ಜನಸ್ಪಂದನ ನ್ಯೂಸ್, ಡೆಸ್ಕ್ : ಗುಜರಾತ್‌ನ ಗಿರ್ (Gir) ಅರಣ್ಯದೊಳಗಿನ ರಸ್ತೆಯಲ್ಲಿ ಮೂವರು ಯುವಕರು ಜಾಲಿರೈಡ್‌ಗೆಂದು ಬೈಕ್‌ನಲ್ಲಿ ಹೋಗುತ್ತಾರೆ. ಅವರು ಕಾಡಿನಲ್ಲಿ ಪ್ರವೇಶಿಸುತ್ತಿದ್ದಂತೆಯೇ ಎರಡು ಸಿಂಹಗಳು ಆಕಸ್ಮಿಕವಾಗಿ ಅವರ ದಾರಿಗೆ ಅಡ್ಡ ಬರುತ್ತವೆ.
ರಸ್ತೆ ಮಧ್ಯದಲ್ಲಿ ಸಿಂಹವನ್ನು ನೋಡಿದೇ ತಡ ಎದ್ನೋ ಬಿದ್ನೋ ಎಂದು ಇಬ್ಬರು ಯುವಕರು (younger) ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಮ್ಮ ಬೈಕ್ ಬಿಟ್ಟು ಓಡಿ ಹೋಗುತ್ತಾರೆ. ಆದರೆ ಓರ್ವ ಮಾತ್ರ ತಾನೊಬ್ಬ Hero ಅಂತ ಅನಿಸಿಕೊಳ್ಳಲು ಬೈಕ್ ಹತ್ತಿರಾನೇ ನಿಲ್ಲುತ್ತಾನೆ.
ಇದನ್ನು ಓದಿ : ಮುಂದಿನ ಎರಡು ದಿನ ಕರ್ನಾಟಕದ ಈ 4 ಜಿಲ್ಲೆಗಳಲ್ಲಿ ಮಳೆಯ ಆಗಮನ.!
ಯಾವಾಗ ಸಿಂಹಗಳು ತನ್ನತ್ತನ್ನೇ ಬರುತಿವೆ ಅಂತ ತಿಳಿದುಕೊಂಡನೋ ಆಗ ನೋಡಿ ಆ ಹೀರೋ (Her) ಹೇಗೆ ಓಡಿದ ಅಂತ ವಿಡಿಯೋದಲ್ಲಿ ನೋಡಬಹುದು.
ಆದರೆ ಸಿಂಹಗಳು (Lion) ಅವುಗಳತ್ತ ಹಿಂತಿರುಗಿ ನೋಡಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ ; ಆಸಕ್ತರು ಅರ್ಜಿ ಸಲ್ಲಿಸಿ.!
ವಿಡಿಯೋದಲ್ಲಿ ಏನಿದೆ :
ವೈರಲ್ ಆಗಿರುವ ವೀಡಿಯೊದಲ್ಲಿ, ಮೂವರು ಯುವಕರು ಬೈಕ್‌ನಲ್ಲಿ ಬರುತ್ತಿದ್ದಾಗ, ಎರಡು ಸಿಂಹಗಳು ಪೊದೆಗಳಿಂದ ಹೊರಬಂದು ಅರಣ್ಯ(Forest) ರಸ್ತೆಯಲ್ಲಿ ಬೈಕ್ ಸವಾರರ ಕಡೆಗೆ ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಿಂಹಗಳನ್ನು ನೋಡಿದೇ ತಡ ಓರ್ವ ಯುವಕ ತಾನು ಬಂದ ರಸ್ತೆಯಲ್ಲೇ ಎದ್ನೋ ಬಿದ್ನೋ ಅಂತ ಓಡಿ ಹೋಗುತ್ತಾನೆ.
ಇನ್ನೋಬ್ಬ ಯುವಕ ಹತ್ತಿರದ ಪೊದೆಗಳಿಗೆ ಹೋಗುತ್ತಾನೆ ಇದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಬೈಕ್ (Bike) ಸವಾರಿ ಮಾಡುತ್ತಿದ್ದ ವ್ಯಕ್ತಿ ಸ್ವಲ್ಪ ಹೊತ್ತು ಅವುಗಳನ್ನು ನೋಡುತ್ತಾ ನಿಂತಿದ್ದ. ಆದರೆ ಸಿಂಹಗಳು ಯಾವಾಗ ತನ್ನ ಕಡೆ ನೋಡುತ್ತಿವೆ ಅಂತ ತಿಳಿದನೋ ಅವನು ಕೂಡ ಭಯಭೀತನಾಗಿ ಪೊದೆಗಳ ಕಡೆಗೆ ಓಡಿ ಹೋಗುತ್ತಾನೆ. ಆದರೆ ಈ ಎರಡು ಸಿಂಹಗಳು ಅವುಗಳಿಗೆ ಏನೂ ಮಾಡದೆ ತಮ್ಮಷ್ಟಕ್ಕೆ ತಾವು ಸುಮ್ಮನೆ ಹೋಗುತ್ತವೆ.
ಇದನ್ನು ಓದಿ : ಖೋಟಾ ನೋಟು ದಂಧೆ : ಕಾನ್ಸ್‌ಟೇಬಲ್ ಸೇರಿ ನಾಲ್ವರು Arrest.!
ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಸಿಂಹಗಳು ಮನುಷ್ಯರನ್ನು ಬೇಟೆಯಾಡಲು ಆಸಕ್ತಿ ಹೊಂದಿಲ್ಲ” ಎಂದು ಅವರು ಬರೆದಿದ್ದಾರೆ. ಆದ್ದರಿಂದ ಅವು ಹೊರಟುಹೋದವು.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸುಮಾರು 29,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 2,000 ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು ಹಲವಾರು ರೀಟ್ವೀಟ್‌ಗಳನ್ನು ಪಡೆದುಕೊಂಡಿದೆ.
ವಿಡಿಯೋ ನೋಡಿ :
Another day in Gujurat😃
The lion pair is just not interested in human as its prey. Otherwise, it could have easily outpaced the running bikers. pic.twitter.com/Rogc1ydJGx— Susanta Nanda (@susantananda3) March 16, 2025
ಹಿಂದಿನ ಸುದ್ದಿ : ಖೋಟಾ ನೋಟು ದಂಧೆ : ಕಾನ್ಸ್‌ಟೇಬಲ್ ಸೇರಿ ನಾಲ್ವರು Arrest.!
ಜನಸ್ಪಂದನ ನ್ಯೂಸ್, ರಾಯಚೂರು : ಜಿಲ್ಲೆಯಲ್ಲಿ ಪೊಲೀಸರು ಬೃಹತ್ ನಕಲಿ/ಖೋಟಾ ನೋಟು (Counterfeit note) ದಂಧೆಯನ್ನು ಬಯಲಿಗೆಳೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಕಲಿ ನೋಟು ತಯಾರಿಕಾ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ, ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ (Armed Reserve Force Constable) ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಮರಿಲಿಂಗ, ರಮೇಶ್ ಆದಿ, ಸದ್ದಾಂ, ಮತ್ತು ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಲಾಗಿದೆ.
ಇದನ್ನು ಓದಿ : Belagavi : ಭೀಕರ ರಸ್ತೆ ಅ*ಘಾ*, ಮೂವರ ಸಾವು.!
ರಾಯಚೂರಿನ ರಹಸ್ಯ ಸ್ಥಳದಲ್ಲಿ (secret place) ನಕಲಿ ನೋಟು ತಯಾರಿಸಲಾಗುತ್ತಿದ್ದು, ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ದಾಳಿಯ ಸಮಯದಲ್ಲಿ, ನಕಲಿ ಕರೆನ್ಸಿ ಉತ್ಪಾದಿಸಲು ಬಳಸುವ ಯಂತ್ರಗಳು, ಶಾಯಿ, ಮುದ್ರಿತ ನೋಟುಗಳು (Machines, ink, printed notes) ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. 100, 200 ಮತ್ತು 500 ಮುಖಬೆಲೆಯ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತಿತ್ತು.
ಇದನ್ನು ಓದಿ : BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ ; ಆಸಕ್ತರು ಅರ್ಜಿ ಸಲ್ಲಿಸಿ.!
ಈ ನಕಲಿ ನೋಟುಗಳನ್ನು ರಾಜ್ಯ ಮತ್ತು ವಿದೇಶ (state and abroad) ಗಳಿಗೆ ಕಳುಹಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಹಗರಣದಲ್ಲಿ ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಭಾಗಿಯಾಗಿರುವುದು ಆಶ್ಚರ್ಯಕರವಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲು ಹೆಚ್ಚಿನ ತನಿಖೆ (Further investigation) ನಡೆಸುತ್ತಿದ್ದಾರೆ.