ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ಮಾರ್ಟ್‌ಫೋನ್‌ನಲ್ಲಿನ ಏರ್‌ಪ್ಲೇನ್ ಮೋಡ್ (aeroplane mode) ಎನ್ನುವುದು ಎಲ್ಲಾ ವೈರ್‌ಲೆಸ್ ಸಂವಹನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ (shutdown) ಸೆಟ್ಟಿಂಗ್ ಆಗಿದೆ.
ನೀವು ಆಪಲ್ ಸ್ಮಾರ್ಟ್‌ಫೋನ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದರೆ ಯಾವುದೋ ಒಂದು ಹಂತದಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಬಳಸಿರುತ್ತೀರಿ.
ಇದನ್ನು ಓದಿ : Health : ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸಿ.!
ಸ್ಮಾರ್ಟ್‌ಫೋನ್‌ನಲ್ಲಿನ ಈ ವೈಶಿಷ್ಟ್ಯವನ್ನು ವಿಮಾನದಲ್ಲಿ ಕುಳಿತಾಗ ಮಾತ್ರ ಬಳಸುತ್ತಾರೆ ಎಂದು ಅನೇಕರು ಭಾವಿಸಿರುತ್ತಾರೆ, ಆದರೆ ಅದು ಹಾಗಲ್ಲ. ಏರ್‌ಪ್ಲೇನ್ ಮೋಡ್ ಅನೇಕ ಇತರ ಪ್ರಯೋಜನಗಳನ್ನು ಹೊಂದಿದೆ.
* ಸ್ಮಾರ್ಟ್‌ಫೋನ್‌ನ ಏರ್‌ಪ್ಲೇನ್ ಮೋಡ್ ವಿದ್ಯುತ್ಕಾಂತೀಯ ವಿಕಿರಣದ (Electromagnetic radiation) ಅಪಾಯ ಹೆಚ್ಚಿರುವ ಸ್ಥಳಗಳಲ್ಲಿ ತುಂಬಾ ಪ್ರಯೋಜನಕಾರಿ. ಆದ್ದರಿಂದ, ಅಂತಹ ಅಪಾಯವಿರುವ ಸ್ಥಳದಲ್ಲಿ ನೀವೆನಾದ್ರೂ ಇದ್ರೆ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿದರೆ ಒಳ್ಳೆಯದು.
ಇದನ್ನು ಓದಿ : ಮದುವೆಯಾಗಿ 7 ವರ್ಷ ಕಳೆದರೂ First Night ಗೆ ಒಪ್ಪದ ಮಹಿಳೆ; ಹೈಕೋರ್ಟ್ ಹೇಳಿದ್ದೇನು.?
* ಮೊಬೈಲ್ ನೆಟ್‌ವರ್ಕ್ ಸಮಸ್ಯೆಗಳನ್ನು ಸರಿಪಡಿಸಲು ಇದು ಉಪಯೋಗವಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಸರಿಯಾಗಿ ನೆಟ್‌ವರ್ಕ್ ಸಿಗುತ್ತಿಲ್ಲ ಎಂದಾದರೆ ಒಮ್ಮೆ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ ಎರಡು ನಿಮಿಷಗಳ ಬಳಿಕ ಅದನ್ನು ಆಫ್ ಮಾಡಿದರೆ ಆಯಿತು ಫೋನ್ ನಲ್ಲಿ ನೆಟ್‌ವರ್ಕ್ ಸಮಸ್ಯೆ (network problem) ಸರಿಯಾಗುವುದು.
* ಸ್ಮಾರ್ಟ್‌ಫೋನ್ ಅನ್ನು ಏರ್‌ಪ್ಲೇನ್ ಮೋಡ್ ಆನ್ ಮಾಡಿ ಬಳಸಿದರೆ (game etc.), ನಿಮ್ಮ ಬ್ಯಾಟರಿ ಹೆಚ್ಚು ಸಮಯ ಚಾರ್ಜ್ ಬರುತ್ತದೆ (battery takes longer to charge).
ಇದನ್ನು ಓದಿ : ಪಂಚಮಸಾಲಿ ಹೋರಾಟಗಾಗರರ ಮೇಲೆ ಲಾಠಿ ಚಾರ್ಜ್ ; ತೀವ್ರ ಸ್ವರೂಪ ಪಡೆದ ಮೀಸಲಾತಿ ಹೋರಾಟ.!
* ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಸಹ ಏರ್‌ಪ್ಲೇನ್ ಮೋಡ್ ಆನ್ ಮಾಡುವ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದು. ಈ ರೀತಿ ಮಾಡಿ ಚಾರ್ಜ್ ಇಟ್ಟರೆ, ಫೋನ್ ಸುಮಾರು 20-30 ಪ್ರತಿಶತದಷ್ಟು ವೇಗವಾಗಿ (speed) ಚಾರ್ಜ್ ಆಗುತ್ತದೆ.
* ಮೊಬೈಲ್ ಫೋನ್‌ಗಳಿಂದ ಹೊರಹೊಮ್ಮುವ ವಿಕಿರಣವು (Emanent radiation) ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅಗತ್ಯವಿಲ್ಲದ ಸಂದರ್ಭದಲ್ಲಿ ಫೋನ್ ಅನ್ನು ಫ್ಲೈಟ್ ಮೋಡ್ ಇಡುವ ಮೂಲಕ, ಈ ವಿಕಿರಣವು ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುವುದನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.
ಹಿಂದಿನ ಸುದ್ದಿ : ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ಬಾಳೆಹಣ್ಣು ಎಲ್ಲ ಕಾಲದಲ್ಲಿಯೂ ಸಿಗುವಂತಹ ಹಣ್ಣು. ಪೋಷಕಾಂಶಗಳಿಂದ ಸಮೃದ್ಧವಾಗಿರುವ (Rich in nutrients) ಇದರಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ.
ಈ ಬಾಳೆಹಣ್ಣನ್ನು ನಾವು ತಿನ್ನುವುದರಿಂದ ಅನೇಕ ರೀತಿಯ ದೀರ್ಘಕಾಲದ ಕಾಯಿಲೆಗಳಿಂದ (Chronic disease) ಮುಕ್ತಿ ಪಡೆಯಬಹುದಾಗಿದೆ. ಅಲ್ಲದೇ, ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಧಿಕವಾಗಿದ್ದು, ಪ್ರತಿದಿನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ತ್ವರಿತ ಶಕ್ತಿ (Quick power) ಸಿಗುತ್ತದೆ.
ಇದನ್ನು ಓದಿ : ಯುವತಿಗೆ ಕೆಲಸ ಕೊಡಿಸುವ ನೆಪವೊಡ್ಡಿ ಮನೆಗೆ ಕರೆದೊಯ್ದ ಎಂಜಿನಿಯರ್ ; ಮುಂದೆನಾಯ್ತು? Video ನೋಡಿ.!
ಹೀಗಾಗಿ ಜಿಮ್ ಗೆ ಹೋಗುವವರು ಮತ್ತು ವ್ಯಾಯಾಮ ಮಾಡುವವರು (Gym goers and exercisers) ಬಾಳೆಹಣ್ಣು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತಾರೆ.
ಬಾಳೆಹಣ್ಣು ಮೆಗ್ನೀಸಿಯಮ್, ವಿಟಮಿನ್ ಬಿ6, ಪೊಟ್ಯಾಸಿಯಮ್, ರಂಜಕದಂತಹ ಜೀವಸತ್ವಗಳು ಮತ್ತು ಖನಿಜಗಳ (Vitamins and minerals like magnesium, vitamin B6, potassium, phosphorus) ಮೂಲವಾಗಿದೆ ಈ ಬಾಳೆಹಣ್ಣು.
ಇನ್ನು ಬಾಳೆಹಣ್ಣನ್ನು ಬೆಳಿಗ್ಗೆ ಎದ್ದು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ. ಅಲ್ಲದೇ ಸ್ನಾಯುಗಳ ಬಲ (Muscle strength) ಕೂಡ ಹೆಚ್ಚುತ್ತದೆ.
ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಅಲ್ಲದೇ ಚಳಿಗಾಲದಲ್ಲಿ ಶಕ್ತಿ ಪಡೆಯಲು ಉತ್ತಮ ಮೂಲವೆಂದರೆ (A good source of energy) ಅದು ಬಾಳೆಹಣ್ಣು ಎಂದು ಹೇಳಬಹುದು. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆದ್ರೆ, ಈ ಕ್ರಿಯೆಗಳು ಚಳಿಗಾಲದಲ್ಲಿ ನಿಧಾನವಾಗಬಹುದು ಎನ್ನಲಾಗಿದೆ.
ಬಾಳೆ ಹಣ್ಣಿನ ಅತಿಯಾದ ಸೇವನೆಯು ಕೆಲವರಲ್ಲಿ ಗಂಟಲು ನೋವು ಅಥವಾ ಶೀತಕ್ಕೆ (Sore throat or cold) ಕಾರಣವಾಗಬಹುದು. ಓರ್ವ ವ್ಯಕ್ತಿಯು ಶೀತಕ್ಕೆ ಸಂಬಂಧಿಸಿದ ಅಲರ್ಜಿಯನ್ನೆನಾದರೂ ಹೊಂದಿದ್ದರೆ ಅವರು ಬಾಳೆ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸುವುದು ಒಳಿತು.
ನೀವು ಚಳಿಗಾಲದಲ್ಲಿಯೂ ಸಹ ವ್ಯಾಯಾಮ ಮಾಡುತ್ತಿದ್ದರೆ ಈ ಹಣ್ಣು ನಿಮಗೆ ಬಹಳ ಉಪಯುಕ್ತವಾಗಿದೆ. ಏಕೆಂದರೆ ಇದು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ.
ಇದನ್ನು ಓದಿ : ನಿಮ್ಮ ಪ್ರದೇಶದಲ್ಲಿ ಯಾವ Network ಉತ್ತಮವಾಗಿದೆ? ಈ ರೀತಿ ಕಂಡು ಹಿಡಿಯಿರಿ.!
ನೀವು ಬಾಳೆಹಣ್ಣನ್ನು ತಿನ್ನಬೇಕು ಎಂದ್ರೆ ಅದಕ್ಕೆ ಉತ್ತಮವಾದ ಸಮಯ ಯಾವುದೆಂದರೆ ಅದು ಬೆಳಿಗ್ಗೆ. ಬಾಳೆಹಣ್ಣುಗಳನ್ನು ಮುಂಜಾನೆ ತಿನ್ನುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ (Eating in the morning helps in digestion). ಆದರೆ ರಾತ್ರಿ ವೇಳೆ ತಿನ್ನುವುದನ್ನು ನಿಲ್ಲಿಸಬೇಕು. ಏಕೆಂದರೆ ಅವು ಲೋಳೆಯ ಪ್ರಮಾಣವನ್ನು ಅಧಿಕ ಮಾಡಿ, ಶೀತ ಮತ್ತು ಕೆಮ್ಮಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಇನ್ನೂ ಮಧುಮೇಹಿಗಳು ಬಾಳೆಹಣ್ಣನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬಹುದಾಗಿದೆ. ಏಕೆಂದರೆ ಈ ಹಣ್ಣು ನೈಸರ್ಗಿಕ ಸಕ್ಕರೆ ಅಂಶ (Natural sugar content) ಹೊಂದಿದೆ.
ಆದರೆ ರಾತ್ರಿ ಹೊತ್ತು ಅಥವಾ ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನಲು ಸುರಕ್ಷಿತವಲ್ಲ ಎಂಬುದು ಕೆಲ ಆರೋಗ್ಯ ತಜ್ಞರ ಅಭಿಪ್ರಾಯ. ಬಾಳೆಹಣ್ಣು ಒಂದು ತೂಕವಿರುವ ಹಣ್ಣಾಗಿದ್ದು, ಜೀರ್ಣಿಸಿಕೊಳ್ಳಲು ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತದೆ.