Sunday, December 22, 2024
HomeLocal Newsಎಷ್ಟೇ ವಯಸ್ಸಾದರೂ young ಆಗಿ ಕಾಣಬೇಕಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ.!
spot_img

ಎಷ್ಟೇ ವಯಸ್ಸಾದರೂ young ಆಗಿ ಕಾಣಬೇಕಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಆರೋಗ್ಯ : ಆರೋಗ್ಯದ ದೃಷ್ಟಿಯಿಂದ ಹಣ್ಣಿನ ಜ್ಯೂಸ್​​​​​ (fruit juice) ತುಂಬಾ ಒಳ್ಳೆಯದು. ಈ ಜ್ಯೂಸ್​​ಗಳು ದೇಹಕ್ಕೆ ಬೇಕಾದ ಪೋಷಣೆ, ಜೀವಸತ್ವಗಳು ಮತ್ತು ಖನಿಜಾಂಶಗಳನ್ನು (minerals) ನೀಡುತ್ತದೆ.

ಹಲವರು ತಾವಿರುವ ವಯಸ್ಸಿಗಿಂತ ಹೆಚ್ಚು ವಯಸ್ಸಾಗಿರುವ ಹಾಗೆ ಅನಿಸುತ್ತದೆ. ಅಂತವರಿಗೆ ಜ್ಯೂಸ್​​ಗಳಿಂದ ಆಗುವ ಉಪಯೋಗದ ಕುರಿತು ಮಾಹಿತಿ ಒಂದಿದೆ.

ಇದನ್ನು ಓದಿ : ಒಂದು ಭಾಷೆಯ ಅಳಿವು ಉಳಿವಿನ ಮೂಲ ಸಮಸ್ಯೆಯೇ ಶಿಕ್ಷಣ ಮಾಧ್ಯಮ : ಪ್ರೋ. ಅಕ್ಕಿ.

ಕಿತ್ತಳೆ ಜ್ಯೂಸ್​​​ :
ಆಂಟಿಆಕ್ಸಿಡೆಂಟ್‌ ಗುಣ ಹೊಂದಿರುವ ಕಿತ್ತಳೆ ಜ್ಯೂಸ್ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ (free radicals) ರಕ್ಷಿಸುತ್ತದೆ ಹಾಗೂ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ (Slows down the aging process). ಈ ಕಿತ್ತಳೆ ಜ್ಯೂಸ್ ವಿಟಮಿನ್ ಸಿಯಿಂದ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ (Protects against infections).

ಎಲೆಕೋಸಿನ ಜ್ಯೂಸ್​​​ :
ಎಲೆಕೋಸಿನ ಜ್ಯೂಸ್ (Cabbage juice) ಫೈಟೊನ್ಯೂಟ್ರಿಯೆಂಟ್ಸ್ ಮತ್ತು ಆಂಥೋಸಯಾನಿನ್ ಎಂಬ ಗುಣಲಕ್ಷಣಗಳನ್ನು ಹೊಂದಿದೆ. ಈ ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯು (presence of antioxidants) ದೇಹವನ್ನು ಸ್ವತಂತ್ರ ರಾಡಿಕಲ್​ಗಳಿಂದ ರಕ್ಷಿಸಲು ಸಹಾಯ ಮಾಡಿ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು. ಇದು ವಿಟಮಿನ್ ಸಿಯಿಂದ ಸಮೃದ್ಧವಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ (Strengthens the immune system).

ದ್ರಾಕ್ಷಿ ರಸ :
ದ್ರಾಕ್ಷಿ ರಸವು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಿ (Control blood pressure), ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವುದು. ಅಲ್ಲದೆ ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಈ ಜ್ಯೂಸ್ ರೆಸ್ವೆರಾಟ್ರೊಲ್ ನಂತಹ ಉತ್ಕರ್ಷಣ ನಿರೋಧಕಗಳನ್ನು (Antioxidants like resveratrol) ಹೊಂದಿದೆ. ದೇಹದಲ್ಲಿನ ಸ್ವತಂತ್ರ ರಾಡಿಕಲ್​ಗಳನ್ನು ಕಡಿಮೆ ಮಾಡಿ, ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು.

ಇದನ್ನು ಓದಿ : ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಬಿಪಿಯನ್ನು ಹೀಗೆ Control ಮಾಡಿ.!

ಸೌತೆಕಾಯಿ ಜ್ಯೂಸ್​​ :
ಸೌತೆಕಾಯಿ ಜ್ಯೂಸ್ ವಿಟಮಿನ್ ಕೆ ಕೊರತೆಯನ್ನು ನೀಗಿಸುವುದು. ದೇಹದ ನಿರ್ವಿಶೀಕರಣಕ್ಕೆ (detoxification) ಸೌತೆಕಾಯಿಯು ಸಹಾಯ ಮಾಡುವುದು. ನಾವು ಸೌತೆಕಾಯಿ ಜ್ಯೂಸ್ ನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದಾಗಿದೆ. ಉದಾಹರಣೆಗೆ ಪುದೀನ ಮತ್ತು ನಿಂಬೆಯೊಂದಿಗೆ ಸೇರಿಸಿ ಕುಡಿಯಬಹುದು.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

 

ಹಿಂದಿನ ಸುದ್ದಿ : ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಬಿಪಿಯನ್ನು ಹೀಗೆ ಕಂಟ್ರೋಲ್ ಮಾಡಿ..!

ಜನಸ್ಪಂದನ ನ್ಯೂಸ್, ಆರೋಗ್ಯ : ಮಾನವನಲ್ಲಿ ರಕ್ತದೊತ್ತಡ ಸಮಸ್ಯೆ (blood pressure problem) ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಂದು ವೇಳೆ ದೇಹದಲ್ಲಿ ರಕ್ತದೊತ್ತಡದ ಪ್ರಮಾಣ ಹೆಚ್ಚಾದರೆ ಹೃದಯಕ್ಕೆ ಅಪಾಯ ಉಂಟಾಗಿ, ಪ್ರಾಣವನ್ನೇ ಕಳೆದುಕೊಳ್ಳಬಹುದು.

ಸಾಮಾನ್ಯವಾಗಿ ರಕ್ತದೊತ್ತಡ ಸುಮಾರು 120/80 mmHg ಇರಬೇಕು. ಆದರೆ 130/80 mmHg ಗಿಂತ ಹೆಚ್ಚಿದ್ದರೆ, ಇದು ಹೈ ಬಿಪಿ ಸಮಸ್ಯೆಯನ್ನು ಸೂಚಿಸುತ್ತದೆ.

ಇದನ್ನು ಓದಿ : ಎರಡು ಬಂಗಾರ ಕಳ್ಳತನ ಪ್ರಕರಣ ಭೇದಿಸಿದ ಯಮಕನಮರಡಿ Police.!

ಲಕ್ಷಣಗಳು :
ಎದೆ ನೋವು (chest pain)
ಮೂರ್ಛೆ ಹೋಗುವುದು
ಮೂಗಿನಲ್ಲಿ ರಕ್ತಸ್ರಾವ (Bleeding in the nose)
ವಿಪರೀತ ತಲೆನೋವು
ಉಸಿರಾಟದಲ್ಲಿ ಸಮಸ್ಯೆ

ಕಾರಣಗಳು :
ಅನುವಂಶಿಕವಾಗಿ (Hereditary) ಅಥವಾ ವಯಸ್ಸಾದ ಮೇಲೆಯು ರಕ್ತದೊತ್ತಡ ಸಮಸ್ಯೆ ಉಂಟಾಗಬಹುದು.

ಧೂಮಪಾನ ಮತ್ತು ಅತಿಯಾದ ಮದ್ಯಪಾನ, ಕಳಪೆ ಆಹಾರ (poor food), ದೈಹಿಕ ಚಟುವಟಿಕೆಯ ಕೊರತೆಯು ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.

ದೀರ್ಘಕಾಲದ ಒತ್ತಡವು (Chronic stress) ಸಹ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದೆ.
ಅಧಿಕ ಕೊಲೆಸ್ಟ್ರಾಲ್, ಬೊಜ್ಜು ಮತ್ತು ಮಧುಮೇಹ (diabetes) ಸಹ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಅಧಿಕ ರಕ್ತದೊತ್ತಡದಿಂದ ಈ ಗಂಭೀರ ಸಮಸ್ಯೆಗಳು ಉಂಟಾಗಬಹುದು :

* ಮುಂದೊಂದು ದಿನ ಮೂತ್ರಪಿಂಡದ ಕಾರ್ಯಗಳ (Kidney) ಮೇಲೆ ಅಧಿಕ ರಕ್ತದೊತ್ತಡವು ಪರಿಣಾಮ ಬೀರುತ್ತದೆ.

ಇದನ್ನು ಓದಿ : ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ; ನಾಳೆ Last date.!

* ಅಧಿಕ ರಕ್ತದೊತ್ತಡ ಹೃದಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದ ಪರಿಧಮನಿಯ ಕಾಯಿಲೆಯ ಅಥವಾ ಹೃದಯ ವೈಫಲ್ಯ (heart failure) ಉಂಟಾಗುತ್ತದೆ.

* ಕಣ್ಣುಗಳಲ್ಲಿನ ರಕ್ತನಾಳಗಳಿಗೆ (blood vessels) ಹಾನಿಯನ್ನು ಸಹ ಉಂಟು ಮಾಡುತ್ತದೆ ಎನ್ನಲಾಗಿದೆ.

* ಅಧಿಕ ರಕ್ತದೊತ್ತಡದಿಂದ ಮೆದುಳಿಗೆ ಸರಬರಾಜು (Supply to the brain) ಮಾಡುವ ರಕ್ತನಾಳಗಳಲ್ಲಿ ಅಡಚಣೆ ಅಥವಾ ಸಮಸ್ಯೆ ಉಂಟಾಗುತ್ತದೆ.

ನಿಯಂತ್ರಿಸುವುದು ಹೇಗೆ.?
ಮನಸ್ಸಿಗೆ ಉಲ್ಲಾಸ ಮತ್ತು ವಿಶ್ರಾಂತಿಯನ್ನು ನೀಡುವ ಧ್ಯಾನ ಅಥವಾ ಯೋಗವನ್ನು (Meditation or Yoga) ಅಭ್ಯಾಸ ಮಾಡಿ.

ಸೋಡಿಯಂ ಸೇವನೆಯನ್ನು ಕಡಿಮೆ (Reduce sodium intake) ಮಾಡುವುದು ಒಳ್ಳೆಯದು.

ಧೂಮಪಾನವನ್ನು ತ್ಯಜಿಸಿ ಮತ್ತು ಮದ್ಯವನ್ನು ಮಿತಿಗೊಳಿಸಿರಿ.

ಇದನ್ನು ಓದಿ : ಆಫೀಸರ್ ಹೆಸರಿನಲ್ಲಿ ರಿಯಲ್ ಪೊಲೀಸ್ ಅಧಿಕಾರಿಗೆ ವಂಚಿಸಲು ಯತ್ನಿಸಿದ ಫೇಕ್ ಪೊಲೀಸ್; ವಿಡಿಯೋ ಸಖತ್ Viral.!

ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡಿ.

ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್​ಗಳ ಸೇವನೆಯತ್ತ ಒತ್ತು ನೀಡಿ.

ಸಂಸ್ಕರಿಸಿದ ಆಹಾರ (Processed food) ಮತ್ತು ಸಕ್ಕರೆ ಪಾನೀಯಗಳನ್ನು ಕಮ್ಮಿ ಮಾಡಿ.

ನಡಿಗೆ, ಈಜು ಅಥವಾ ಸೈಕ್ಲಿಂಗ್‌ನಂತಹ ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಉತ್ತಮ.

ದೇಹದ ತೂಕ 5-10% ಕಳೆದುಕೊಳ್ಳುವುದರಿಂದ ಕೂಡ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆ ಮಾಡಬಹುದು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments