Sunday, December 8, 2024
HomeSpecial NewsSpecial news : ರಾತ್ರಿ ಬಟ್ಟೆ ಒಗೆಯಬಾರದು ಯಾಕೆ ಗೊತ್ತಾ.?
spot_img

Special news : ರಾತ್ರಿ ಬಟ್ಟೆ ಒಗೆಯಬಾರದು ಯಾಕೆ ಗೊತ್ತಾ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಗರ ಪ್ರದೇಶಗಳಲ್ಲಿ ವಾಸಿಸುವವರ ಜೀವನವು ತುಂಬಾ ಬದಲಾಗಿ ಹೋಗಿದೆ. ಕುಡಿಯುವುದರಿಂದ ಹಿಡಿದು ಬಟ್ಟೆ ಒಗೆಯುವ ತನಕ (From drinking to washing clothes) ಪ್ರತಿಯೊಂದು ವಿಚಾರವು ಬದಲಾಗಿವೆ. ಬೆಳಿಗ್ಗೆ ಮಾಡಬೇಕಾದ ಕೆಲಸಗಳನ್ನು ರಾತ್ರಿ, ರಾತ್ರಿ ಮಾಡಬೇಕಾದ ಕೆಲಸಗಳನ್ನು ಬೆಳಿಗ್ಗೆ ಮಾಡುತ್ತಿದ್ದಾರೆ.

ನಗರಗಳಲ್ಲಿ ಹಲವು ಜನರು ಬೆಳಿಗ್ಗೆ ಆಫೀಸ್ ಕೆಲಸಕ್ಕೆಂದು ಗಡಿಬಿಡಿಯಲ್ಲಿ ಹೋಗಿ, ಸಂಜೆ ಮನೆಗೆ ಬಂದ ಬಳಿಕ ಮನೆಕೆಲಸ ಮಾಡುತ್ತಾರೆ. ಅದರಲ್ಲಿಯೂ ಬಟ್ಟೆ ಒಗೆಯುವ (Washing clothes) ಕೆಲಸವು ಸಹ ಸೇರಿದೆ. ಆದರೆ ರಾತ್ರಿ ಬಟ್ಟೆ ಒಗೆಯಬಾರದು ಎಂದು ಹಿರಿಯರು ಹೇಳುತ್ತಾರೆ.

ಇದನ್ನು ಓದಿ : ಎಷ್ಟೇ ವಯಸ್ಸಾದರೂ young ಆಗಿ ಕಾಣಬೇಕಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ.!

ಕೊಳಕು ಬಟ್ಟೆ ಒಗೆಯಲು ಸರಿಯಾದ ಸಮಯವಿದೆ. ಅದಕ್ಕಾಗಿಯೇ ರಾತ್ರಿಯ ಬದಲು ಬೆಳಿಗ್ಗೆ ಬಟ್ಟೆ ಒಗೆಯಬೇಕು ಎಂದು ಹೇಳಲಾಗುತ್ತದೆ.

ಒದ್ದೆ ಬಟ್ಟೆಯಲ್ಲಿರುವ ಸೂಕ್ಷ್ಮಜೀವಿಗಳು (Microorganisms) ಅದರಲ್ಲಿ ಉಳಿಯುತ್ತವೆ. ಅಂತಹ ಬಟ್ಟೆ ಧರಿಸುವುದು ಆರೋಗ್ಯಕ್ಕೆ ಹಾನಿಕರ.

ಯಾವಾಗಲೂ ಸೂರ್ಯೋದಯದ (sunrise) ಬಳಿಕ ಬಟ್ಟೆ ಒಗೆಯುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ತೊಳೆದ ಬಟ್ಟೆಗಳನ್ನು ಸೂರ್ಯನ ಬೆಳಕಿನಲ್ಲಿ (sunlight) ಒಣಗಿಸುವುದು ಒಳ್ಳೆಯದು.

ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ನಕಾರಾತ್ಮಕ ಶಕ್ತಿ (Negative energy) ದೂರವಾಗುತ್ತದೆ.

ಇದನ್ನು ಓದಿ : ಒಂದು ಭಾಷೆಯ ಅಳಿವು ಉಳಿವಿನ ಮೂಲ ಸಮಸ್ಯೆಯೇ ಶಿಕ್ಷಣ ಮಾಧ್ಯಮ : ಪ್ರೋ. ಅಕ್ಕಿ.

ನೀವು ಬಿಸಿಲಿನಲ್ಲಿ ಒಣಗಿಸಿದ ಬಟ್ಟೆಗಳನ್ನು ಧರಿಸಿದಾಗ, ಆರೋಗ್ಯದಲ್ಲಿ ಧನಾತ್ಮಕ ಪರಿಣಾಮ (positive effect) ಬೀರುತ್ತದೆ.

ಬಿಸಿಲಿನಲ್ಲಿ ಒಣಗಿಸಿದ ಬಟ್ಟೆಯಲ್ಲಿರುವ ಹಾನಿಕಾರಕ ಸೂಕ್ಷ್ಮಜೀವಿಗಳು ಸಹ ನಾಶವಾಗುತ್ತವೆ.

 

ಹಿಂದಿನ ಸುದ್ದಿ : ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಬಿಪಿಯನ್ನು ಹೀಗೆ ಕಂಟ್ರೋಲ್ ಮಾಡಿ..!

ಜನಸ್ಪಂದನ ನ್ಯೂಸ್, ಆರೋಗ್ಯ : ಮಾನವನಲ್ಲಿ ರಕ್ತದೊತ್ತಡ ಸಮಸ್ಯೆ (blood pressure problem) ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಂದು ವೇಳೆ ದೇಹದಲ್ಲಿ ರಕ್ತದೊತ್ತಡದ ಪ್ರಮಾಣ ಹೆಚ್ಚಾದರೆ ಹೃದಯಕ್ಕೆ ಅಪಾಯ ಉಂಟಾಗಿ, ಪ್ರಾಣವನ್ನೇ ಕಳೆದುಕೊಳ್ಳಬಹುದು.

ಇದನ್ನು ಓದಿ : Belagavi : ಬೆಳಗಾವಿಯಲ್ಲಿ ಹೀನ ಕೃತ್ಯ ; ಸಾರ್ವಜನಿಕವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ.!

ಸಾಮಾನ್ಯವಾಗಿ ರಕ್ತದೊತ್ತಡ ಸುಮಾರು 120/80 mmHg ಇರಬೇಕು. ಆದರೆ 130/80 mmHg ಗಿಂತ ಹೆಚ್ಚಿದ್ದರೆ, ಇದು ಹೈ ಬಿಪಿ ಸಮಸ್ಯೆಯನ್ನು ಸೂಚಿಸುತ್ತದೆ.

ಲಕ್ಷಣಗಳು :
ಎದೆ ನೋವು (chest pain)
ಮೂರ್ಛೆ ಹೋಗುವುದು
ಮೂಗಿನಲ್ಲಿ ರಕ್ತಸ್ರಾವ (Bleeding in the nose)
ವಿಪರೀತ ತಲೆನೋವು
ಉಸಿರಾಟದಲ್ಲಿ ಸಮಸ್ಯೆ

ಕಾರಣಗಳು :
ಅನುವಂಶಿಕವಾಗಿ (Hereditary) ಅಥವಾ ವಯಸ್ಸಾದ ಮೇಲೆಯು ರಕ್ತದೊತ್ತಡ ಸಮಸ್ಯೆ ಉಂಟಾಗಬಹುದು.

ಧೂಮಪಾನ ಮತ್ತು ಅತಿಯಾದ ಮದ್ಯಪಾನ, ಕಳಪೆ ಆಹಾರ (poor food), ದೈಹಿಕ ಚಟುವಟಿಕೆಯ ಕೊರತೆಯು ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.

ಇದನ್ನು ಓದಿ : Health : ಕಾಲು ಸೆಳೆತದಿಂದ ಬಳಲುತ್ತಿದ್ದೀರಾ.? ಈ ರೀತಿ ಮಾಡಿ ನಿಮಿಷಗಳಲ್ಲಿ ಮಾಯವಾಗುತ್ತೆ ನೋವು.!

ದೀರ್ಘಕಾಲದ ಒತ್ತಡವು (Chronic stress) ಸಹ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದೆ.
ಅಧಿಕ ಕೊಲೆಸ್ಟ್ರಾಲ್, ಬೊಜ್ಜು ಮತ್ತು ಮಧುಮೇಹ (diabetes) ಸಹ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಅಧಿಕ ರಕ್ತದೊತ್ತಡದಿಂದ ಈ ಗಂಭೀರ ಸಮಸ್ಯೆಗಳು ಉಂಟಾಗಬಹುದು :

* ಮುಂದೊಂದು ದಿನ ಮೂತ್ರಪಿಂಡದ ಕಾರ್ಯಗಳ (Kidney) ಮೇಲೆ ಅಧಿಕ ರಕ್ತದೊತ್ತಡವು ಪರಿಣಾಮ ಬೀರುತ್ತದೆ.

* ಅಧಿಕ ರಕ್ತದೊತ್ತಡ ಹೃದಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದ ಪರಿಧಮನಿಯ ಕಾಯಿಲೆಯ ಅಥವಾ ಹೃದಯ ವೈಫಲ್ಯ (heart failure) ಉಂಟಾಗುತ್ತದೆ.

* ಕಣ್ಣುಗಳಲ್ಲಿನ ರಕ್ತನಾಳಗಳಿಗೆ (blood vessels) ಹಾನಿಯನ್ನು ಸಹ ಉಂಟು ಮಾಡುತ್ತದೆ ಎನ್ನಲಾಗಿದೆ.

ಇದನ್ನು ಓದಿ : ನೋ ಕೇಬಲ್, ನೋ ಸೆಟ್ಟಾಪ್ ಬಾಕ್ಸ್, ; ಉಚಿತ 500 ಚಾನೆಲ್ ಟಿವಿ ಸರ್ವೀಸ್ BSNL ನಿಂದ.!

* ಅಧಿಕ ರಕ್ತದೊತ್ತಡದಿಂದ ಮೆದುಳಿಗೆ ಸರಬರಾಜು (Supply to the brain) ಮಾಡುವ ರಕ್ತನಾಳಗಳಲ್ಲಿ ಅಡಚಣೆ ಅಥವಾ ಸಮಸ್ಯೆ ಉಂಟಾಗುತ್ತದೆ.

ನಿಯಂತ್ರಿಸುವುದು ಹೇಗೆ.?
ಮನಸ್ಸಿಗೆ ಉಲ್ಲಾಸ ಮತ್ತು ವಿಶ್ರಾಂತಿಯನ್ನು ನೀಡುವ ಧ್ಯಾನ ಅಥವಾ ಯೋಗವನ್ನು (Meditation or Yoga) ಅಭ್ಯಾಸ ಮಾಡಿ.

ಸೋಡಿಯಂ ಸೇವನೆಯನ್ನು ಕಡಿಮೆ (Reduce sodium intake) ಮಾಡುವುದು ಒಳ್ಳೆಯದು.

ಧೂಮಪಾನವನ್ನು ತ್ಯಜಿಸಿ ಮತ್ತು ಮದ್ಯವನ್ನು ಮಿತಿಗೊಳಿಸಿರಿ.

ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡಿ.

ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್​ಗಳ ಸೇವನೆಯತ್ತ ಒತ್ತು ನೀಡಿ.

ಇದನ್ನು ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!

ಸಂಸ್ಕರಿಸಿದ ಆಹಾರ (Processed food) ಮತ್ತು ಸಕ್ಕರೆ ಪಾನೀಯಗಳನ್ನು ಕಮ್ಮಿ ಮಾಡಿ.

ನಡಿಗೆ, ಈಜು ಅಥವಾ ಸೈಕ್ಲಿಂಗ್‌ನಂತಹ ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಉತ್ತಮ.

ದೇಹದ ತೂಕ 5-10% ಕಳೆದುಕೊಳ್ಳುವುದರಿಂದ ಕೂಡ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆ ಮಾಡಬಹುದು.

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments