Sunday, December 22, 2024
HomeNational Newsವಕ್ಫ್‌ ಬೋರ್ಡ್‌ನ್ನೇ ವಜಾಗೊಳಿಸಿದ Andhra Pradesh ಸರ್ಕಾರ.!
spot_img

ವಕ್ಫ್‌ ಬೋರ್ಡ್‌ನ್ನೇ ವಜಾಗೊಳಿಸಿದ Andhra Pradesh ಸರ್ಕಾರ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಆಂಧ್ರಪ್ರದೇಶ ಸರ್ಕಾರವು (Government of Andhra Pradesh) ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್ ಅನ್ನು ಆಂಧ್ರ ಪ್ರದೇಶ ಸರ್ಕಾರ ವಿಸರ್ಜಿಸಿದೆ (Government dissolved) ಎಂದು ವರದಿಯಾಗಿದೆ.

ಹಾಲಿ ಸರ್ಕಾರವು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (Department of Minority Welfare) ಹೊರಡಿಸಿದ್ದ ಜಿಒ-47 ರದ್ದುಗೊಳಿಸಿ, ಹೊಸ ಜಿಒ-75 ಹೊರಡಿಸಿದೆ.

ಇದನ್ನು ಓದಿ : ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಆರೋಪ; ಕಾಂಗ್ರೆಸ್ ಮುಖಂಡ Arrest.!

ಈ ಕುರಿತು ರಾಜ್ಯ ಕಾನೂನು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್. ಎಂ. ಡಿ. ಫಾರೂಕ್, ಶನಿವಾರ ಈ ಆದೇಶ ಹೊರಡಿಸಲಾಗಿದೆ (Order issued) ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಕುರಿತು ಸಚಿವ ಎನ್. ಎಂ. ಡಿ. ಫಾರೂಕ್, ಕಳೆದ ವರ್ಷ ಅಕ್ಟೋಬರ್ 21 ರಂದು ಹಿಂದಿನ ಸರ್ಕಾರವು ಮಂಡಳಿಯ ಸದಸ್ಯರ ನಾಮನಿರ್ದೇಶನವನ್ನು ಪ್ರಶ್ನಿಸಿ (Question the nomination) ಸಲ್ಲಿಸಿದ ಅರ್ಜಿಯ ನಂತರ ವಕ್ಫ್ ಮಂಡಳಿಯ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹೈಕೋರ್ಟ್ ಮಧ್ಯಂತರ ಆದೇಶಗಳನ್ನು ನೀಡಿದೆ (High Court passed interim orders) ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ : Health : ಈ ಎಲೆಯ ನೀರು ಸೇವಿಸಿದರೆ ಸಾಕು ನಿಮ್ಮ ಬಿಳಿ ಕೂದಲು ಕಪ್ಪಾಗುವುದು.!‌

ಸಿಎಂ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಪ್ರಸ್ತುತ ಸಮ್ಮಿಶ್ರ ಸರ್ಕಾರವು ಈ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ವಕ್ಫ್ ಆಸ್ತಿಗಳನ್ನು ರಕ್ಷಿಸಲು ಮತ್ತು ಅದರ ಹೊಸ ನಿರ್ದೇಶನಗಳ ಅಡಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರವು ಬದ್ಧವಾಗಿದೆ. ಹೊಸ ಆದೇಶ ವಕ್ಫ್ ಮಂಡಳಿಯಲ್ಲಿನ ಆಡಳಿತ ನಿರ್ವಾತವನ್ನು ಪರಿಹರಿಸುವ ಉದ್ದೇಶವನ್ನು (Aim to address governance vacuum) ಹೊಂದಿದೆ ಎಂದು ಅವರು ಒತ್ತಿ ಹೇಳಿದರು.

 

ಹಿಂದಿನ ಸುದ್ದಿ : ದೇಶದ ಅತಿ ದೊಡ್ಡ ಐಟಿ ದಾಳಿ; ಹಣ ಎಣಿಕೆಗಾಗಿ 36 ಯಂತ್ರಗಳ ಬಳಕೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (Income Tax Department Officers) ದಾಳಿ ಮಾಡಿ ಚಿನ್ನಾಭರಣ ಮತ್ತು ಕೋಟ್ಯಂತರ ಹಣವನ್ನು ವಶಕ್ಕೆ (Seize the money) ಪಡೆದುಕೊಂಡಿರುತ್ತಾರೆ.

ಇದನ್ನು ಓದಿ : Vitamin B Complex ಸೇರಿ ಈ 90 ಔಷಧಿಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್.!

ಇವರು ವಶಕ್ಕೆ ಪಡೆದ ಚಿನ್ನಾಭರಣ, ಹಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.

ದೇಶದ ಇತಿಹಾಸದಲ್ಲಿ ಐಟಿ ದಾಳಿಯಲ್ಲಿ ಇದು ಅತ್ಯಂತ ದೊಡ್ಡದಾಗಿದ್ದು (biggest IT attack in the country’s history), ಬರೋಬ್ಬರಿ 10 ದಿನ ಕಾರ್ಯಾಚರಣೆ (10 days operation) ನಡೆದಿದೆ ಎಂದು ವರದಿಯಾಗಿದೆ. 10 ದಿನದಲ್ಲಿ ಅಧಿಕಾರಿಗಳಿಗೆ ಸಿಕ್ಕ ಹಣ ಎಷ್ಟು ಅಂತ ಕೇಳಿದ್ರೆ ನಿಮ್ಮ ತಲೆ ತಿರುಗುವುದಂತು ಗ್ಯಾರಂಟಿ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೇಶದ ಅತಿ ದೊಡ್ಡ ದಾಳಿಯನ್ನು ಒಡಿಶಾ ರಾಜ್ಯದಲ್ಲಿ (State of Odisha) ನಡೆಸಿದ್ದಾರೆ. ಒಡಿಶಾ ರಾಜ್ಯದ ಮದ್ಯ ತಯಾರಿಕಾ ಕಂಪನಿ (A liquor manufacturing company) ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನ (Baud Distilleries Pvt) ಬಹುತೇಕ ಎಲ್ಲಾ ಬ್ರಾಂಚ್‌ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಅಧಿಕಾರಿಗಳು ಬರೋಬ್ಬರಿ 10 ದಿನ ದಾಳಿ ನಡೆಸಿ 352 ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ (352 crore Rs. The money has been seized) ಎನ್ನಲಾಗಿದೆ. ಬೆಲೆಬಾಳುವ ವಸ್ತುಗಳನ್ನು ನೆಲದಡಿಯಲ್ಲಿ ಸಂಗ್ರಹಿಸಿದ್ದು, ಅವುಗಳನ್ನು ಪತ್ತೆ ಮಾಡಲು ವಿಶೇಷ ಸ್ಕ್ಯಾನಿಂಗ್ ವ್ಹೀಲ್ ಎಂಬ ಯಂತ್ರವನ್ನು (A machine called a special scanning wheel) ಅಧಿಕಾರಿಗಳು ಬಳಸಿಕೊಂಡಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ವೇಳೆ ಸಿಕ್ಕ ಹಣವನ್ನು ಎಣಿಸಲು ಬರೋಬ್ಬರಿ 36 ಹಣ ಎಣಿಕೆಯ ಯಂತ್ರಗಳನ್ನು (36 cash counting machines) ತರಿಸಿಕೊಂಡಿದ್ದರು. ಹಣ ಎಣಿಸಲು ವಿವಿಧ ಬ್ಯಾಂಕ್‌ಗಳ ನೌಕರರನ್ನು ಕೂಡ ಬಳಸಿಕೊಳ್ಳಲಾಗಿತ್ತಂತೆ. ದಾಳಿ ವೇಳೆ ಸಿಕ್ಕ ಹಣದ ಕೆಲ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಶೀರ್ಷಿಕೆಯಡಿಯಲ್ಲಿ ವೈರಲ್ ಆಗುತ್ತಿವೆ.

ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?

ದಾಳಿಯಲ್ಲಿ ವಶಕ್ಕೆ ಪಡೆಯಲಾದ ಹಣವನ್ನು ಭಾರೀ ಭದ್ರತೆಯಲ್ಲಿ ಮೂಟೆಗಳಲ್ಲಿ ತುಂಬಿಸಿ ಸಾಗಿಸಲಾಯಿತು (It was packed in sacks under heavy security and transported). ಇನ್ನೂ ಆದಾಯ ತೆರಿಗೆ ಅಧಿಕಾರಿಗಳು ದಾಳಿಯ ಪ್ರತಿಯೊಂದು ಕ್ಷಣವನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಸದ್ಯ ಈ ಹಣವನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಬಿಗಿ ಭದ್ರತೆಯಲ್ಲಿ ಠೇವಣಿ ಇರಿಸಲಾಗಿದೆ (Deposited under tight security) ಎಂದು ವರದಿಯಾಗಿದೆ.

ಆಗಸ್ಟ್‌ನಲ್ಲಿ ಈ ಐಟಿ ದಾಳಿ ನಡೆದಿತ್ತು. ದಾಳಿ ನಡೆಸಿದ ಅಧಿಕಾರಿಗಳನ್ನು ಕೇಂದ್ರ ಸರ್ಕಾರ (central government) ಗೌರವಿಸಿದೆ. ಈ ಮಹಾ ಐಟಿ ದಾಳಿ ಆದಾಯ ತೆರಿಗೆ ತನಿಖಾ ಅಧಿಕಾರಿ ಎಸ್‌ಕೆ ಝಾ ಮತ್ತು ಹೆಚ್ಚುವರಿ ನಿರ್ದೇಶಕ ಗುರುಪ್ರೀತ್ ಸಿಂಗ್ ಅವರ ನೇತೃತ್ವದಲ್ಲಿ (Headed by Income Tax Investigation Officer SK Jha and Additional Director Gurpreet Singh) ನಡೆದಿತ್ತು ಎಂದು ವರದಿ ತಿಳಿಸಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments