Saturday, July 13, 2024
spot_img
spot_img
spot_img
spot_img
spot_img
spot_img

ಮಗು ಬೇಕು ಅಂದ ಗಂಡ ; ಮೂರನೇ ಮದುವೆ ಮಾಡಿಸಿದ ಪತ್ನಿಯರು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯರಿಬ್ಬರು ತಮ್ಮ ಗಂಡನಿಗೆ ಮೂರನೇ ಮದುವೆಯನ್ನು ಭರ್ಜರಿಯಾಗಿ ಮಾಡಿಸಿದ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯ ಪೆದ್ದಬಯಲು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಪಂಡನ್ನಾ ಎಂಬಾತ 3ನೇ ಮದುವೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.

ಪಂಡನ್ನಾ ಮೊದಲ ಮದುವೆ ಮಾಡಿಕೊಂಡಿದ್ದು, ಮಕ್ಕಳಾಗದ ಹಿನ್ನಲೆಯಲ್ಲಿ 2007 ರಲ್ಲಿ ಎರಡನೇ ಮದುವೆ ಮಾಡಿಕೊಂಡಿದ್ದ, ಸದ್ಯ ಎರಡನೇ ಹೆಂಡತಿಗೆ ಒಬ್ಬ ಗಂಡು ಮಗು ಇದ್ದಾನೆ.

ಇದನ್ನು ಓದಿ : 10 ಮತ್ತು 12 ನೇ ತರಗತಿ ಪಾಸ ಆದವರಿಗೆ ಯೂನಿಯನ್ ಬ್ಯಾಂಕ್‌ ನಲ್ಲಿ ಉದ್ಯೋಗವಕಾಶ.!

ಆದರೆ ನನಗೆ ಇನ್ನೊಂದು ಮಗು ಬೇಕು ಎಂದು ಪತ್ನಿಯರನ್ನು ಕೇಳಿದ್ದಾಗ ಆ ಇಬ್ಬರು ಹೆಂಡತಿಯರು ಮೂರನೇ ಮದುವೆಯನ್ನು ಮಾಡಿಸಿದ್ದಾರೆ.

ಪೆದ್ದಬಯಲು ಗ್ರಾಮದಲ್ಲಿ ಪಂಡನ್ನಾ ಪತ್ನಿಯರಾದ ಪಾರ್ವತಮ್ಮ ಮತ್ತು ಅಪ್ಪಲಮ್ಮ ಮೂರನೇ ಮದುವೆಗೆ ಭರ್ಜರಿ ತಯಾರಿಯನ್ನು ನಡೆಸಿದ್ದು, ಬ್ಯಾನರ್‌ಗಳನ್ನು ಹಾಕಿಸಿ, ಮದುವೆ ಮಾಡಿ ಸಂಭ್ರಮಿಸಿದ್ದಾರೆ.

ಇದನ್ನು ಓದಿ : ಕರ್ನಾಟಕ ವಸತಿ ನಿಲಯಗಳಲ್ಲಿ ಖಾಲಿ ಇರುವ ಹಾಸ್ಟೆಲ್ ವಾರ್ಡನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

ಇನ್ನೂ ಈ ಮದುವೆ ಕಾರ್ಯವು ವಿಜೃಂಭಣೆಯಿಂದ ನೆರವೇರಿದೆ. ಈ ಮದುವೆಯ ಮೂಲಕ ಪಂಡನ್ನಾ, ಪಾರ್ವತಮ್ಮ, ಅಪ್ಪಲಮ್ಮ ಮತ್ತು ಲಕ್ಷ್ಮೀ ಅವರ ಸಂಸಾರವು ಮತ್ತಷ್ಟು ಸಂತೋಷದಿಂದ ಕೂಡಿದೆ.

ಗಂಡನಿಗೆ ಮೂರನೇ ಮದುವೆಯನ್ನು ಮಾಡಿಸಿದ ಘಟನೆಯ ಪರಿ ಇದೀಗ ಎಲ್ಲರ ಗಮನ ಸೆಳೆದಿದೆ. ಸದ್ಯ ಇದೇ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೀನು ಪುಣ್ಯಾತ್ಮ ಗುರು ಎಂದು ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ. (ಏಜೇನ್ಸಿಸ್)

spot_img
spot_img
- Advertisment -spot_img