Tuesday, September 16, 2025

Janaspandhan News

HomeAstrologyCruel : ಈ 4 ರಾಶಿಯವರು ಕ್ರೌರ್ಯಕ್ಕೆ ಹೆಸರುವಾಸಿ ; ಕೋಪ ಬಂದರೆ ಕರುಣೆ ತೋರದವರು.!
spot_img
spot_img
spot_img

Cruel : ಈ 4 ರಾಶಿಯವರು ಕ್ರೌರ್ಯಕ್ಕೆ ಹೆಸರುವಾಸಿ ; ಕೋಪ ಬಂದರೆ ಕರುಣೆ ತೋರದವರು.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗೂ ತನ್ನದೇ ಆದ ವಿಶೇಷ ಗುಣಗಳಿರುತ್ತವೆ. ಕೆಲವರು ದಯೆ, ಕರುಣೆ ಮತ್ತು ಸಹಾನುಭೂತಿಯಿಂದ ತುಂಬಿರುತ್ತಾರೆ. ಆದರೆ, ಕೆಲವರು ಕೋಪ ಬಂದಾಗ ತುಂಬಾ ಕ್ರೂರ (Cruel) ವಾಗಿ ವರ್ತಿಸುತ್ತಾರೆ.

ಈ ಕ್ರೂರ (Cruel) ರಾಶಿಯವರು ತಮ್ಮ ಮಾತು ಮತ್ತು ಕ್ರಿಯೆಗಳ ಮೂಲಕ ಇತರರನ್ನು ನೋಯಿಸುವ ಗುಣವನ್ನು ತೋರಿಸುತ್ತಾರೆ. ಹಾಗಾದ್ರೆ ಯಾವ ರಾಶಿಯವರು ಈ ರೀತಿ ಕ್ರೂರ (Cruel) ವಾದ ರೀತಿಯವರಾಗಿರುತ್ತಾರೆ ಅಂತ ನೋಡೋಣ.

ಇವ್ರೇ ನೋಡಿ ಕ್ರೂರ (Cruel) ವಾಗಿ ವರ್ತಿಸುವ ರಾಶಿಯವರು :

🔹 ಮಕರ ರಾಶಿ :
ಮಕರ ರಾಶಿಯವರು ಸಾಮಾನ್ಯವಾಗಿ ಶಾಂತ ಸ್ವಭಾವಿಗಳಾದರೂ, ಶಿಸ್ತು ಪಾಲಿಸದ ಸಂದರ್ಭಗಳಲ್ಲಿ ತುಂಬಾ ಕಠಿಣವಾಗಿ ವರ್ತಿಸುತ್ತಾರೆ. ಶನಿ ಗ್ರಹದ ಪ್ರಭಾವ ಹೊಂದಿರುವ ಇವರಿಗೆ ಗುರಿ ಸಾಧನೆ ಮುಖ್ಯ. ಭಾವನೆಗಳನ್ನು ಕಡೆಗಣಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೋಪ ಬಂದಾಗ ಎದುರಾಳಿ ಯಾರು ಎನ್ನುವುದನ್ನು ಪರಿಗಣಿಸದೆ ಕಠಿಣವಾಗಿ ಮಾತನಾಡುತ್ತಾರೆ.

🔹 ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರನ್ನು ಮಂಗಳ ಗ್ರಹ ಆಳುತ್ತದೆ. ಇವರ ವ್ಯಕ್ತಿತ್ವ ತೀವ್ರವಾಗಿದ್ದು, ಗುರಿ ಸಾಧನೆಗಾಗಿ ಯಾವುದೇ ಮಟ್ಟಕ್ಕೆ ಹೋಗುತ್ತಾರೆ. ತಮ್ಮ ಲಾಭಕ್ಕಿಂತ ಹೆಚ್ಚಿನದನ್ನು ಪರಿಗಣಿಸುವುದಿಲ್ಲ. ತಮಗೆ ಬೇಕಾದ್ದು ಆಗದಿದ್ದರೆ, ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಮಾತಿನ ಮೂಲಕ ಎದುರಾಳಿಗೆ ನೋವುಂಟುಮಾಡುತ್ತಾರೆ.

🔹 ಕುಂಭ ರಾಶಿ :
ಸ್ವಾತಂತ್ರ್ಯಪ್ರಿಯ ಕುಂಭ ರಾಶಿಯವರಿಗೂ ಶನಿ ಗ್ರಹದ ಪ್ರಭಾವವಿದೆ. ಭಾವನೆಗಳಿಗಿಂತ ತರ್ಕ ಮತ್ತು ಕಾರಣಕ್ಕೆ ಹೆಚ್ಚಿನ ಮಹತ್ವ ನೀಡುವ ಇವರ ಸ್ವಭಾವದಿಂದ ಇತರರ ಮನಸ್ಸು ನೋವುತ್ತದೆ. ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಏನಾದರೂ ನಡೆದರೆ, ನೇರವಾಗಿ ಹೇಳಿಬಿಡುತ್ತಾರೆ. ಕರುಣೆ ತೋರಿಸುವುದು ಇವರ ಸ್ವಭಾವವಲ್ಲ.

🔹 ಮೇಷ ರಾಶಿ :
ಮೇಷ ರಾಶಿಯವರು ಧೈರ್ಯ ಮತ್ತು ನಾಯಕತ್ವಕ್ಕೆ ಹೆಸರುವಾಸಿ. ಆದರೆ, ಇವರನ್ನು ಕೆಣಕಿದರೆ ಅವರ ಕ್ರೂರ ಸ್ವಭಾವ ಹೊರಬರುತ್ತದೆ. ಮಂಗಳ ಗ್ರಹದ ಪ್ರಭಾವದಿಂದ ಇವರು ನೇರವಾಗಿ ಮಾತನಾಡುತ್ತಾರೆ. ಕೋಪದಲ್ಲಿ ಏನನ್ನೂ ಪರಿಗಣಿಸದೆ ಹೇಳಿಬಿಡುವುದರಿಂದ ಎದುರಾಳಿಗೆ ನೋವುಂಟಾಗುತ್ತದೆ.

ಹೀಗಾಗಿ, ಈ ರಾಶಿಯವರು ತಮ್ಮ ಮಾತು ಮತ್ತು ಕ್ರಿಯೆಗಳ ಮೂಲಕ ಕೆಲವೊಮ್ಮೆ ದಯೆ, ಕರುಣೆ ತೋರದೆ ಕ್ರೂರ (Cruel) ವಾಗಿ ವರ್ತಿಸುತ್ತಾರೆ.

Disclaimer : This article is based on reports and information available on the internet. Janaspandhan News is not affiliated with it and is not responsible for it.


benefits-of-climbing-stairs : ಮೆಟ್ಟಿಲು ಹತ್ತುವ ಅಥವಾ ಇಳಿಯುವ ಅವಕಾಶ ಸಿಕ್ಕರೆ ಖಂಡಿತಾ ಮಿಸ್‌ ಮಾಡ್ಕೋಬೇಡಿ.!

stairs

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮಗೇನಾದರೂ ಮೆಟ್ಟಿಲು (Stairs) ಹತ್ತುವ ಅಥವಾ ಇಳಿಯುವ ಅವಕಾಶ ಸಿಕ್ಕರೆ ಖಂಡಿತಾ ಮಿಸ್‌ ಮಾಡ್ಕೋಬೇಡಿ. ಏಕಂತ್ತೀರಾ, ಬನ್ನಿ ಅದರಿಂದ ಸಿಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ.!

ಇಂದಿನ ಕಾಲದಲ್ಲಿ ಎಲ್ಲೆಡೆ ಲಿಫ್ಟ್ ಸೌಲಭ್ಯ ದೊರಕುತ್ತಿರುವ ಕಾರಣ, ಜನರು ಮೆಟ್ಟಿಲು (Stairs) ಹತ್ತುವ ಅಭ್ಯಾಸವನ್ನು ಮರೆತಂತಾಗಿದೆ. ಸಮಯ ಉಳಿಸಿಕೊಳ್ಳಲು ಲಿಫ್ಟ್ ಬಳಸುವುದು ಸುಲಭವಾದರೂ, ಆರೋಗ್ಯದ ದೃಷ್ಟಿಯಿಂದ ಮೆಟ್ಟಿಲು ಹತ್ತುವುದು ಅತ್ಯಂತ ಲಾಭದಾಯಕ ಎಂದು ತಜ್ಞರು ಹೇಳುತ್ತಾರೆ.

Tests : 40 ವರ್ಷದ ನಂತರ ಪುರುಷರು ಮಾಡಿಸಿಕೊಳ್ಳಲೇ ಬೇಕಾದ ಪ್ರಮುಖ ಆರೋಗ್ಯ ತಪಾಸಣೆಗಳಿವು.!

ಜಿಮ್‌ಗೆ ಹೋಗಲು ಸಮಯವಿಲ್ಲದವರು ಅಥವಾ ವ್ಯಾಯಾಮ ಮಾಡಲು ಅವಕಾಶವಿಲ್ಲದವರಿಗೆ ಮೆಟ್ಟಿಲು ಹತ್ತುವುದು ಸರಳ ಹಾಗೂ ಪರಿಣಾಮಕಾರಿ ಆಯ್ಕೆ ಎನ್ನತ್ತಾರೆ ಆರೋಗ್ಯ ತಜ್ಞರು.

ಮೆಟ್ಟಿಲು (Stairs) ಹತ್ತುವ ಅಥವಾ ಇಳಿಯುವುದರಿಂದ ಸಿಗುವ ಪ್ರಯೋಜನಗಳು :
ತೂಕ ಇಳಿಸಲು ಸಹಾಯಕ :

ಮೆಟ್ಟಿಲು (Stairs) ಹತ್ತುವುದು ದೇಹದ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಒಂದೊಂದು ನಿಮಿಷದಲ್ಲಿ ಸುಮಾರು 8 ರಿಂದ 11 ಕ್ಯಾಲೊರಿಗಳವರೆಗೆ ಕರಗಿಸಬಹುದು. ವಾರದಲ್ಲಿ ಐದು ದಿನಗಳ ಕಾಲ ಕನಿಷ್ಠ 30 ನಿಮಿಷ ಮೆಟ್ಟಿಲು ಹತ್ತಿದರೆ ತೂಕ ಇಳಿಕೆಗೆ ಹೆಚ್ಚಿನ ನೆರವು ದೊರಕುತ್ತದೆ.

KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 15000+ ಹುದ್ದೆಗಳ ನೇಮಕಾತಿ.!
ಸ್ನಾಯು ಮತ್ತು ಮೂಳೆ ಬಲಪಡಿಸುತ್ತದೆ :

ನಿಯಮಿತವಾಗಿ ಮೆಟ್ಟಿಲು (Stairs) ಹತ್ತುವುದರಿಂದ ಕಾಲಿನ ಸ್ನಾಯುಗಳು ಬಲಗೊಳ್ಳುತ್ತವೆ. ಇದರಿಂದ ಮೂಳೆಗಳು ದೃಢವಾಗುವುದಲ್ಲದೆ ಕೀಲುಗಳ ಆರೋಗ್ಯವೂ ಸುಧಾರಿಸುತ್ತದೆ. ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಹಾಗೂ ರಕ್ತ ಪರಿಚಲನೆ ಉತ್ತಮಗೊಳಿಸಲು ಇದು ಸಹಕಾರಿ.

ತಾಳ್ಮೆ ಮತ್ತು ಶಕ್ತಿ ಹೆಚ್ಚಿಸುತ್ತದೆ :

ಮೆಟ್ಟಿಲು (Stairs) ಹತ್ತುವುದು ಏರೋಬಿಕ್ ವ್ಯಾಯಾಮವಾಗಿದ್ದು, ನಿಯಮಿತ ಅಭ್ಯಾಸದಿಂದ ದೇಹದ ತಾಳ್ಮೆ ಹಾಗೂ ಶಕ್ತಿಯನ್ನು ಹೆಚ್ಚಿಸುತ್ತದೆ. ನಡಿಗೆಯಷ್ಟೇ ಅಲ್ಲ, ಇದರಿಂದ ಹೆಚ್ಚಿನ ಕ್ಯಾಲೊರಿಗಳು ಸುಡುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Astrology : ಹೇಗಿದೆ ಗೊತ್ತಾ.? ಅಗಷ್ಟ 20 ರ ದ್ವಾದಶ ರಾಶಿಗಳ ಫಲಾಫಲ.!

ಅದರಂತೆ, ಲಿಫ್ಟ್ ಬಳಸುವುದನ್ನು ಬಿಟ್ಟು ದಿನನಿತ್ಯ ಮೆಟ್ಟಿಲು (Stairs) ಹತ್ತುವ ಅಭ್ಯಾಸ ರೂಢಿಸಿಕೊಂಡರೆ ದೇಹಾರೋಗ್ಯ ಮಾತ್ರವಲ್ಲದೆ ಫಿಟ್ನೆಸ್ ಕೂಡ ಉತ್ತಮವಾಗಿರುತ್ತದೆ.

Studies reveal that 30 minutes of physical activity of moderate intensity everyday is beneficial to health. It helps you to control body weight, promotes cardiovascular fitness and is good for your psychological and social health. The World Health Organization also recommends adults to accumulate at least 150 minutes of moderate intensive aerobic physical activities each week. 

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments