ಜನಸ್ಪಂದನ ನ್ಯೂಸ್. ನೌಕರಿ : ಗಡಿ ಭದ್ರತಾ ಪಡೆ (BSF) ತನ್ನ 2025 ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಒಟ್ಟು 3588 ಕಾನ್ಸ್‌ಟೇಬಲ್ (ಟ್ರೇಡ್ಸ್‌ಮನ್) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bsf.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಜುಲೈ 26, 2025 ರಿಂದ ಪ್ರಾರಂಭವಾಗಿದ್ದು, ಅಗಸ್ಟ್ 24, 2025 ರೊಳಗೆ ಪೂರ್ಣಗೊಳ್ಳಬೇಕು.
ಇದನ್ನು ಓದಿ : “ಈ ಲಕ್ಷಣಗಳು ಕಂಡುಬಂದರೆ ನಿಮ್ಮ Kidney ಅಪಾಯದಲ್ಲಿದೆ ಎಂದೇ ಅರ್ಥ.!”
ನೇಮಕಾತಿ ಕುರಿತ ಪ್ರಮುಖ ಮಾಹಿತಿಗಳು :
- ಆಯೋಜನಾ ಸಂಸ್ಥೆ : ಗಡಿ ಭದ್ರತಾ ಪಡೆ (BSF).
- ಹುದ್ದೆಯ ಹೆಸರು : ಕಾನ್ಸ್‌ಟೇಬಲ್ (ಟ್ರೇಡ್ಸ್‌ಮನ್).
- ಒಟ್ಟು ಹುದ್ದೆಗಳ ಸಂಖ್ಯೆ : 3,588.
- ಪುರುಷರಿಗಾಗಿ : 3406.
- ಮಹಿಳೆಯರಿಗೆ : 182.
ವಿದ್ಯಾರ್ಹತೆ :
ಅರ್ಹತೆಯ ಅವಲೋಕನ (Trade ಮೇಲೆ ಆಧಾರಿತ) :
- ಮೆಟ್ರಿಕ್ (10ನೇ ತರಗತಿ) ಉತ್ತೀರ್ಣರಾಗಿರಬೇಕು.
- ಸಂಬಂಧಿತ ಟ್ರೇಡ್‌ಗೆ ಅನುಗುಣವಾದ ಐಟಿಐ ಪ್ರಮಾಣಪತ್ರ ಅಥವಾ ಅನುಭವ ಹೊಂದಿರಬೇಕು.
ಇದನ್ನು ಓದಿ : Husband : ಹಣಕ್ಕಾಗಿ ಪತ್ನಿಯ ಖಾಸಗಿ ಕ್ಷಣಗಳನ್ನೇ ಕ್ಯಾಮೆರಾದಲ್ಲಿ ಸೆರೆಹಿಡಿದ ಪತಿ.!
ಅರ್ಜಿ ಶುಲ್ಕ :
- ಸಾಮಾನ್ಯ / OBC / EWS : ರೂ.100/-
- SC / ST / ಮಹಿಳೆಯರು : ಶುಲ್ಕವಿಲ್ಲ
- ಪಾವತಿ ವಿಧಾನ : ಆನ್‌ಲೈನ್
ವಯಸ್ಸಿನ ಮಿತಿ (24-08-2025 ಕ್ಕೆ) :
- ಕನಿಷ್ಠ : 18 ವರ್ಷ.
- ಗರಿಷ್ಠ : 25 ವರ್ಷ.
- ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿಯ ಆಧಾರದ ಮೇಲೆ ಸಡಿಲಿಕೆ ಅನ್ವಯಿಸುತ್ತದೆ.
- 💼 ವೇತನ ಮತ್ತು ಭತ್ಯೆಗಳು:
- PAy Scale : ರೂ. 21,700 – ರೂ.69,100/- (ಪೇ ಲೆವೆಲ್ – 3)
ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯಿಸಬಹುದಾದ ಭತ್ಯೆಗಳೂ ಸೇರಿರುತ್ತವೆ.
BSF ನೇಮಕಾತಿಯ ಹುದ್ದೆಗಳ ಹೆಸರು :
- ಕಾರ್ಪೆಂಟರ್.
- ಪ್ಲಂಬರ್.
- ಪೇಂಟರ್.
- ಎಲೆಕ್ಟ್ರಿಷಿಯನ್.
- ಪಂಪ್ ಆಪರೇಟರ್.
- ಅಪ್ಹೋಲ್ಸ್ಟರರ್.
- ಕಾಬ್ಲರ್.
- ಟೈಲರ್.
- ವಾಷರ್‌ಮನ್.
- ಕ್ಷೌರಿಕ.
- ಸ್ವೀಪರ್.
- ಖೋಜಿ / ಸೈಸ್.
ಇದನ್ನು ಓದಿ : Honor-killing : ಪ್ರೇಮ ವಿವಾಹವಾಗಿದ್ದ ನವಜೋಡಿಯನ್ನು ಗುಂಡಿಕ್ಕಿ ಹತ್ಯೆ ; 13 ಜನರ ಬಂಧ..!
BSF ಪ್ರಮುಖ ದಿನಾಂಕಗಳು :
- ಅರ್ಜಿ ಪ್ರಕ್ರಿಯೆ ಆರಂಭ ದಿನಾಂಕ : 26-07-2025.
- ಅಂತಿಮ ದಿನಾಂಕ : 24-08-2025 (ರಾತ್ರಿ 11:59ರವರೆಗೆ).
- ಅಧಿಕೃತ ವೆಬ್‌ಸೈಟ್ : https://www.bsf.gov.in/
ಹೇಗೆ ಅರ್ಜಿ ಸಲ್ಲಿಸಲು.?
- ಅಧಿಕೃತ ವೆಬ್‌ಸೈಟ್‌ಗೆ ಹೋಗ, https://www.bsf.gov.in/
- “Recruitment” ವಿಭಾಗದಲ್ಲಿ ನೀವು BSF Constable Tradesman Notification 2025 ಲಿಂಕ್ ಕ್ಲಿಕ್ ಮಾಡಿ.
- ನಿಗದಿತ ಅರ್ಜಿ ನಮೂನೆಯ ಮೂಲಕ ಎಲ್ಲಾ ಮಾಹಿತಿಯನ್ನು ತುಂಬಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಶುಲ್ಕ ಪಾವತಿ ಮಾಡಿ, ಅರ್ಜಿ ಸಲ್ಲಿಸಿ.
- ಪ್ರಿಂಟ್‌ಔಟ್ ಪ್ರತಿಯನ್ನು ಸಂಗ್ರಹಿಸಿ.
ಇದನ್ನು ಓದಿ : Health : 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ವರ್ಷಕ್ಕೊಮ್ಮೆ ಈ ಆರೋಗ್ಯ ತಪಾಸಣೆಗಳನ್ನು ಮಾಡಿಸಲೇಬೇಕು.!
BSF ಮಹತ್ವದ ಲಿಂಕ್‌ಗಳು :
- 👉 BSF ನೇಮಕಾತಿ ಅಧಿಕೃತ ವೆಬ್‌ಸೈಟ್
- 👉 ಅಧಿಸೂಚನೆ PDF ಡೌನ್ಲೋಡ್ (ಅಧಿಸೂಚನೆ ಲಿಂಕ್ ಲಭ್ಯವಾದ ಬಳಿಕ ಸೇರಿಸಬಹುದು)
> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.
Underage girl : ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿದ ಯುವಕ ; ಮುಂದೆನಾಯ್ತು.?
ಜನಸ್ಪಂದನ ನ್ಯೂಸ್, ಡೆಸ್ಕ್ : ಅಪ್ರಾಪ್ತ ಬಾಲಕಿ (Underage girl) ಯೊಬ್ಬಳಿಗೆ ಯುವಕನೊಬ್ಬ ಕತ್ತಿಗೆ ಚಾಕು ಹಿಡಿದು ಬೆದರಿಕೆ ಹಾಕುತ್ತಿರುವ ಭಯಾನಕ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಅದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಬಸಪ್ಪ ಪೇಠ ಕರಂಜೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದ ಈ ಪ್ರದೇಶದ ಜನತೆ ಬೆಚ್ಚಿಬಿದ್ದುಿದ್ದಾರೆ. ಸದ್ಯ ಅದರ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನು ಓದಿ : Schoolgirl : ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟ ಶಾಲಾ ವಿದ್ಯಾರ್ಥಿನಿ.!
ಸಂಜೆ 4 ಗಂಟೆಯ ಸುಮಾರಿಗೆ, ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಬಾಲಕಿ (Underage girl) ಯನ್ನು ಈ ಯುವಕ ರಸ್ತೆಮಧ್ಯೆ ಅಡ್ಡಗಟ್ಟಿದ್ದಾನೆ. ವಿಡಿಯೋ ದೃಶ್ಯಗಳಲ್ಲಿ ಕಾಣಿಸುತ್ತಿರುವಂತೆ, ಆತ ಆಕೆಯ (Underage girl) ಕುತ್ತಿಗೆಗೆ ಚಾಕು ತೋರಿಸಿ ಬೆದರಿಕೆ ಹಾಕುತ್ತಿದ್ದು, ಸುತ್ತಮುತ್ತ ಜನರು ಆತಂಕದಿಂದ ಕೂಗುತ್ತಿದ್ದರೂ ಕೂಡ ಯುವಕ ಯಾರ ಮಾತಿಗೂ ಕಿವಿಗೊಡದೆ ಬಾಲಕಿ (Underage girl) ಗೆ ಬೆದರಿಕೆ ಮುಂದುವರೆಸಿದ್ದಾನೆ.
ಘಟನೆಯ ಸಂದರ್ಭದಲ್ಲಿಯೇ ಸ್ಥಳೀಯ ಯುವಕನೋರ್ವ ಧೈರ್ಯ ತೋರಿ, ಸಮೀಪದ ಗೋಡೆಯೊಂದರ ಮೇಲೇರಿ ಹಿಂದಿನಿಂದ ಬಂದು ಆರೋಪಿಯನ್ನು ಹಿಡಿದು ಆಗಬಹುದಾದ ದುರ್ಘಟನೆಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ.
ತಕ್ಷಣ ಸ್ಥಳದಲ್ಲಿದ್ದ ಜನರು ಆತನ ಕೈಯಿಂದ ಚಾಕು ಕಿತ್ತುಕೊಂಡು ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಗೆ ಯಾವುದೇ ದೈಹಿಕ ಗಾಯವಾಗದಿರುವುದು ಸಹ ಶ್ಲಾಘನೀಯ.
ಆರೋಪಿ ಹಾಗೂ ಬಾಲಕಿ (Underage girl) ಒಂದೇ ಪ್ರದೇಶದವರು :
ಪ್ರಾಥಮಿಕ ವರದಿಗಳ ಪ್ರಕಾರ, ಆರೋಪಿ ಹಾಗೂ ಬಾಲಕಿ ಒಂದೇ ಪ್ರದೇಶದವರಾಗಿದ್ದು, ಈ ಘಟನೆಯ ಹಿಂದೆ ಏನು ಕಾರಣ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇದನ್ನು ಓದಿ :SWR : ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಖಾಲಿ ಇರುವ 904 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಈ ಬಾಲಕಿ (Underage girl) ಯನ್ನು ಕಳೆದ ಕೆಲವು ದಿನಗಳಿಂದ ಬೆನ್ನಟ್ಟುವುದು, ಬೆದರಿಕೆ ಹಾಗೂ ಕಿರುಕುಳ ನೀಡುತ್ತಾ ಬಂದಿದ್ದಾನೆ ಎನ್ನಲಾಗುತ್ತಿದೆ. ಈ ನಡುವೆ ಆರೋಪಿಯೂ ಸಹ ಅಪ್ರಾಪ್ತ ಎಂದು ಹೇಳಲಾಗುತ್ತಿದೆ.
ವಿಡಿಯೋ :
महाराष्ट्र में सतारा में नाबालिग छात्रा को चाकू दिखाकर धमकाने का वीडियो वायरल, आरोपी भी नाबालिग#Maharashtra | #ViralVideo pic.twitter.com/YY9nVwiqFh
— NDTV India (@ndtvindia) July 21, 2025