Sunday, December 22, 2024
HomeInternationalರಾತ್ರೋರಾತ್ರಿ BPL ನಿಂದ APL ಕಾರ್ಡ್'ಗೆ ಶಿಪ್ಟ್ ಆದ 60,000 ರೇಷನ್ ಕಾರ್ಡ್‌ಗಳು.!
spot_img

ರಾತ್ರೋರಾತ್ರಿ BPL ನಿಂದ APL ಕಾರ್ಡ್\’ಗೆ ಶಿಪ್ಟ್ ಆದ 60,000 ರೇಷನ್ ಕಾರ್ಡ್‌ಗಳು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯ ಸರ್ಕಾರವು BPL ಕಾರ್ಡ್ ಇದ್ದವರಿಗೆ ಸರ್ಕಾರ ರಾತ್ರೋ ರಾತ್ರಿ ಶಾಕ್ ಕೊಟ್ಟಿದೆ. ಸುಮಾರು 60 ಸಾವಿರ ಬಿಪಿಎಲ್ ಕಾರ್ಡ್\’ಗಳು ಏಕಾಏಕಿ ಎಪಿಎಲ್ ಕಾರ್ಡ್ ಆಗಿ ಬದಲಾಗಿವೆ.

ರಾಜ್ಯ ಸರ್ಕಾರ (state government) ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆಗೆ ಮುಂದಾಗಿದೆ. ಅದರಂತೆ ಅನರ್ಹ ಕಾರ್ಡ್ ಗಳನ್ನು (Ineligible card) ರದ್ದುಗೊಳಿಸುವುದಾಗಿ ಈಗಾಗಲೇ ಸೂಚನೆ ನೀಡಿತ್ತು.

ಇದನ್ನು ಓದಿ : Belagavi : ಅಡ್ಡಾದಿಡ್ಡಿ ಲಾರಿ ಚಲಾಯಿಸಿದ್ದಕ್ಕೆ ಚಾಲಕನ ಹತ್ಯೆ; ಐವರು ಆರೋಪಿಗಳು ಅರೆಸ್ಟ್.!

ರಾಜ್ಯ ಸರ್ಕಾರದ ಮಾನದಂಡ ಪ್ರಕಾರ, ಆದಾಯ ತೆರಿಗೆ (income tax) ಪಾವತಿ ಮಾಡುವವರು ವಾರ್ಷಿಕ ಆದಾಯ 1.2 ಲಕ್ಷಕ್ಕಿಂತ ಹೆಚ್ಚು ಇದ್ದಲ್ಲಿ ಅಂತಹ ಕಾರ್ಡ್ ಗಳನ್ನು ರದ್ದುಗೊಳಿಸಲಾಗುತ್ತದೆ. ಅದರಂತೆ ಸರ್ಕಾರ ಪರಿಷ್ಕರಣೆ ನಡೆಸಿದೆ.

ಇದ್ದಕ್ಕಿದ್ದ ಹಾಗೆ 60 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದೆ. ಆದರೆ ಈ ಬಗ್ಗೆ ರೇಷನ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ತಿಳಿದೇ ಇಲ್ಲ. ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ (bio metric) ಮೇಲೆ ಬೆರಳಿಟ್ಟಾಗಲೇ ಸತ್ಯ ಗೊತ್ತಾಗಿದೆ.

ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!

ನಿಮಗೆ ಪಡಿತರ ಚೀಟಿ ಕುರಿತ ಯಾವುದೇ ಗೊಂದಲಗಳಿದ್ದರೆ, ನೀವು ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್ 18004259339 ಅಥವಾ ಸಹಾಯವಾಣಿ (helpline) 1967ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಬೆಳಗ್ಗೆ 10 ಗಂಟೆಯಿಂದ ಸಂಜೆ 5:30ರ ವರಗೂ ಈ ನಂಬರ್‌ಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಆಹಾರ ಇಲಾಖೆ (Department of Food) ತಿಳಿಸಿದೆ.

ಹಿಂದಿನ ಸುದ್ದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಗ್ರಾಮ ಪಂಚಾಯತಿ ಅಧ್ಯಕ್ಷ (Gram Panchayat President), ತನ್ನ ಲವ್ವರ್ ಜೊತೆ ಕಾರಿನಲ್ಲಿ ಜಾಲಿ ರೈಡ್ ಹೋಗುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಜೀತೆಂದರ್​, ಮನೆಯಲ್ಲಿ ಪತ್ನಿಯಿದ್ದರೂ ಸಹ ಮತ್ತೊಬ್ಬ ಯುವತಿಯೊಂದಿಗೆ ಕಾರಿನಲ್ಲಿ ಜಾಲಿಯಾಗಿ ಸುತ್ತಾಟ (walk around) ನಡೆಸಿದ್ದಾನೆ.

ಇದನ್ನು ಓದಿ : Health : ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿದೆಯೇ? ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.!

ಈ ವಿಚಾರ ತಿಳಿದ ಅಧ್ಯಕ್ಷನ ಪತ್ನಿ ಕಾರಿನಲ್ಲಿ ಹೋಗುತ್ತಿದ್ದ ಜೋಡಿಯನ್ನು ಕಂಡು ಆಕ್ರೋಶಗೊಂಡಿದ್ದಾಳೆ. ಕಾರಿನಲ್ಲಿದ್ದ ಜಿತೇಂದರ್ ಹಾಗೂ ಆತನ ಪ್ರೇಯಸಿಯನ್ನು (lover) ಕಾರಿನಿಂದ ಹೊರಕ್ಕೆ ಎಳೆದು ಥಳಿಸಿದ್ದಾಳೆ. ಈ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಮಧ್ಯಪ್ರದೇಶದ ನಿಮುಚ್ ಜಿಲ್ಲೆಯ ಸವಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಿಗ್ಗಾಮುಗ್ಗಾ ಥಳಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಪತ್ನಿ ವಿರುದ್ಧ ಆತನ ಪ್ರೇಯಸಿ ಉಜ್ಜೈನಿ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾಳೆ ಎಂದು ವರದಿಯಿಂದ ತಿಳಿದು ಬಂದಿದೆ.

 

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments