Sunday, December 22, 2024
HomeViral Video'ಸಹಕರಿಸಿದರೆ ಪ್ರಕರಣದಲ್ಲಿ ಸಹಾಯ' ಎಂದ ಪೊಲೀಸ್ ಇನ್ಸ್‌ಪೆಕ್ಟರ್ ; Video ವೈರಲ್.!
spot_img

‘ಸಹಕರಿಸಿದರೆ ಪ್ರಕರಣದಲ್ಲಿ ಸಹಾಯ’ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ; Video ವೈರಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಪೊಲೀಸ್​ ಅಧಿಕಾರಿಯೊಬ್ಬರು (Police Officers), ನಾನು ಹೇಳಿದಂತೆ ಕೇಳು ಇಲ್ಲದಿದ್ರೆ ನಿನ್ನ ಮೇಲೆ ಕೇಸ್​ ಹಾಕ್ತೀನಿ ಎಂದು ಮಹಿಳೆಗೆ ಬ್ಲ್ಯಾಕ್​ಮೇಲ್​ ಮಾಡಿರುವ ಘಟನೆ ಬಿಹಾರದ ಸಮಸ್ತೀಪುರ ಜಿಲ್ಲೆಯಲ್ಲಿ (Samastipur district of Bihar) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇನ್ನೂ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ (The video has gone viral on social media).

ಇದನ್ನು ಓದಿ : KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ವಿಡಿಯೋದಲ್ಲಿ ಸಮಸ್ತೀಪುರ ಜಿಲ್ಲೆಯ ಪಟೋರಿ ಪೊಲೀಸ್ ಠಾಣಾಧಿಕಾರಿ (Police Station Officer) ಮೊಹಮ್ಮದ್ ಬಿಲಾಲ್ ಖಾನ್ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು (Misbehaving with a woman) ಕಾಣಬಹುದು.

ಪೊಲೀಸ್ ಅಧಿಕಾರಿಯೂ ಮಹಿಳೆಗೆ ನಾನು ಹೇಳಿದಂತೆ ಕೇಳಿದರೆ ನಿನ್ನ ಮೇಲೆ ಯಾವುದೇ ರೀತಿಯ ಪ್ರಕರಣ ದಾಖಲಿಸುವುದಿಲ್ಲ (No case will be registered) ಎಂದು ವೈರಲ್ ವಿಡಿಯೋದಲ್ಲಿ ಹೇಳುವುದನ್ನು ಕೇಳಬಹುದು. ಒಂದು ವೇಳೆ ನಾ ಹೇಳಿದಂತೆ ನೀನು ನಡೆದುಕೊಳ್ಳದಿದ್ದರೆ ನಿನ್ನ ಮೇಲೆ ಕೇಸ್​ ಹಾಕಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿರುವುದನ್ನು ನೋಡಬಹುದು.

ಇದನ್ನು ಓದಿ : 2 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಜೀವ ಇರುವವರೆಗೆ ಕಠಿಣ ಶಿಕ್ಷೆ.!

ಈ ಕುರಿತು ಪ್ರತಿಕ್ರಿಯಿಸಿರುವ ಸಮಸ್ಥೀಪುರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ಮಹಿಳೆ ತನ್ನ ಕುಟುಂಬಸ್ಥರೊಂದಿಗೆ ಪ್ರಕರಣ ಒಂದರ ವಿಚಾರಣೆಗೆ (inquiry) ಬಂದಿದ್ದರು. ಈ ವೇಳೆ ಪ್ರತ್ಯೇಕವಾಗಿ ವಿಚಾರಣೆ ನಡೆಸುವುದಿದೆ ಎಂದು ಹೇಳಿ ಅಧಿಕಾರಿ ಮೊಹಮ್ಮದ್ ಆಕೆಯನ್ನು ಠಾಣೆಯ ಹತ್ತಿರ ಇದ್ದ ಮನೆಗೆ ಕರೆದುಕೊಂಡು ಹೋಗಿ ಆಕೆಗೆ ಬಲವಂತ ಮಾಡಿದ್ದಾರೆ (She was forced).

ಈ ವೇಳೆ ಮಹಿಳೆ ವಿಡಿಯೋವನ್ನು ಮಾಡಿಕೊಂಡಿದ್ದು, ಸದ್ಯ ಅಧಿಕಾರಿಯನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ. ಘಟನೆ ಸಂಬಂಧ FIR ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ :

ಹಿಂದಿನ ಸುದ್ದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ಬರೋಬ್ಬರಿ 11 ತಿಂಗಳ ಹಿಂದೆ ವ್ಯಕ್ತಿಯೊಬ್ಬರನ್ನು ಮುಳುಗಿಸಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಹಾರೂಗೇರಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!

ಇಂದು (ದಿ.04) ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಶಂಕರ ಗುಳೇದ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದರು.

ಕೃಷ್ಣಾ ನದಿಯಲ್ಲಿ 27.12.2023 ರಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಮಧ್ಯೆ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಯುವಕನೋರ್ವ ಕಾಣೆಯಾಗಿದ್ದನು. ಆದರೆ ಆತನ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಇದನ್ನು ಓದಿ : Health : ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?

ಪೊಲೀಸರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿದರು. ಕೊನೆಗೂ ಅದು ಇಟನಾಳ ಗ್ರಾಮದ ಯುವಕನ ಶವ ಎನ್ನುವುದು ಗೊತ್ತಾಯಿತು. ಯುವಕನ ಪತ್ನಿ, ಆಕೆಯ ಪ್ರಿಯಕರ, ಹಾಗೂ ಇನ್ನೊಬ್ಬ ಸೇರಿ ಕೃಷ್ಣಾ ನದಿಯಲ್ಲಿ ಯುವಕನನ್ನು ಮುಳುಗಿಸಿ ಕೊಲೆಗೈದಿದ್ದರು ಎನ್ನುವುದು ಪೊಲೀಸ್ ತನಿಖೆಯಲ್ಲಿ ಸಾಬೀತುಗೊಂಡಿದೆ.

ಒಂದೂವರೆ ವರ್ಷದ ಹಿಂದೆ ಯುವಕನ ಪತ್ನಿ ಕಾಣೆಯಾದ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವಕನ ಪತ್ನಿ ಓರ್ವನೊಂದಿಗೆ ಓಡಿ ಹೋಗಿದ್ದು, ಯುವಕನಿಗೆ ಗೊತ್ತಾಗಿದೆ.

ಇದನ್ನು ಓದಿ : Video : ಕಣ್ಣಿಗೆ ಕನ್ನಡಕ, ತಲೆಗೆ ಟವಲ್, ದೇಹಕ್ಕೆ ಬಾತ್ ಟವೆಲ್ ಧರಿಸಿ ಮೆಟ್ರೋಗೆ ಕಾಲಿಟ್ಟ ಯುವತಿಯರು.!

ಕೆಲದಿನಗಳ ನಂತರ ಪತ್ನಿ ಮನೆಗೆ ವಾಪಸ್ ಬಂದಿದ್ದಳು. ದಂಪತಿಗಳ ನಡುವೆ ಓಡಿ ಹೋಗಿದ್ದ ವಿಚಾರಕ್ಕೆ ದಿನವೂ ಗಲಾಟೆಯಾಗುತ್ತಿತ್ತು. ತನ್ನ ಪತ್ನಿಯ ಸಹ ಸಂಗ ಬಿಡುವಂತೆ ಪತ್ನಿಯ ಪ್ರಿಯಕರನಿಗೆ, ಯುವಕ ಎಚ್ಚರಿಕೆ ಕೊಟ್ಟಿದ್ದ.

ಕೊನೆಗೂ ಪತಿಗೆಯೇ ಗತಿ ಕಾಣಿಸಲು ಮುಂದಾದ ಪತ್ನಿ, ತನ್ನ ಪ್ರಿಯಕರ ಹಾಗು ಇನ್ನೊಬ್ಬನ ನೆರವಿನೊಂದಿಗೆ ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಲ್ಲಪ್ಪನನ್ನು ಕೃಷ್ಣಾ ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments