ಜನಸ್ಪಂದನ ನ್ಯೂಸ್, ಬೆಂಗಳೂರು : 21 ವರ್ಷ ವಯಸ್ಸಿನ ಯುವತಿಯೊರ್ವಳು ಟೀ ಕುಡಿಯಲು ಮನೆಗೆ ಬನ್ನಿ (Come home for tea) ಎಂದು ಕರೆದು 57 ವರ್ಷದ ಅಂಕಲ್ ನನ್ನು ಹನಿಟ್ರ್ಯಾಪ್ ಮಾಡಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ (Byadaralli Police Station) ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ವಿವರ :
57 ವರ್ಷದ ಅಂಕಲ್ ಸಿವಿಲ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಡಿ. 9ರಂದು ಆತನನ್ನು ಯುವತಿಯು ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಮೊದಲೇ ಪ್ಲ್ಯಾನ್ ಮಾಡಿದಂತೆ ಅಂಕಲ್ ಮನೆಯಲ್ಲಿದ್ದ ವೇಳೆ ಯುವತಿಯ ಗ್ಯಾಂಗ್ ನ ಮೂವರು ಸಹಚರರು ಪೊಲೀಸ್ ಗೆಟಪ್ ಹಾಕಿಕೊಂಡು ಬಂದಿದ್ದಾರೆ.
ಮನೆಯಲ್ಲಿ ಅನೈತಿಕ ಚಟುವಟಿಕೆ (Unethical activity) ನಡೆಸುತ್ತಿದ್ದೀರಾ? ನಿಮ್ಮನ್ನು ಅರೆಸ್ಟ್ ಮಾಡಿ ಕರಕೊಂಡು ಹೋಗುತ್ತೇವೆ ಎಂದು ನಾಟಕ ಮಾಡಲು ಶುರು ಮಾಡಿದ್ದಾರೆ.
ಇದನ್ನು ಓದಿ : “ನಮ್ಮ ಅತ್ತೆ ಬೇಗ ಸಾ*ಯ*ಬೇಕು ತಾಯಿ” ಅಂತ Note ಮೇಲೆ ಬರೆದು ಕಾಣಿಕೆ ಹಾಕಿದ ಸೊಸೆ.!
ಅಲ್ಲದೇ ಪೊಲೀಸರ ಸೋಗಿನಲ್ಲಿ (Impersonation of the police) ಬಂದಿದ್ದ ಮೂವರು ಆಗಿದ್ದು ಆಗಿ ಹೋಯಿತು, ಠಾಣೆಗೆ ಹೋಗುವುದು ಬೇಡ, ಏನಿದ್ದರೂ ಇಲ್ಲೇ ಸೆಟಲ್ ಮಾಡಿಕೋ ಎಂದು ಅಂಕಲ್ಗೆ ಆಫರ್ ನೀಡಿದ್ದಾರೆ.
ಮೊದಲೇ ಭಯಗೊಂಡಿದ್ದ ಅಂಕಲ್ ನ ಬಳಿ 5 ಲಕ್ಷ ಮೌಲ್ಯದ ಚಿನ್ನ, 29 ಸಾವಿರ ನಗದು, 26 ಸಾವಿರ ಹಣ ಪೋನ್ ಪೇ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಾಲದೆಂಬಂತೆ ಯಾರಿಗೂ ಹೇಳಬೇಡ ಎಂದು ಬೆದರಿಸಿ (bully) ಅಂಕಲ್ ಬಟ್ಟೆ ಬಿಚ್ಚಿಸಿ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರಂತೆ. ಇದನ್ನೆಲ್ಲ ನೋಡಿದ ಅಂಕಲ್ ಅನುಮಾನಗೊಂಡು (Suspicious) ಠಾಣೆಗೆ ದೂರು ನೀಡಿದ್ದಾರೆ.
ಇದನ್ನು ಓದಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ ಹಿನ್ನಲೆ : ನಾಳೆ (ಡಿ.27) ಶಾಲಾ ಕಾಲೇಜುಗಳಿಗೆ ರಜೆ.!
ಪೊಲೀಸರು ತನಿಖೆ ಕೈಗೊಂಡು (Investigate) ಮೂವರು ಆರೋಪಿಗಳನ್ನು ಬಂಧಿಸಿದ್ದು, ನಯನಾಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದಿನ ಸುದ್ದಿ : Special News : ಗುಡ್ಡದಂತ ಸಮಸ್ಯೆ ಬಂದರೂ ಎಳ್ಳಷ್ಟು ಹೆದರಿಕೊಳ್ಳದವರಿಗೆ ಧೈರ್ಯ, ವಿಶ್ವಾಸ ಬರೋದೆಲ್ಲಿಂದ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಆನೆ ದಾರಿಯಲ್ಲಿ ಹೋಗುತ್ತಿದ್ದ ವೇಳೆ ನಾಯಿಗಳು ಬೊಗಳಿದರೆ ಅದು ಕ್ಯಾರೆ ಎನ್ನುವುದಿಲ್ಲ. ಯಾಕೆಂದರೆ ಆ ಪ್ರಾಣಿಗೆ ಅದರದ್ದೆ ಆದ ಸ್ಥಾನ ಇದೆ. ಈ ಮಾತಿಗೆ ಅನ್ವಯಿಸುವಂತೆ ಜೀವನದಲ್ಲಿ ಎಷ್ಟೇ ಕಷ್ಟಗಳು (Problems) ಬಂದರೂ ಅದನ್ನು ಎದುರಿಸಿ ಮುಂದೆ ಬರುವ ಕೆಲವು ಜನರು ಎಲ್ಲರಿಗೂ ಸ್ಪೂರ್ತಿ ಇದ್ದಂತೆ. ಯಾವುದೇ ಸಮಸ್ಯೆ ಇರಲಿ ಎಲ್ಲಿಲ್ಲದ ಆತ್ಮವಿಶ್ವಾಸ (Confidence) ಮತ್ತು ಮುಖದಲ್ಲಿ ಮಂದಹಾಸ ಇದ್ದೇ ಇರುತ್ತದೆ. ಅವರು ಮಾನಸಿಕವಾಗಿ ಧೈರ್ಯವಂತರಾಗಿದ್ದರೆ (mentally brave) ಯಾವುದೇ ಸಮಸ್ಯೆಗಳನ್ನು ತುಂಬಾ ಸರಳವಾಗಿ ನಿಭಾಯಿಸುವ ಶಕ್ತಿ ಅವರಲ್ಲಿರುತ್ತದೆ.
* ಹೆಚ್ಚಿನ ಆಂತರಿಕ ಶಕ್ತಿ ಹೊಂದಿರುವ ಜನರು (People with high inner strength) ದುರ್ಬಲರಾಗಿರುವುದು ಎಂದರೆ ಹೇಡಿತನದ ಲಕ್ಷಣವಲ್ಲ ಎಂಬುದನ್ನು ಅರಿತುಕೊಂಡಿರುತ್ತಾರೆ. ಇವರು ತಮ್ಮ ದುರ್ಬಲತೆಯನ್ನು (weak) ಸ್ವೀಕರಿಸುತ್ತಾರೆ. ಇದು ಧೈರ್ಯ ಮತ್ತು ವಿಶ್ವಾಸಾರ್ಹತೆಗೆ ಸಾಕ್ಷಿ ಎನ್ನಬಹುದು.
ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!
* ಸಂಪರ್ಕಗಳನ್ನು ಬೆಳೆಸಿಕೊಳ್ಳುವುದು ಈ ಜನರ ಉತ್ತಮ ಅಭ್ಯಾಸವಾಗಿದೆ.ಇವರು ಸಂಪರ್ಕಗಳನ್ನು ಬೆಳೆಸಿಕೊಂಡು, ತಮ್ಮ ಸಂಬಂಧಗಳನ್ನು ಗೌರವಿಸುತ್ತಾರೆ. ಅಲ್ಲದೇ ಅದನ್ನು ಉಳಿಸಿಕೊಳ್ಳಲು ಸಮಯ ಹಾಗೂ ಶಕ್ತಿಯನ್ನು ವಿನಿಯೋಗಿಸುತ್ತಾರೆ (expends energy). ಕುಟುಂಬ ಹಾಗೂ ಸ್ನೇಹಿತರ ಬಾಂಧವ್ಯ ಬೆಳೆಸಿಕೊಳ್ಳುವುದರಿಂದ ಅವರಲ್ಲಿ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿಯು ಹೆಚ್ಚುತ್ತದೆ.
* ಆಂತರಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಅನಾನುಕೂಲತೆಯ ಬಗ್ಗೆ ತಲೆನೆ ಕೆಡಿಸಿಕೊಳ್ಳುವುದಿಲ್ಲ. ಎಂತಹ ಪರಿಸರಗಳಲ್ಲಿಯೂ ಅವರು ಹೊಂದಿಕೊಂಡು ತಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ. ಕಷ್ಟವೆಂದು ಹೇಳುತ್ತಾ ಕುಳಿತುಕೊಳ್ಳದೇ ಅದನ್ನು ಹಿಮ್ಮೆಟ್ಟಿಸುವುದು (reversing) ಹೇಗೆಂದು ಯೋಚಿಸಿ, ಪರಿಹಾರ ಕಂಡುಕೊಳ್ಳುತ್ತಾರೆ.
* ಹೆಚ್ಚಿನ ಆಂತರಿಕ ಶಕ್ತಿಯನ್ನು ಹೊಂದಿರುವವರು ಸಾವಧಾನವಾಗಿರುತ್ತಾರೆ. ತಮ್ಮ ಭಾವನೆಗಳು, ಆಲೋಚನೆಗಳು ಮತ್ತು ಕ್ರಿಯೆಗಳ (feelings, thoughts and actions) ಬಗ್ಗೆ ತಿಳಿದುಕೊಂಡಿರುತ್ತಾರೆ. ಅಂತಹವರು ತಮ್ಮೊಳಗೆ ಶಾಂತ ಮನೋಭಾವ ಬೆಳೆಸಿಕೊಂಡಿರುತ್ತಾರೆ.
ಇದನ್ನು ಓದಿ : ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಪ್ರಕರಣದ ಆರೋಪಿ ಜಯೇಶ್ ಹಿಂಡಲಗಾ ಜೈಲಲ್ಲೇ ಆತ್ಮಹತ್ಯೆಗೆ ಯತ್ನ.!
* ಈ ಜನರು ಕೃತಜ್ಞತೆಯ ಭಾವವನ್ನು (A sense of gratitude) ಹೊಂದಿರುತ್ತಾರೆ. ಕೃತಜ್ಞತೆಯು ನಿಮಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಲು ಸಹಾಯ ಮಾಡುತ್ತದೆ. ಜೀವನದಲ್ಲಿ ಸರಳ ಸಂತೋಷಗಳನ್ನು ಹುಡುಕುತ್ತಾರೆ. ತಮ್ಮಲ್ಲಿಲ್ಲ ಎಂದು ತಲೆಕೆಡಿಕೊಳ್ಳುವುದರ ಬದಲಿಗೆ ತಮ್ಮಲ್ಲಿ ಏನಿದೆಯೋ ಅದರಲ್ಲಿ ಸಂತೋಷವನ್ನು ಕಾಣುತ್ತಾರೆ.
* ಆಂತರಿಕವಾಗಿ ಗಟ್ಟಿಯಾಗಿರುವುದು ಇವರ ಇನ್ನೊಂದು ಗುಣ. ತಮ್ಮ ಮಾನಸಿಕ ಗಟ್ಟಿತನವನ್ನು ನಿರ್ಮಿಸುವ ಕೆಲಸ ಮಾಡುತ್ತಾರೆ. ಇದು ವಿಫಲತೆಗಳನ್ನು ಹಿಮ್ಮೆಟ್ಟಿಸಲು ಹಾಗೂ ತೊಂದರೆಗಳನ್ನು ಎದುರಿಸಲು ಧೈರ್ಯ ನೀಡುತ್ತದೆ.
* ಆಂತರಿಕ ಶಕ್ತಿಯನ್ನು ಹೊಂದಿರುವ ಜನರು ಆಳವಾದ ಆಂತರಿಕ ಶಕ್ತಿಯನ್ನು (Deep inner strength) ಹೊಂದಿರುತ್ತಾರೆ. ಈ ಜನರು ತಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಾರೆ. ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅವರು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಗಟ್ಟಿಯಾಗಿರುತ್ತಾರೆ.