿನಂಶ ಹೆಚ್ಚಾಗುವುದು. ಅಲ್ಲದೆ ಕೆಂಪು ಮಾಂಸ, ಅಧಿಕ ಕೊಬ್ಬಿನಂಶವಿರುವ ಆಹಾರ ಮಿತಿಯಲ್ಲಿ ಸೇವಿಸಿ.
Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.