Monday, October 27, 2025

Janaspandhan News

HomeHealth & FitnessHeart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!
spot_img
spot_img
spot_img

Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮಗಿದು ಗೊತ್ತೇ.? ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಸರಳ (Heart-Test) ಪರೀಕ್ಷೆ ಒಂದಿದೆ. ಆ ಮೂಲಕ ಆಗಬಹುದಾದ ದೊಡ್ಡ ಸಮಸ್ಯೆಯನ್ನು ಮುಂಚಿತವಾಗಿಯೇ ತಡೆಯಬಹುದು. ಬನ್ನಿ ಈಗ ಆ ಸರಳ ಪರೀಕ್ಷೆಯ ಬಗ್ಗೆ ತಿಳಿಯೋಣ.

ಹೃದಯಾಘಾತ ಎಂದರೆ ತೀವ್ರ ನೋವು, ಎದೆಬಡಿತ ಹೆಚ್ಚಳ ಮತ್ತು ತುರ್ತು ಚಿಕಿತ್ಸೆ ಎಂಬುದು ಬಹುತೇಕ ಜನರ ಕಲ್ಪನೆ. ಆದರೆ ‘ಸೈಲೆಂಟ್‌ ಹೃದಯಾಘಾತ’ ಎನ್ನುವುದು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ಆಗುವ ಒಂದು ಅಪಾಯಕಾರಿ ಘಟನೆ. ಕೆಲವೊಮ್ಮೆ ವ್ಯಕ್ತಿಯು ಈ ರೀತಿಯ ಹೃದಯಾಘಾತವನ್ನು ಅನುಭವಿಸಿದ್ದರೂ ತಾನೇ ಅದನ್ನು ಅರಿಯದೇ ಇರುತ್ತಾರೆ.

ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!

ಬೆಳಿಗ್ಗೆ ಎದ್ದ ತಕ್ಷಣವೇ ತಾವು ಮಾಡಬಹುದಾದ ಒಂದು ಸರಳ ಪರೀಕ್ಷೆ (Heart-Test) ಯ ಮೂಲಕ ಶರೀರದ ರಕ್ತ ಸಂಚಾರದ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಇದು ಆರಂಭಿಕ ಹೃದಯ ಸಂಬಂಧಿತ ತೊಂದರೆಗಳನ್ನು ಪತ್ತೆಹಚ್ಚಲು ಸಹಕಾರಿಯಾಗಬಹುದು.

ಈ ಕುರಿತು ವೈದ್ಯರು ಸೋಶಿಯಲ್‌ ಮೀಡಿಯಾದಲ್ಲಿ ಪರೀಕ್ಷೆ (Heart-Test) ಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅನೇಕರು ಇದರಿಂದ ಲಾಭಪಡೆಯುತ್ತಿದ್ದಾರೆ.

ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪರೀಕ್ಷೆ  (Heart-Test) ಹೇಗೆ ಮಾಡುವುದು?
  1. ಬೆಳಿಗ್ಗೆ ಎದ್ದು ಹಾಸಿಗೆಯ ಮೇಲೆ ನೇರವಾಗಿ ಕುಳಿತುಕೊಳ್ಳಿ.
  2. ನಿಮ್ಮ ಎರಡು ತೋಳುಗಳನ್ನು ತಲೆಯ ಮೇಲೆ ಉದ್ದನೆಯಾಗಿ ಎತ್ತಿ.
  3. ಈ ಸ್ಥಿತಿಯಲ್ಲಿ 3 ಸೆಕೆಂಡುಗಳ ಕಾಲ ಹಾಗೆಯೇ ಹಿಡಿದುಕೊಳ್ಳಿ.
ನಿಮ್ಮ ಎರಡು ತೋಳುಗಳನ್ನು ತಲೆಯ ಮೇಲೆ ಉದ್ದನೆಯಾಗಿ ಎತ್ತಿ.

ಈಗ ಕೆಳಗಿನ ಲಕ್ಷಣಗಳಿವೆಯೇ ಎನ್ನುವುದನ್ನು ಗಮನವಿಡಿ :

  • ಎದೆಯಲ್ಲಿ ಬಿಗಿತ ಅಥವಾ ಅಸಹಜ ಭಾವನೆ ಇದೆಯೇ?
  • ಬೆರಳಿನಲ್ಲಿ ಗಡ್ಡೆಗಟ್ಟಿದ ಅನುಭವವಾಗುತ್ತಿದೆಯೇ?
  • ತಲೆಭಾರ, ತೀವ್ರ ದಣಿವಿನ ಭಾವನೆ ಇದ್ದಕ್ಕಿದ್ದಂತೆ ಬರುತ್ತಿದೆಯೇ?
ಇದನ್ನು ಓದಿ : Gastric-problems : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ.? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು.
ಈ Heart-Test ಮಾಡುವಾಗ ಏನಾದರೂ ತೊಂದರೆ ಕಂಡುಬಂದರೆ ಎಚ್ಚರಿಕೆ ಅಗತ್ಯ.!

ಈ ಪರೀಕ್ಷೆಯಲ್ಲಿ ನೀವು ಒಂದು ಬದಿಯ ತೋಳು ಸರಿಯಾಗಿ ಎತ್ತಲು ಅಸಾಧ್ಯವಾಯಿತೆ? ಅಥವಾ ತಕ್ಷಣವೇ ತಳಕ್ಕೆ ಬೀಳುತ್ತಿದೆಯೆ? ಇಂತಹ ಸಂದರ್ಭಗಳಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಇದೊಂದು ಪ್ರಾಥಮಿಕ ಎಚ್ಚರಿಕೆಯ ಸೂಚನೆಯಾಗಬಹುದು. ಇದು ದೇಹದಲ್ಲಿ ರಕ್ತದ ಹರಿವಿನ ಸಮಸ್ಯೆ ಉಂಟಾಗುತ್ತಿರುವ ಸೂಚನೆ.

ಈ ಪರೀಕ್ಷೆಯ ಅಗತ್ಯತೆ ಮತ್ತು ಪ್ರಯೋಜನಗಳು :

ರಕ್ತದ ಹಾರಿಯುವ ದಾರಿಗಳಲ್ಲಿ (Arteries) ಸಂಕುಚನೆಯಾಗಿದೆಯೆಂಬುದನ್ನು ಈ ಸರಳ ಪರೀಕ್ಷೆಯು ಸೂಚಿಸಬಹುದು. ಆರಂಭಿಕ ಹಂತದಲ್ಲಿಯೇ ಈ ತೊಂದರೆಯನ್ನು ಗುರುತಿಸಿ ತಕ್ಕ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಹೃದಯಾಘಾತದ ಅಪಾಯವನ್ನು ಶೇ.50ರಷ್ಟು ಕಡಿಮೆ ಮಾಡಬಹುದಾಗಿದೆ. ತಜ್ಞ ವೈದ್ಯರ ಪ್ರಕಾರ, ಸಮಯಕ್ಕೆ ಸರಿಯಾದ ಕ್ರಮ ಸಾವು ಹಾಗೂ ಗಂಭೀರ ಹೃದಯ ಸಮಸ್ಯೆಗಳನ್ನು ತಪ್ಪಿಸಬಹುದಾದ ಪ್ರಮುಖ ಮಾರ್ಗವಾಗಿದೆ.

ಇದನ್ನು ಓದಿ : IBPS ಕ್ಲರ್ಕ್ ನೇಮಕಾತಿ 2025 : ಆಗಸ್ಟ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ.!

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.


ಮನೆಗೆ ಅಚಾನಕ್ ಬಂದ ಪತಿ : Lover ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪತ್ನಿ ; ಮುಂದೆ.?

Lover

ಜನಸ್ಪಂದನ ನ್ಯೂಸ್‌, ಹಾಸನ : ಅಚಾನಕ್‌ ಆಗಿ ಮನೆಗೆ ಬಂದಾಗ, ಪತ್ನಿ ಆಕೆಯ ಪ್ರಿಯಕರ (Lover) ನ ಜೊತೆ ಇದ್ದಾಗಲೇ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿರುವ ಘಟನೆ ಸಕಲೇಶಪುರ ತಾಲೂಕಿನ ಲಕ್ಮೀಪುರ ಗ್ರಾಮದಲ್ಲಿ ನಡೆದಿದ್ದು, ಪ್ರಶ್ನೆ ಮಾಡಿದ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಮಹಿಳೆಯ ಪತಿ ನಂದೀಶ್ ಅವರು ಕೆಲಸಕ್ಕೆಂದು ಮನೆಯಿಂದ ಹೊರಟು, ಅರ್ಧ ಗಂಟೆಯೊಳಗೆ ಕೆಲಸವಿಲ್ಲದ ಕಾರಣ ಮರಳಿ ಮನೆಗೆ ಬಂದಿದ್ದಾರೆ. ಮನೆಗೆ ಬರುವಷ್ಟರಲ್ಲಿ ಮನೆಯಲ್ಲಿಯ ದೃಶ್ಯ ನೋಡಿ ನಂದೀಶ್ ಹೌಹಾರಿದ್ದಾನೆ.

ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪತಿಯ ಮೇಲೆ Lover ಹಲ್ಲೆ :

ಮನೆ ಒಳಗೆ ತನ್ನ ಪತ್ನಿ ಶ್ರುತಿ ಹಾಗೂ ಪಕ್ಕದ ಗ್ರಾಮದ ಯುವಕ ಪತ್ನಿಯ Lover ಸುಜಿತ್ ಇಬ್ಬರೇ ಇದ್ದಿದ್ದನ್ನು ಕಂಡು ಶಾಕ್‌ಗೊಳಗಾಗಿದ್ದಾರೆ. ಈ ಕುರಿತು ನಂದೀಶ್ ಪ್ರಶ್ನಿಸುತ್ತಲೇ ವಿಷಯ ವಿಕೋಪಕ್ಕೆ ತಿರುಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಮೇಲೆ ಪತ್ನಿಯ ಪ್ರಿಯಕರ (Lover) ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಪತ್ನಿ ಮತ್ತು ಪ್ರಿಯಕರ (Lover) ಮಧ್ಯೆ ಹಿಂದಿನಿಂದಲೂ ಅಕ್ರಮ ಸಂಬಂಧವಿರುವುದು ಖಚಿತವಾಗಿದ್ದು, ಈ ಸಂಬಂಧವು ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಎನ್ನಲಾಗಿದೆ. ಆರೋಪಿ ಸುಜಿತ್ ಹೋಂ ಗಾರ್ಡ್ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ : “eleven” ಸ್ಪೆಲ್ಲಿಂಗ್ ಬರೆಯಲಾಗದ Teacher ; ರೂ.70,000 ಪ್ರತಿ ತಿಂಗಳು ವೇತನ.!

ಅಕ್ರಮ ಸಂಬಂಧ ಬಯಲಾಗುತ್ತದೆ ಎಂಬ ಭಯದಿಂದ, ಸ್ಥಳದಲ್ಲಿಯೇ ಉಗ್ರನಾಗಿದ Lover ಸುಜಿತ್, ನಂದೀಶ್ ಅವರ ಮೇಲೆ ಹಲ್ಲೆ ನಡೆಸಿದ ಎಂದು ಹೇಳಲಾಗುತ್ತಿದೆ. ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ನಂದೀಶ್ ಅವರನ್ನು ತಕ್ಷಣವೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಪ್ರಕರಣ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂದೀಶ್ ಕುಟುಂಬಸ್ಥರು ಆರೋಪಿ Lover ಸುಜಿತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments