Monday, October 27, 2025

Janaspandhan News

HomeHealth & Fitness"ಕೇವಲ 5 ಸೆಕೆಂಡು : ನಿಮ್ಮ ಬೆರಳೇ ಹೇಳುತ್ತೆ Lung cancer ಇದೆಯಾ ಅಂತ".!
spot_img
spot_img
spot_img

“ಕೇವಲ 5 ಸೆಕೆಂಡು : ನಿಮ್ಮ ಬೆರಳೇ ಹೇಳುತ್ತೆ Lung cancer ಇದೆಯಾ ಅಂತ”.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮಗಿದು ಗೊತ್ತೇ.? ಕೇವಲ 5 ಸೆಕೆಂಡುಗಳಲ್ಲಿ ನಿಮ್ಮ ಬೆರಳೇ ಹೇಳುತ್ತೆ ಶ್ವಾಸಕೋಶದ ಕ್ಯಾನ್ಸರ್‌ (Lung cancer) ಇದೆಯಾ ಅಥವಾ ಇಲ್ವಾ ಅಂತ. ಹೇಗಂತ್ತೀರಾ.? ಬನ್ನಿ ತಿಳಿಯೋಣ.!

ಶ್ವಾಸಕೋಶದ ಕ್ಯಾನ್ಸರ್ (Lung cancer) ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಮಾರಕ ಕಾಯಿಲೆಗಳಲ್ಲಿ ಒಂದಾಗಿದ್ದು, ಇದರ ಲಕ್ಷಣಗಳು ಸಾಮಾನ್ಯವಾಗಿ ಕೊನೆಯ ಹಂತದಲ್ಲಿ ಮಾತ್ರ ಸ್ಪಷ್ಟವಾಗುತ್ತವೆ.

ಇದನ್ನು ಓದಿ : Gastric-problems : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ.? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು.

ಆದರೆ, ಆರಂಭಿಕ ಹಂತದಲ್ಲೇ ಶ್ವಾಸಕೋಶದ ಆರೋಗ್ಯದ ಬಗ್ಗೆ ಸುಳಿವು ನೀಡುವ ಸರಳ ಪರೀಕ್ಷೆ ಮನೆಯಲ್ಲೇ ಮಾಡಬಹುದು. ವೈದ್ಯಕೀಯವಾಗಿ ‘ಸ್ಕ್ಯಾಮ್ರೋಥ್ ವಿಂಡೋ ಟೆಸ್ಟ್’ ಅಥವಾ ಜನಪ್ರಿಯವಾಗಿ ‘ಡೈಮಂಡ್ ಫಿಂಗರ್ ಟೆಸ್ಟ್’ ಎಂದೆ ಹೆಸರುವಾಸಿಯಾದ ಈ ಪರೀಕ್ಷೆ ಕೇವಲ 5 ಸೆಕೆಂಡುಗಳಲ್ಲಿ ಶ್ವಾಸಕೋಶದ ಆರೋಗ್ಯದ ಸೂಚನೆ ನೀಡುತ್ತದೆ.

ಡೈಮಂಡ್ ಫಿಂಗರ್ ಟೆಸ್ಟ್ ಹೇಗೆ ಮಾಡಬೇಕು.?
  • ಎರಡೂ ಕೈಗಳ ತೋರುಬೆರಳುಗಳನ್ನು ತೆಗೆದುಕೊಳ್ಳಿ.
  • ಉಗುರುಗಳ ಅಂಚುಗಳು ಎದುರಾಗುವಂತೆ ಬೆರಳುಗಳನ್ನು ಸರಿಯಾಗಿ ಸೇರಿಸಿ.
  • ಬೆರಳುಗಳನ್ನು ಜೋಡಿಸಿದ ಮೇಲೆ ಉಗುರುಗಳ ಮಧ್ಯೆ ಚಿಕ್ಕ ಅಂತರವಿದೆಯೆ ಎಂದು ಗಮನಿಸಿ.
ಫಲಿತಾಂಶದ ಅರ್ಥವೇನು.?

ಬೆರಳುಗಳ ಉಗುರುಗಳ ನಡುವೆ ವಜ್ರದಾಕಾರದ (ಡೈಮಂಡ್ ಶೇಪ್) ಜಾಗ ಸ್ಪಷ್ಟವಾಗಿ ಕಾಣಿಸಿದರೆ ಶ್ವಾಸಕೋಶದ ಆರೋಗ್ಯ ಉತ್ತಮವಾಗಿದೆ ಎಂದು ಸೂಚಿಸುತ್ತದೆ. ಆದರೆ, ಮಧ್ಯೆ ಅಂತರ ಕಾಣಿಸದೇ ಬೆರಳುಗಳ ಉಗುರುಗಳು ಸಂಪೂರ್ಣವಾಗಿ ಸಮತಟ್ಟಾಗಿ ಸೇರಿದರೆ, ಇದೊಂದು ಗಂಭೀರ ಸ್ಥಿತಿ ‘ಕ್ಲಬ್ಬಿಂಗ್’ ಅನ್ನು ಸೂಚಿಸಬಹುದು. ಕ್ಲಬ್ಬಿಂಗ್ ಶ್ವಾಸಕೋಶದ ಕ್ಯಾನ್ಸರ್‌ (Lung cancer) ನ ಆರಂಭಿಕ ಲಕ್ಷಣವಾಗಿರಬಹುದು.

ಇದನ್ನು ಓದಿ : IBPS ಕ್ಲರ್ಕ್ ನೇಮಕಾತಿ 2025 : ಆಗಸ್ಟ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ.!
ಕ್ಲಬ್ಬಿಂಗ್ ಎಂದರೆ ಏನು.?

ಕ್ಲಬ್ಬಿಂಗ್ ಸ್ಥಿತಿಯಲ್ಲಿ ಬೆರಳಿನ ತುದಿಗಳು ದಪ್ಪವಾಗಿ, ಉಗುರುಗಳು ಆವರ್ತಿತವಾಗುವಂತೆ ದಪ್ಪ ಮತ್ತು ಬರುವಂತೆ ಕಾಣುತ್ತವೆ. ದೇಹದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಈ ಬದಲಾವಣೆಗಳು ಉಂಟಾಗುತ್ತವೆ. ಶ್ವಾಸಕೋಶದ ಕ್ಯಾನ್ಸರ್ (Lung cancer) , ಹೃದಯದ ಸಮಸ್ಯೆಗಳು ಅಥವಾ ಇತರ ಗಂಭೀರ ಕಾಯಿಲೆಗಳು ಇದಕ್ಕೆ ಕಾರಣವಾಗಬಹುದು.

ದೇಹದಲ್ಲಿ VEGF (ವ್ಯಾಸ್ಕುಲರ್ ಎಂಡೋಥಿಲಿಯಲ್ ಗ್ರೋತ್ ಫ್ಯಾಕ್ಟರ್) ಎಂಬ ಪ್ರೋಟೀನ್ ಹೆಚ್ಚು ಪ್ರಮಾಣದಲ್ಲಿ ಬಿಡುಗಡೆ ಆಗುವುದರಿಂದ ಹೊಸ ರಕ್ತನಾಳಗಳ ಬೆಳವಣಿಗೆ ಉಂಟಾಗಿ ಬೆರಳುಗಳಲ್ಲಿ ಊತವನ್ನುಂಟುಮಾಡುತ್ತದೆ.

ಶ್ವಾಸಕೋಶದ ಕ್ಯಾನ್ಸರ್‌ (Lung cancer) ನ ಇತರೆ ಲಕ್ಷಣಗಳು ಯಾವುವು.?
  • ಮೂರು ವಾರಕ್ಕಿಂತ ಹೆಚ್ಚು ದಿನ ನಿರಂತರ ಕೆಮ್ಮು.
  • ಕೆಮ್ಮಿನ ಸಮಯದಲ್ಲಿ ರಕ್ತ ಬರುತ್ತಿರುವುದು.
  • ಎದೆ ನೋವು ಅಥವಾ ಎದೆ ಬಿಗಿತ ಅನುಭವಿಸುವುದು.
  • ಉಸಿರಾಟದಲ್ಲಿ ತೊಂದರೆಗಳು.
  • ನಿರಂತರ ಆಯಾಸ ಅಥವಾ ದಣಿವು.
  • ಹಸಿವಿನ ಕೊರತೆ ಅಥವಾ ಗಂಟಲು ಕೆರೆತ.
ಇದನ್ನು ಓದಿ : Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!
ಮುಖ್ಯ ಸೂಚನೆ :

ಡೈಮಂಡ್ ಫಿಂಗರ್ ಟೆಸ್ಟ್ ಕೇವಲ ಒಂದು ಪ್ರಾಥಮಿಕ ಪರೀಕ್ಷೆ ಮಾತ್ರ. ವೈದ್ಯಕೀಯ ದೃಷ್ಟಿಯಿಂದ ರೋಗನಿರ್ಣಯಕ್ಕೆ ಪರ್ಯಾಯವಲ್ಲ. ಕ್ಲಬ್ಬಿಂಗ್ ಅಥವಾ ಮೇಲೆ ಹೇಳಿರುವ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಪರಿಶೀಲನೆ ಪಡೆಯುವುದು ಅತ್ಯಗತ್ಯ.

ಕಾಯಿಲೆಯು ಆರಂಭಿಕ ಹಂತದಲ್ಲಿ ಪತ್ತೆಯಾದರೆ ಚಿಕಿತ್ಸೆ ಫಲಪ್ರದವಾಗುವ ಸಾಧ್ಯತೆ ಹೆಚ್ಚು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.

Lung cancer : Lung cancer is a malignant tumor that develops in the lung tissues.  It’s primarily caused by genetic damage to lung cells, often linked to tobacco smoking or exposure to harmful chemicals. 

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.


ಮಧ್ಯ ರಸ್ತೆಯಲ್ಲಿ ಕಾರು ನಿಂತು Traffic jam : ಒಳಗೆ ನೋಡಿದವರಿಗೆ ಶಾಕ್ ಕೊಟ್ಟ ದೃಶ್ಯ.!

Traffic jam

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಹಾನಗರಗಳಲ್ಲಿ ಸಂಚಾರ ದಟ್ಟಣೆ (Traffic jam) ಸಾಮಾನ್ಯ ಸಂಗತಿ. ವಾಹನಗಳ ಅಡ್ಡಾದಿಡ್ಡಿ ಓಡಾಟ, ರಸ್ತೆ ಮೂಲ ಸೌಕರ್ಯಗಳ ಕೊರತೆ, ನಿಯಮ ಉಲ್ಲಂಘನೆ ಇವು ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣಗಳಾಗಿವೆ.

ಇತ್ತೀಚೆಗೆ ಮುಂಬೈ ನಗರದ ಲೋಖಂಡ್ವಾಲಾ ಮುಖ್ಯ ಮಾರುಕಟ್ಟೆ ಬಳಿಯಲ್ಲಿ ಟ್ರಾಫಿಕ್ ಜಾಮ್‌ (Traffic jam) ಗೆ ವಿಶೇಷ ಕಾರಣವೊಂದು ಬೆಳಕಿಗೆ ಬಂದಿದೆ.

ಇದನ್ನು ಓದಿ : ಮನೆಗೆ ಅಚಾನಕ್ ಬಂದ ಪತಿ : Lover ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪತ್ನಿ ; ಮುಂದೆ.?

ಕೆಂಪು ಬಣ್ಣದ ಕಾರೊಂದು ರಸ್ತೆ ಮಧ್ಯೆ ನಿಲ್ಲಿಸಿದ್ದರಿಂದಾಗಿ ಬಸ್ ಸೇರಿದಂತೆ ಅನೇಕ ವಾಹನಗಳು Traffic jam ಆದ ಹಿನ್ನಲೆಯಲ್ಲಿ ಸಾಲಾಗಿ ನಿಂತಿದ್ದವು. ವಾಹನಗಳು Traffic jam ಉಂಟಾದ ಪರಿಣಾಮವಾಗಿ ಮುಂದೆ ಸಾಗದೆ ಇದ್ದ ಕಾರಣ, ತಾಳ್ಮೆ ಕಳೆದುಕೊಂಡ ಕೆಲ ವಾಹನ ಸವಾರರು ಕಾರಿನ ಸಮೀಪಕ್ಕೆ ಹೋಗಿ ನೋಡಿದಾಗ ಅಚ್ಚರಿ ಸಂಗತಿ ಕಂಡು ಶಾಕ್‌ ಆಗಿದ್ದಾರೆ.

ಹೌದು, ಇದೀಗ ಆ ಅಚ್ಚರಿ ಸಂಗತಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, “ಅಂಧೇರಿ ಲೋಕ” ಎಂಬ ಇನ್‌ಸ್ಟಾಗ್ರಾಂ ಪುಟವು ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ, ಕಾರು ರಸ್ತೆಯ ನಡುಕಡೆ ನಿಲ್ಲಿಸಿದ್ದರಿಂದ ಜನತೆಗೆ ಅನೇಕ ಸಮಸ್ಯೆಗಳು (Traffic jam) ಉಂಟಾಗಿವೆ ಎಂದು ಹೇಳಲಾಗಿದೆ. ಕೆಲವರು ಕಾರಿನ ಮಾಲೀಕರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಅಗಷ್ಟ 01 ರ ದ್ವಾದಶ ರಾಶಿಗಳ ಫಲಾಫಲ.!

ಅಷ್ಟಕ್ಕೂ ಕಾರಿನ ಸಮೀಪಕ್ಕೆ ಹೋಗಿ ನೋಡಿದಾಗ ಕಂಡ ಅಚ್ಚರಿ ಸಂಗತಿಯಾದರೂ ಏನು ಗೊತ್ತಾ.?

ಕಾರಿನ ಡ್ರೈವರ್ ಸೀಟಿನಲ್ಲಿ ಕುಳಿತು‌ ಆ ಕಡೆ ಈ ಕಡೆ ನೋಡುತ್ತಿರುವದು ಚಾಲಕನಲ್ಲ, ಅದಲಿಗೆ ಅಲ್ಲಿ ಕುಳಿಒತದ್ದು ಮಾತ್ರ ಶ್ವಾನ (ನಾಯಿ). ಈ ದೃಶ್ಯ ಕಂಡು ಕೆಲವರಿಗೆ ನಗು ತರಿಸಿದರೂ, ಕೆಲವರಿಗೆ ಇದು ಅಪಾಯಕಾರಿ ಮತ್ತು ಗಂಭೀರ ವಿಷಯವಾಗಿದೆ ಎಂಬ ಭಾವನೆ ಉಂಟುಮಾಡಿದೆ. ಕಾರಿನಲ್ಲಿ ನಾಯಿಯನ್ನು ಹೀಗೆ ಬಿಟ್ಟು ಹೋಗುವುದು ಅಪಾಯಕಾರಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದರ ಹಿನ್ನೆಲೆಯಲ್ಲಿ, ಟ್ರಾಫಿಕ್ ನಿಯಮ ಉಲ್ಲಂಘನೆಗೊಂಡ ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಒಬ್ಬರು ಪೋಸ್ಟ್‌ನಲ್ಲಿ “ಫೋಟೋ ತೆಗೆದು ಮುಂಬೈ ಟ್ರಾಫಿಕ್ ಪೊಲೀಸ್ ಆಪ್‌ನಲ್ಲಿ ಅಪ್‌ಲೋಡ್ ಮಾಡಿದರೆ ದಂಡ ತಾನಾಗೆ ಬೀಳುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : Bus : ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ.!

ಇಂತಹ ಘಟನೆಗಳು ಜರುಗದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ವಾಹನಗಳನ್ನು ರಸ್ತೆ ಮಧ್ಯೆ ನಿಲ್ಲಿಸುವುದರಿಂದ ಸಾರ್ವಜನಿಕರ ಸಾರ್ವಜನಿಕರ ವಾಹನ ಸಂಚಾರಕ್ಕೆ (Traffic jam) ತೊಂದರೆ ಉಂಟಾಗುತ್ತದೆ ಹಾಗೂ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ.

Traffic jam ಗೆ ಕಾರಣವಾದ ವಿಡಿಯೋ :

 

View this post on Instagram

 

A post shared by Andheri West (@andheriloca)

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments