ಜನಸ್ಪಂದನ ನ್ಯೂಸ್, ಡೆಸ್ಕ್ : ವಾಟ್ಸಾಪ್ ಅನ್ನೋದು ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ವಾಟ್ಸಾಪ್ ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.
ಆದರೆ ವಾಟ್ಸಾಪ್ ಕೇವಲ ಒಂದು ತಿಂಗಳೊಳಗೆ ಹಲವಾರು ಖಾತೆಗಳನ್ನು ನಿಷೇಧಿಸಲಾಗುತ್ತಿದೆ. ಸುಮಾರು 84 ಲಕ್ಷ ಖಾತೆಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ವಂಚನೆಗಾಗಿ ಬಳಸುವ ವಾಟ್ಸಾಪ್ ಖಾತೆಗಳನ್ನು ಈಗ ನಿಷೇಧಿಸಿದೆ ಎಂದು ಕಂಪನಿಯು ತನ್ನ ವರದಿಯಲ್ಲಿ ಸಹ ಪ್ರಕಟಿಸಿದೆ.
ಇದನ್ನು ಓದಿ : BSNL ನಿಂದ ಪ್ರತಿಸ್ಪರ್ಧಿಗಳಿಗೆ ಮಾಸ್ಟರ್ ಸ್ಟ್ರೋಕ್; ಸಿಮ್, ನೆಟ್‌ವರ್ಕ್ ಇಲ್ಲದೆ ಮಾಡಬಹುದು ಕಾಲ್.!
ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸುಮಾರು 84.58 ಲಕ್ಷ ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.
16.61 ಲಕ್ಷ ಖಾತೆಗಳನ್ನು ತಕ್ಷಣವೇ ಮುಚ್ಚಲಾಗಿದೆ. ಯಾಕೆಂದರೆ ಒಬ್ಬ ವ್ಯಕ್ತಿಯು ಇನ್ನೊಬ್ಬ ಬಳಕೆದಾರರ ವಿರುದ್ಧ ದೂರು ದಾಖಲಿಸಿದರೆ, ತನಿಖೆಯ ನಂತರ ಖಾತೆಯನ್ನು ಮುಚ್ಚಲಾಗುತ್ತದೆ.
ಕಂಪನಿಯ ವರದಿಯ ಪ್ರಕಾರ, ಆಗಸ್ಟ್ 1 ರಿಂದ ಆಗಸ್ಟ್ 31 ರವರೆಗೆ ಈ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.