Tuesday, October 22, 2024
spot_img
spot_img
spot_img
spot_img
spot_img
spot_img
spot_img

Health : 1 ತಿಂಗಳ ಕಾಲ ಉಗುರು ಬೆಚ್ಚಗಿನ ನೀರು ಕುಡಿದರೆ ಏನಾಗುತ್ತೆ ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಳಿಗ್ಗೆ ಎದ್ದ ಕೂಡಲೇ ಕೆಲವರು ಚಹ ಕುಡಿತಾರೆ, ಕೆಲವರು ಟೀ ಕುಡಿತಾರೆ, ಇನ್ನೂ ಕೆಲವರು ಎಳನೀರು ಕುಡಿಯುತ್ತಾರೆ, ಆದರೆ ಹೆಚ್ಚಿನವರು ಬೆಚ್ಚಗಿನ ನೀರು ಕುಡಿಯುತ್ತಾರೆ.

ಆದರೆ ಒಂದು ತಿಂಗಳ ಕಾಲ ನಿರಂತರವಾಗಿ ಬೆಚ್ಚಗಿನ ನೀರನ್ನು ಕುಡಿದರೆ ಅದು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಒಳ್ಳೆಯದು ಪರಿಣಾಮವೇ ಅಥವಾ ಕೆಟ್ಟ ಪರಿಣಾಮವೇ ಅಂತ ತಿಳಿದಿದೆಯೇ.?

ಪ್ರಯೋಜನಗಳು :
* ಚಳಿಗಾಲದಲ್ಲಿ ಬೆಚ್ಚಗಿನ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಶೀತ ಋತುವಿನಲ್ಲಿ ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಬಯಸಿದರೆ ನೀವು ಬೆಚ್ಚಗಿನ ನೀರನ್ನು ಕುಡಿಯಬೇಕು. ಚಳಿಗಾಲದಲ್ಲಿ ಬೆಚ್ಚಗಿನ ನೀರು ಕುಡಿಯುವುದರಿಂದ ಶೀತ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇದನ್ನು ಓದಿ : ದೇಶಾದ್ಯಂತ 84 ಲಕ್ಷ ವಾಟ್ಸಾಪ್ ಖಾತೆಗಳು Ban; ಹೀಗೆ ಮಾಡಿದ್ರೆ ನಿಮ್ಮ ಅಕೌಂಟ್ ಬಂದ್ ಆಗುತ್ತೆ.!

* ನಿಯಮಿತವಾಗಿ ಬೆಚ್ಚಗಿನ ನೀರನ್ನು ಕುಡಿಯುವುದು ತೂಕ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೇ ಚಯಾಪಚಯವನ್ನು ಹೆಚ್ಚಿಸುತ್ತದೆ.

* ಬೆಚ್ಚಗಿನ ನೀರು ಕುಡಿಯುವುದರಿಂದ ಚರ್ಮವು ಸುಂದರವಾಗಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ ಒಂದು ತಿಂಗಳ ಕಾಲ ಬೆಚ್ಚಗಿನ ನೀರನ್ನು ಸೇವಿಸಿದರೆ ಚರ್ಮವು ಹೊಳೆಯುತ್ತದೆ. ಚರ್ಮದ ಸಮಸ್ಯೆಗಳು ದೂರವಾಗುತ್ತವೆ.

* ಸಣ್ಣ ವಯಸ್ಸಿನಲ್ಲಿ ಮುಖದ ಮೇಲೆ ಕಂಡು ಬರುವ ನೆರಿಗೆ, ಕಪ್ಪು-ಕಲೆಗಳು, ಮೊಡವೆಯ ಕಲೆಗಳು, ಹಣೆಯ ಮೇಲಿನ ಸುಕ್ಕುಗಳು, ನಿಧಾನಕ್ಕೆ ಕಡಿಮೆ ಆಗುವು ದರ ಜೊತೆಗೆ ಚರ್ಮದ ಸುಕ್ಕನ್ನು ಹೋಗಲಾಡಿ ಸಲು ನೆರವಾಗುತ್ತದೆ.​

ಇದನ್ನು ಓದಿ : BSNLನಿಂದ ಪ್ರತಿಸ್ಪರ್ಧಿಗಳಿಗೆ ಮಾಸ್ಟರ್ ಸ್ಟ್ರೋಕ್; ಸಿಮ್, ನೆಟ್‌ವರ್ಕ್ ಇಲ್ಲದೆ ಮಾಡಬಹುದು ಕಾಲ್.!

* ಜೀರ್ಣಕ್ರಿಯೆ ಪ್ರಕ್ರಿಯೆಯು ಸರಿಯಾಗಿ ನಡೆಯಲು ಸಹಾಯ ವಾಗುತ್ತದೆ. ಈ ಸಂದರ್ಭದಲ್ಲಿ ದೇಹದಿಂದ ವಿಷಕಾರಿ ಅಂಶಗಳು ಹಾಗೂ ಬೇಡದ ತ್ಯಾಜ್ಯ ತ್ಯಾಜ್ಯಗಳು ಹೊರಹೋಗುತ್ತವೆ.

ಅನಾನುಕೂಲ :
* ಜಾಸ್ತಿ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಹೊಂದಿದ್ದರೆ ಹೆಚ್ಚು ಬೆವರುವಿಕೆ ಕಾರಣವಾಗುತ್ತದೆ. ಇದರಿಂದ ಬೆವರುವಿಕೆ ತುರಿಕೆ, ಚರ್ಮ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು.

* ಇಡೀ ದಿನ ಬೆಚ್ಚಗಿನ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ನೀವು ಬೆಚ್ಚಗಿನ ನೀರನ್ನು ಕುಡಿಯಲು ಬಯಸಿದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರವೇ ಅದನ್ನು ಸೇವಿಸಿ.

ಇದನ್ನು ಓದಿ : ವಿಚ್ಛೇದನದ ಬಳಿಕ ಸೊಸೆ, ಅತ್ತೆ -ಮಾವನ ಮನೆಯಲ್ಲಿ ಇರುವಂತಿಲ್ಲ; High court ಮಹತ್ವದ ತೀರ್ಪು.!

* ಒಂದು ತಿಂಗಳ ಕಾಲ ಬೆಚ್ಚಗಿನ ನೀರನ್ನು ಮಾತ್ರ ಸೇವಿಸಿದರೆ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ವಿಟಮಿನ್ಗಳು ನಾಶವಾಗಲು ಪ್ರಾರಂಭಿಸುತ್ತವೆ.

* ಬೆಚ್ಚಗಿನ ನೀರು ಕುಡಿಯುವುದರಿಂದ ದೈಹಿಕ ಸಮಸ್ಯೆಗಳೂ ಉಂಟಾಗಬಹುದು. ಮೂತ್ರದ ಸಮಸ್ಯೆ, ನಿರಂತರ ಸುಸ್ತು, ಪದೇ ಪದೇ ಮೂತ್ರ ವಿಸರ್ಜನೆ ಇತ್ಯಾದಿ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img