ಜನಸ್ಪಂದನ ನ್ಯೂಸ್, ಹೋ ಚಿ ಮಿನ್ಹ್ (ವಿಯೆಟ್ನಾಂ) : ಡಿಸೆಂಬರ್ 7 ರಂದು, 16 ವರ್ಷದ ಬಾಲಕನೊಬ್ಬನು ವಿಚಿತ್ರ ಪ್ರಯೋಗ ಮಾಡುವ ವೇಳೆ ಖಾಸಗಿ ಅಂಗದ ಮೂಲಕ ಮೊಬೈಲ್ ಚಾರ್ಜರ್ ವೈರ್ ತನ್ನ ಮೂತ್ರಕೋಶಕ್ಕೆ ಸಿಲುಕಿಸುವ ಘಟನೆ ನಡೆದಿತ್ತು. ಪರಿಣಾಮ ತಕ್ಷಣವೇ ಆತನನ್ನು ಶಸ್ತ್ರಚಿಕಿತ್ಸೆಗೆ ಕರೆದೊಯ್ಯಲಾಗಿತ್ತು.
ಬಾಲಕನ ನೋವು ಹೆಚ್ಚುತ್ತಿದರೂ ಸಹ ಆತ ವಿಷಯವನ್ನು ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಕುಟುಂಬದವರು ಬಾಲಕನ ದುಃಖದಿಂದ ತೀವ್ರ ಗೊಂದಲಕ್ಕೊಳಗಾಗಿದ್ದರು. ಕೊನೆಗೆ ನೋವು ಹೆಚ್ಚುತ್ತಿದಂತೆಯೇ ಆತನನ್ನು ಆಸ್ಪತ್ರೆಗೆ ಕರೆದ್ದೊಯ್ಯಲಾಯಿತು.
ಸ್ಥಳೀಯ ಆನ್ ಬಿನ್ಹ್ ಆಸ್ಪತ್ರೆಯ ವೈದ್ಯರು ಮೊದಲಿಗೆ ಎಂಡೋಸ್ಕೋಪಿಕ್ ವಿಧಾನವನ್ನು ಪ್ರಯತ್ನಿಸಿದರು. ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್ ವೈರ್ ಇರುವುದು ಕಂಡು ವೈದ್ಯರು ಆಶ್ಚರ್ಯಚಕಿತರಾದರು. ಆದರೆ ಚಾರ್ಜರ್ ದೇಹದೊಳಗೆ ಸುತ್ತಿಕೊಂಡು ನಜ್ಜುಗುಜ್ಜವಾಗಿದ್ದರಿಂದ ಶಸ್ತ್ರಚಿಕಿತ್ಸೆ ಕ್ರಮ ಜಟಿಲವಾಗಿತ್ತು.
ಮೊಬೈಲ್ ಚಾರ್ಜರ್ ವೈರ್ ಹೊರ ತೆಗೆದ ವೈದ್ಯರು :
ವೈದ್ಯರು ಸುಮಾರು ಎರಡು ಗಂಟೆಗಳ ತ್ವರಿತ ಶಸ್ತ್ರಚಿಕಿತ್ಸೆ ನಡೆಸಿ ಮೊಬೈಲ್ ಚಾರ್ಜರ್ ವೈರ್ಅನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯ ವೇಳೆ ಮೂತ್ರಕೋಶದ ಕೆಲವು ಭಾಗವು ಚಾರ್ಜರ್‌ನ ಪರಿಣಾಮದಿಂದ ಕೊಳೆಯುತ್ತಿರುವುದು ಕಂಡು, ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಚಿಕಿತ್ಸೆಯ ಎರಡು ದಿನಗಳ ನಂತರ, ಬಾಲಕನು ವೈದ್ಯಕೀಯ ಸಲಹೆ ಮತ್ತು ಮನಃಶಾಂತಿ ಕುರಿತ ಕೌನ್ಸೆಲಿಂಗ್ ಪಡೆದ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ವೈದ್ಯರು ಕುಟುಂಬಕ್ಕೆ, ಈ ರೀತಿಯ ಅಪಾಯಕಾರಿ ಪ್ರಯೋಗಗಳಿಂದ ದೂರವಿರುವುದು ಅತ್ಯಂತ ಮುಖ್ಯ ಎಂದು ಶಿಫಾರಸು ಮಾಡಿದ್ದಾರೆ.
ಇದನ್ನು ಓದಿ : ರಸ್ತೆಯಲ್ಲಿ ಹೃದಯಾಘಾತ : ರಾತ್ರಿ ಸಹಾಯಕ್ಕೆ ಬಾರದ ಜನ ; 34 ವರ್ಷದ ಯುವಕ ಸಾವು.
Disclaimer : ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಆಧಾರದಲ್ಲಿದೆ. ಜನಸ್ಪಂದನ ನ್ಯೂಸ್ ಯಾವುದೇ ದಾವೆ ಅಥವಾ ದೃಢೀಕರಣ ಮಾಡುವುದಿಲ್ಲ.






