Wednesday, May 22, 2024
spot_img
spot_img
spot_img
spot_img
spot_img
spot_img

3 ದಿನ ಕೂಡಿಹಾಕಿ ಅತ್ಯಾಚಾರವೆಸಗಿ ಬಳಿಕ ಮತ್ತೊಂದು ವಿಕೃತಿ ಮೆರೆದ ಕಾಮುಕ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತನ್ನನ್ನು ಮದುವೆಯಾಗಲು ನಿರಾಕರಿಸಿದ (Refused to marry) ಬಾಲಕಿಯನ್ನು 3 ದಿನಗಳ ಕಾಲ ಕೂಡಿ ಹಾಕಿ ಅತ್ಯಾಚಾರವೆಸಗಿದ ಕಾಮುಕ, ಆಕೆಯ ಮುಖದ ಮೇಲೆ ಕಾದ ಕಬ್ಬಿಣದಿಂದ ತನ್ನ ಹೆಸರನ್ನು ಬರೆದು ವಿಕೃತಿ ಮೆರೆದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಇಂತದ್ದೊಂದು ಅಮಾನುಷ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : strange culture : ಭಾರತದ ಈ ಊರಲ್ಲಿ ಹೆಣ್ಣು ಮಕ್ಕಳು ಬಾಡಿಗೆಗೆ ಸಿಗ್ತಾರಂತೆ.!

17 ವರ್ಷದ ಅಪ್ರಾಪ್ತೆಯನ್ನು ಮೂರು ದಿನಗಳ ಕಾಲ ಸೆರೆಯಲ್ಲಿಟ್ಟುಕೊಂಡು ಮದುವೆಗೆ ಪೀಡಿಸಲಾಗಿದೆ. ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ನಂತರ ಪದೇ ಪದೇ ಲೈಂಗಿಕ ಕಿರುಕುಳ (sexual harassment) ನೀಡಲಾಗಿದೆ.

ಸಂತ್ರಸ್ತೆಯನ್ನು ಥಳಿಸಿದ ಆರೋಪಿಯು ಬಿಸಿ ಕಬ್ಬಿಣದ ರಾಡ್ (iron rod) ಬಳಸಿ ‘ಅಮನ್’ ಎಂದು ಅಕ್ಷರಗಳನ್ನು ಅವಳ ಮುಖದ ಮೇಲೆ ಬರೆಯಲಾಗಿದೆ.

ಆರೋಪಿ 22 ವರ್ಷದವನಾಗಿದ್ದು, ಶಾಲೆ ಅರ್ಧಕ್ಕೆ ಬಿಟ್ಟು ಹೈದರಾಬಾದ್‌ನ ಸಲೂನ್‌ನಲ್ಲಿ ಕೆಲಸ ಮಾಡುತ್ತಾನೆ. ಪೊಲೀಸರು ಆರಂಭದಲ್ಲಿ ಅಕ್ರಮ ಬಂಧನ ಮತ್ತು ಸ್ವಯಂಪ್ರೇರಣೆಯಿಂದ (Voluntarily) ಗಾಯಗೊಳಿಸುವ ‘ಕಡಿಮೆ’ ಅಪರಾಧ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ಇದನ್ನು ಓದಿ : ಪಶುಸಂಗೋಪನಾ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಆದರೆ ಅಪ್ರಾಪ್ತೆ ತನ್ನ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ್ದು, ನಂತರ ಸಿಆರ್‌ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ, ಪೋಕ್ಸೊ ಕಾಯ್ದೆಯ ಜೊತೆಗೆ ಅತ್ಯಾಚಾರಕ್ಕೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಎಫ್‌ಐಆರ್‌ಗೆ ಸೇರಿಸಲಾಯಿತು ಎನ್ನಲಾಗಿದೆ.

spot_img
spot_img
spot_img
- Advertisment -spot_img