ಜನಸ್ಪಂದನ ನ್ಯೂಸ್, ಡೆಸ್ಕ್ : ಚುನಾವಣೆ ಬಂತೆಂದರೆ ಸಾಕು ಗಿಫ್ಟ್ ಪಾಲಿಟಿಕ್ಸ್ (gift politics) ಶುರುವಾಗುತ್ತೆ. ಜನರಿಗೆ ಹಲವು ಆಮಿಷಗಳನ್ನವೊಡ್ಡಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಓಲೈಸುವ ಕೆಲಸಗಳು ನಡೆಯುತ್ತವೆ.
ಅದರಂತೆ ಆಂಧ್ರಪ್ರದೇಶದಲ್ಲಿ ಕಾಂಡೋಮ್ ಚುನಾವಣಾ (election) ಪ್ರಚಾರದ ಸಾಧನವಾಗಿ ಮಾರ್ಪಟ್ಟಿವೆ. ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ ನಾಯಕರು ತಮ್ಮ ಪಕ್ಷದ ಚಿಹ್ನೆಗಳನ್ನು ಒಳಗೊಂಡ ಕಾಂಡೋಮ್ ಪ್ಯಾಕೆಟ್‌ಗಳನ್ನು (condom packet) ಹಂಚಿದ್ದಾರೆ.
ಇದನ್ನು ಓದಿ : ಗಂಡನನ್ನು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಹೆಂಡ್ತಿ ; Video Viral.!
ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡ್ತಿದೆ.
ಇದೆಲ್ಲಾ ಮುಂಬರುವ ಲೋಕಸಭಾ ಚುನಾವಣೆಗಾಗಿ ಎನ್ನಲಾಗುತ್ತಿದೆ. ಮನೆ ಮನೆಗೆ ಹೋಗಿ ಕಾಂಡೋಮ್ ನೀಡುವ ಮೂಲಕ ಪಕ್ಷದ ಪ್ರಚಾರ ಮಾಡಲಾಗುತ್ತಿದೆ ಎಂಬ ದೂರುಗಳು ಕೂಡ ಕೇಳಿಬಂದಿವೆ.
ಈ ವೇಳೆ ವ್ಯಕ್ತಿಯೊಬ್ಬ ಕಾಂಡೋಮ್‌ಗಳನ್ನು ಏಕೆ ವಿತರಿಸಲಾಗುತ್ತಿದೆ ಎಂದು ಟಿಡಿಪಿ ಕಾರ್ಯಕರ್ತ ಎಂದು ಹೇಳಲಾದವನನ್ನು ಕೇಳಿದಾಗ, ಹೆಚ್ಚು ಮಕ್ಕಳಿದ್ದರೆ, ಹೆಚ್ಚಿನ ಹಣವನ್ನು ವಿತರಿಸಬೇಕು. ಅದಕ್ಕಾಗಿಯೇ ಈ ಕಾಂಡೋಮ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಉತ್ತರಿಸಿರುವುದನ್ನು ವಿಡಿಯೋದಲ್ಲಿ ಕೇಳಬಹುದು.
ಇದನ್ನು ಓದಿ : Viral : ಹೆಬ್ಬಾವಿನ ಜೊತೆ ಸರಸ ; ನಟಿಯ ಹೊಸ ಅವತಾರಕ್ಕೆ ಬೇಸ್ತು ಬಿದ್ದ ನೆಟ್ಟಿಗರು.!
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ವೈಎಸ್ಆರ್ಸಿಪಿ ಪಕ್ಷ ಎಕ್ಸ್ನಲ್ಲಿ ಟಿಡಿಪಿ ಪಕ್ಷ ಎಷ್ಟು ಕೀಳು ಮಟ್ಟಕ್ಕೆ (lower level) ಇಳಿದಿದೆ ಎಂದು ತಿಳಿಸಿದೆ.
ఏపీలో టీడీపీ, వైఎస్సార్సీపీ కండోమ్ రాజకీయాలు! pic.twitter.com/fF65X7RHhu
— Telugu Scribe (@TeluguScribe) February 22, 2024