Wednesday, March 12, 2025
HomeViral VideoVideo: ಯುವಕ ಫೋನ್‌ನಲ್ಲಿ ಮಗ್ನ ; ಪಕ್ಕದಲ್ಲೇ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ.!
spot_img
spot_img
spot_img
spot_img
spot_img

Video: ಯುವಕ ಫೋನ್‌ನಲ್ಲಿ ಮಗ್ನ ; ಪಕ್ಕದಲ್ಲೇ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮೊಬೈಲ್ ಫೋನ್‌ಗಳ (mobile phone) ಬಳಕೆಯಲ್ಲಿ ಕೆಲವು ಜನರು ಎಷ್ಟೊಂದು ಮಗ್ನರಾಗಿರುತ್ತಾರೆ, ಅದರಿಂದಾಗುವ ಸಾಕಷ್ಟು ಅನಾಹುತಗಳ (disasters) ಬಗ್ಗೆ ನೋಡಿದ್ದೇವಿ ಮತ್ತು ಕೇಳಿದ್ದೇವೆ. ಇದೇ ಮಾ. 10 ರಂದು “ಮೊಬೈಲ್‌ನಲ್ಲಿ ಮಾತನಾಡುತ್ತಾ ಮಗುವನ್ನ ಆಟೋದಲ್ಲೇ ಬಿಟ್ಟು ಹೋದ ತಾಯಿ ; ಚಾಲಕ ಮಾಡಿದ್ದೇನು.?” ಎಂಬ Title ನ ಸುದ್ದಿಯನ್ನು ಸಾವಿರಾರು ಓದುಗರು ಓದಿದ್ದಾರೆ.

ಈಗ ಅಂತಹದೇ ಒಂದು ವಿಡಿಯೋ ವೈರಲ್ (video viral) ಆಗಿದ್ದು, ಇಲ್ಲಿ ಓರ್ವ ಯುವಕ ಎಷ್ಟೊಂದು ಮೊಬೈಲ್ ಫೋನ್‌ನಲ್ಲಿ ತಲ್ಲಿಣನಾಗಿದ್ದನೆಂದರೆ, ಆತನ ಪಕ್ಕದಲ್ಲಿ ಮಲಗಿದ್ದ ನಾಯಿಯನ್ನು ಒಂದು ಚಿರತೆ (leopard) ಹೊತ್ತೊಕೊಂಡು ಹೋದರೂ ಇತನಿಗೆ ಗೊತ್ತೇ ಆಗಿಲ್ಲ.

ಇದನ್ನು ಓದಿ : ಇನ್ಮುಂದೆ Seniors ನೋಡಿಕೊಳ್ಳದಿದ್ದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿಲ್ಲ.!

ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ಜನರು ಫೋನ್‌ನಲ್ಲಿ ಮುಳುಗಿದರೇ ಮುಗಿತ್ತು, ಸುತ್ತ-ಮುತ್ತ (around) ಏನು ನಡೆಯುತ್ತಿದೆ ಅಂತ ಅವರುಗೆ ಗೊತ್ತೇ ಇರಲ್ಲ.

ಅಂದಹಾಗೆ ನಾಯಿ (Dog) ಯನ್ನು ಚಿರತೆ ಹೊತ್ತೊಕೊಂಡು ಹೋದ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆಯ ಭೋರ್ ತಾಲೂಕಿನ ದೇಗಾಂವ್ (Degaon) ಗ್ರಾಮದಲ್ಲಿ.

ವಿಡಿಯೋದಲ್ಲೇನಿದೆ :

ಭಾನುವಾರ ಸುಮಾರು ಬೆಳಗ್ಗಿನ ಜಾವ 3.30ರ (morning at 03-30) ವೇಳೆಗೆ ಯುವಕನೋರ್ವ ತನ್ನಷ್ಟಕ್ಕೇ ತಾನು ಫೋನ್ ನೋಡುತ್ತಾ ದೇಗಾಂವ್ ಗ್ರಾಮದ ಮನೆಯ ಹೊರಗೆ (outside) ಅಂಗಳದಲ್ಲಿದ್ದ ಮಂಚದಲ್ಲಿ ಮಲಗಿದ್ದಾನೆ, ಅದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ಯುವಕನ‌ ಪಕ್ಕದಲ್ಲಿ ಇತನ ಸಾಕು ಪ್ರಾಣಿ ನಾಯಿ ನೆಮ್ಮದಿಯಿಂದ ಮಲಗಿದೆ. ಆಗ ಚಿರತೆಯೊಂದು ಸಾವಕಾಶವಾಗಿ ಅವರು ಮಲಗಿದ (sleep) ಸ್ಥಳಕ್ಕೆ ಬರುವುದನ್ನು ವಿಡಿಯೋದಲ್ಲಿ ಕಾಣಿಸುತ್ತದೆ.

ಇದನ್ನು ಓದಿ : ದೈತ್ಯ ಮೊಸಳೆಗೆ ಆಹಾರ ತಿನ್ನಿಸುತ್ತಿರುವ ಭೂಪ ; ಬೆಚ್ಚಿಬೀಳಿಸುವ Video ನೋಡಿ.!

ಯುವಕ ಮಂಚದ ಮೇಲೆ ಮಲಗಿದ್ದರು ಸಹ ಚಾಣಾಕ್ಷ ಚಿರತೆ (clever leopard) ಹೊಂಚು ಹಾಕುತ್ತ ಬಂದು ಮಲಗಿದ್ದ ನಾಯಿಯ ಹತ್ತಿರ ಬರುತ್ತದೆ. ಚಿರತೆ ಕೆಲವೇ ಕೆಲ ಸೆಕೆಂಡ್‌ಗಳಲ್ಲಿ (within a second) ಯುವಕ ಪಕ್ಕದಲ್ಲಿಯೇ ಮಲಗಿದ್ದರೂ ಸಹ ನಾಯಿಯನ್ನು ಹೊತ್ತೊಯ್ದಿದೆ.

ಸದ್ಯ ನಾಯಿಯ ಪಕ್ಕದಲ್ಲೇ ಮಂಚದ ಮೇಲೆ ಮಲಗಿದ್ದ ಯುವಕನ್ನು ಚಿರತೆ (Leopard) ಹೊತ್ತೊಯ್ಯದೇ ಬಿಟ್ಟಿದ್ದು ದೊಡ್ಡ ಪುಣ್ಯ.

ಇದನ್ನು ಓದಿ : ದೇವಸ್ಥಾನದ ಬಾಗಿಲಿಗೆ ಬೆಂಕಿ ಇಟ್ಟು, ದೇವರಿಗೆ Witchcraft ಮಾಡಿದ ಕಿಡಿಗೇಡಿಗಳು.!

ಪುಣೆಯಲ್ಲಿ (Pune) ಇತ್ತೀಚೆಗೆ ಚಿರತೆಯಂತಹ ಕಾಡುಪ್ರಾಣಿಗಳ ಹಾವಳಿ ಬಹಳ ತೀವ್ರಗೊಂಡಿರುವುದಕ್ಕೆ ಈ ಘಟನೆ ಉತ್ತಮ (good) ಉದಾಹರಣೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪುಣೆ ಫಸ್ಟ್ (Pune first) ಎಂಬ ಟ್ವಿಟ್ಟರ್ ಪೇಜ್‌ನಲ್ಲಿ ಈ ಭಯಾನಕ ವಿಡಿಯೋ ಪೋಸ್ಟ್ ಮಾಡಲಾಗಿದ್ದು, “Pune Viral Video: Leopard Attacks Sleeping Pet Dog While Owner Remains Engrossed In Phone. The video is from Degaon village in Bhor taluka” (ಪುಣೆ ವೈರಲ್ ವೀಡಿಯೋ: ಮಾಲೀಕ ಫೋನ್‌ನಲ್ಲಿ ಮುಳುಗಿರುವಾಗಲೇ ಮಲಗಿದ್ದ ಸಾಕು ನಾಯಿಯ ಮೇಲೆ ಚಿರತೆ ದಾಳಿ ಮಾಡಿದ ವಿಡಿಯೋ ಭೋರ್ ತಾಲೂಕಿನ ದೇಗಾಂವ್ ಗ್ರಾಮದಲ್ಲಿ ಘಟನೆ ನಡೆದಿದೆ) ಎಂದು ಬರೆದುಕೊಂಡಿದ್ದರೆ.

ಇದನ್ನು ಓದಿ : ಪೊಲೀಸರು ತಮ್ಮ ಖಾಸಗಿ ವಾಹನದ ಮೇಲೆ “POLICE” ಅಂತ ಹಾಕಿಸಿಕೊಳ್ಳಬಹುದೇ.? ಇಲ್ಲಿದೆ ಗೃಹ ಸಚಿವರ ಸ್ಪಷ್ಟನೆ.!

ವಿಡಿಯೋದಲ್ಲಿ ನೆಲದ ಮೇಲೆ ನಾಯಿ ನಿದ್ದೆಗೆ ಜಾರಿದ ವೇಳೆ (sleeping time) ಚಿರತೆಯೊಂದು ನಿಧಾನವಾಗಿ ನಡೆದುಕೊಂಡು ಬಂದು ಅತ್ತಿತ್ತ ನೋಡಿ ಛಂಗನೆ ನಾಯಿಯ ಕತ್ತಿಗೆ ಬಾಯಿ ಹಾಕಿ ಎಳೆದುಕೊಂಡು ಕ್ಷಣಾರ್ಧದಲ್ಲಿ ಹೋಗಿದೆ. ನಾಯಿಯ ಮಾಲೀಕ (owner) ಫೋನ್‌ನಿಂದ ಹೊರಬರುವದು ಏನಾಯಿತೆನ್ನುವಷ್ಟರಲ್ಲಿ ನಾಯಿ ಮಾಯವಾಗಿದೆ.

ನಾಯಿಯನ್ನು ಚಿರತೆ ಹೊತ್ತೊಯ್ದು ವಿಷಯ ತಿಳಿಯುತಲೇ ಯುವಕ ಕೂಡಲೇ (immediately) ಕಿರುಚಾಡುತ್ತಾ ತನ್ನ ಮನೆಯವರನ್ನು ಹಾಗೂ ನೆರೆಹೊರೆಯ ಮನೆಯವರನ್ನು ಎಬ್ಬಿಸಿದ್ದಾನೆ.

ಇದನ್ನು ಓದಿ : ಪೊಲೀಸ್ ಇಲಾಖೆಯಲ್ಲಿ 18,581 ಹುದ್ದೆಗಳು ಖಾಲಿ : ಗೃಹ ಸಚಿವ ಪರಮೇಶ್ವರ್.!

ಆದರೆ ಚಿರತೆ ಅಷ್ಟೋತ್ತಿಗಾಗಲೇ
ಓಡಿ ಹೋಗಿದೆ. ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ (forest deportment) ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ವಿಡಿಯೋ ನೋಡಿ :

ಹಿಂದಿನ ಸುದ್ದಿ : ಪೊಲೀಸರು ತಮ್ಮ ಖಾಸಗಿ ವಾಹನದ ಮೇಲೆ “POLICE” ಅಂತ ಹಾಕಿಸಿಕೊಳ್ಳಬಹುದೇ.? ಇಲ್ಲಿದೆ ಗೃಹ ಸಚಿವರ ಸ್ಪಷ್ಟನೆ.!

ಜನಸ್ಪಂದನ ನ್ಯೂಸ್‌, ಬೆಂಗಳೂರು : ಪೊಲೀಸರು ತಮ್ಮ ಖಾಸಗಿ ವಾಹನಗಳ (Private vehicles) ಮೇಲೆ “POLICE” ಎಂಬ ಸ್ಟಿಕ್ಕರ್‌ ಹಾಕಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ (In law) ಇದಕ್ಕೆ ಅವಕಾಶ ಇದೆಯೇ? ಹೀಗೊಂದು ಪ್ರಶ್ನೆ ಬಂದಾಗ ಸ್ವತಃ ಗೃಹ ಸಚಿವ ಜಿ.ಪರಮೇಶ್ವರ್‌ (Home Minister G. Parameshwar) ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ (Staff) ಅಷ್ಟೆ ಏಕೆ ಅವರ ಕುಟುಂಬಸ್ಥರು ಕೂಡ ತಮ್ಮ ಖಾಸಗಿ (Private) ವಾಹನದ ಮೇಲೆ “ಪೊಲೀಸ್‌” ಎಂದು ಬರೆಸಿರುವುದನ್ನು ನಾವು ದಿನ ನಿತ್ಯ ನೋಡುತ್ತೇವೆ. ಈ ಬಗ್ಗೆ ಶ್ರವಣ ಬೆಳಗೊಳದ ಶಾಸಕ ಬಾಲಕೃಷ್ಣ ಸಿ. ಎನ್ (MLA Balakrishna C. N) ಅವರು ರಾಜ್ಯದ ಪೊಲೀಸ್​ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ (Private) ವಾಹನದ ಮೇಲೆ ಪೊಲೀಸ್​ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ.? ಎಂದು ಪ್ರಶ್ನಿಸಿದ್ದರು.

ಇದನ್ನು ಓದಿ : ತನಿಷ್ಕ್ ಜ್ಯುವೆಲ್ಲರ್ಸ್​ ಶೋರೂಮ್​ಗೆ ನುಗ್ಗಿ 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ; ವಿಡಿಯೋ ನೋಡಿ.!

ಶಾಸಕರ ಈ ಪ್ರಶ್ನೆಗೆ ಸ್ವತಃ ಗೃಹ ಸಚಿವ ಡಾ.‌ಜಿ.ಪರಮೇಶ್ವರ (G̤Parameshwara) ಸ್ಪಷ್ಟನೆ ನೀಡಿದ್ದು, ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ (Officers and staff) ‌ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ (There is no provision in law) ಎಂದು ಸ್ಪಷ್ಟವಾಗಿ ಉತ್ತರಿಸಿದ್ದಾರೆ.

ಒಂದು ವೇಳೆ ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲ್ಲಿ ಅಥವಾ ಸಿಬ್ಬಂದಿಗಳಾಗಲ್ಲಿ ತಮ್ಮ ಸ್ವಂತ (ಖಾಸಗಿ) ವಾಹನದ ಮೇಲೆ “POLICE” ಎಂದು ಬರೆಸುವಂತಿಲ್ಲ. ಹಾಗೊಂದು ವೇಳೆ ಬರೆಸಿದ್ದೇ ಆದರೆ ಅದು ಕಾನೂನು ಉಲ್ಲಂಘಿಸಿದಂತೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ : ಯುವತಿಯ ಮೇಲೆ ಒಮ್ಮೆಲೇ ಹತ್ತಾರು ಬೀದಿ ನಾಯಿಗಳ ದಾಳಿ : ಭಯಾನಕ Video ವೈರಲ್.?

ಪೊಲೀಸ್‌ ಸಿಬ್ಬಂದಿಗೆ ಪೊಲೀಸ್‌ ಇಲಾಖೆಯಿಂದ ಕೊಡಲ್ಪಟ್ಟ ಇಲಾಖೆಯ ವಾಹನಗಳ ಮೇಲೆ ಪೊಲೀಸ್‌ (POLICE) ಎಂಬ ಸ್ಟಿಕ್ಕರ್‌ (Sticker) ಅಂಟಿಸಲಾಗಿರುತ್ತದೆ. ಇದು ಇಲಾಖೆಯ ವತಿಯಿಂದ ಅಧಿಕೃತವಾಗಿ ಅಂಟಿಸಲಾದ ಸ್ಟಿಕ್ಕರ್‌ ಹಾಗೆಯೇ ಸಿಬ್ಬಂದಿಗೆ ಇಲಾಖೆ ವತಿಯಿಂದ ಸಿಗುವ ವಾಹನಗಳ ಮೇಲೂ ಸಹ POLICE ಅಂತ ಹೆಸರು ಇದ್ದೇ ಇರುತ್ತೆ.

ಸ್ವಂತ (Privet) ವಾಹನದ ಮೇಲೆ ಪೊಲೀಸ್ ಅಧಿಕಾರಿಗಳಾಗಲ್ಲಿ ಅಥವಾ ಸಿಬ್ಬಂದಿಗಳಾಗಲ್ಲಿ ಪೊಲೀಸ್ ಎಂದು ಬರೆಸಿದ್ದರೇ ಅವರ ವಿರುದ್ಧ 2022 ರ ಸರ್ಕಾರದ ಸುತ್ತೋಲೆ (Government Circular) ಪ್ರಕಾರ ಕಾನೂನು ಕ್ರಮ (Legal action) ಆಗುತ್ತದೆ ಎಂದು ಗೃಹ ಸಚಿವ ಡಾ. ಜಿ‌.ಪರಮೇಶ್ವರ ಲಿಖಿತ ಉತ್ತರ ನೀಡಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!