ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುವ ಜನಕ್ಕೆ ಮೊಬೈಲ್ (Mobile) ಒಂದಿದ್ದರೆ ಸಾಕು, ಮತ್ತೇನು ಬೇಡವೇ ಬೇಡ. ಕೆಲವರತ್ತು ಮೊಬೈಲ್‌ನಲ್ಲಿ ಮಾತಾಡುತ್ತಿದ್ದರೆ ಆಯಿತು ಅಕ್ಕ ಪಕ್ಕದಲ್ಲಿ ಯಾರೇ ಸತ್ತರು ಸಹ ಮರಳಿ ನೋಡುವುದೇ ಇಲ್ಲ. ಅಷ್ಟೆ ಏಕೆ ತಾವೇ ಸಾಯುತ್ತಿದ್ದರು ಬಾಹ್ಯ ಪ್ರಪಂಚದ ಅರಿವೇ ಅವರಿಗೆ ಇರೋದಿಲ್ಲ ಅನ್ನೋದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆ (Good example) ಎಂಬಂತೆ ವಿಡಿಯೋ ಒಂದು ವೈರಲ್ ಆಗಿದೆ.
ರೈಲು ಹಳಿ (Train track) ಯ ಮೇಲೆ ಯುವಕನೋರ್ವ ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದಾನೆ. ಅದೇ ವೇಳೆಗೆ ಸರಿಯಾಗಿ ಅದೆ ಟ್ರ್ಯಾಕ್ ಮೇಲೆ ರೈಲೊಂದು ಬರುತ್ತದೆ. ಓರ್ವ ಯುವಕ ಹಳಿಯ ಮೇಲೆ ಕುಳಿತಿರುವುದನ್ನು ನೋಡಿದ ರೈಲು ಚಾಲಕ ಹಾರ್ನ್ (Horn) ಹಾಕುತ್ತಾನೆ. ಚಾಲಕ ಎಷ್ಟೇ ಹಾರ್ನ್ ಹಾಕಿದರೂ ಯುವಕ ಮಾತ್ರ ತಾನು ಕುಳಿತ ಜಾಗದಿಂದ ಅಲುಗಾಡಲೇ ಇಲ್ಲ.
ಇದನ್ನು ನೋಡಿ : Prayagraj ನ ಕುಂಭಮೇಳ ಕಾಲ್ತುಳಿತ ಪ್ರಕರಣ : ಬೆಳಗಾವಿಯ ಮೂವರ ಸಾ*ವು.!
ಕೊನೆಗೆ ಇನ್ನೇನು ರೈಲು ಆತನ ಮೇಲೆ ಹಾಯುತ್ತದೆ ಎಂದು ಅರಿತ ಮಾನವೀಯತೆಯ ಸಾಕಾರಮೂರ್ತಿಯಾದ ರೈಲು ಚಾಲಕ (train Pilot) ಒಬ್ಬ ಅಮಾಯಕ ಯುವಕನ ಜೀವಕ್ಕೆ ಹಾನಿ ಮಾಡಬಾರದು ಎಂದು ಸ್ವತಃ ರೈಲನ್ನು ನಿಲ್ಲಿಸುತ್ತಾನೆ.
ರೈಲು ನಿಲ್ಲುತ್ತಿದಂತೆ ಈ ಲೋಕಕ್ಕೆ ಬಂದ ಯುವಕ ಎದ್ದೇಳುತ್ತಾನೆ. ಅಷ್ಟರಲ್ಲಿಯೇ
ಯುವಕ (Young man) ನ ವರ್ತನೆಯಿಂದ ಕೋಪಗೊಂಡ ರೈಲು ಚಾಲಕ ಕೆಳಗಿಳಿದು ಕಲ್ಲನ್ನು ಹಿಡಿದು ಯುವಕನ ಬಳಿ ಬರುತ್ತಾನೆ.
ಇದನ್ನು ನೋಡಿ : ಮಹಾಕುಂಭಮೇಳದಿಂದ ವಾಪಸ್ ಬರುವಾಗ ರಸ್ತೆ ಅ*ಪಘಾ*ತ : ಕರ್ನಾಟಕದ ಇಬ್ಬರು ಯುವಕರ ಸಾ*ವು.!
ರೈಲು ಚಾಲಕ ಕೆಳಗಿಳುತ್ತಿದಂತೆಯೇ ಮೊಬೈಲ್ ಹಿಡಿದುಕೊಂಡು ಯುವಕ ಎದ್ನೋ ಬಿದ್ನೋ ಅಂತ ಹಳಿಯಿಂದ ಎದ್ದು ಓಡಿ ಹೋಗಿದ್ದಾನೆ. ಈ Vedio ಸದ್ಯ social medai ದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡಿದ ಅನೇಕ ನೆಟ್ಟಿಗರು ತಮ್ಮದೇ ಆದ ಭಾವದಲ್ಲಿ ಕಮೆಂಟ್ ಮಾಡಿದ್ದಾರೆ. Viral ಆಗಿರೋ ವಿಡಿಯೋದಲ್ಲಿ ಬರೆದಿರುವ ಪ್ರಕಾರ ಈ ಘಟನೆ ಗಾಜಿಪುರದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಇಲ್ಲಿದೇ ನೋಡಿ ವಿಡಿಯೋ :
View this post on Instagram