Friday, June 14, 2024
spot_img
spot_img
spot_img
spot_img
spot_img
spot_img

ನಟಿ ಜೊತೆ ಸೂಪರ್‌ಸ್ಟಾರ್ ಅನುಚಿತ ವರ್ತನೆ ; ಕಿಡಿಕಾರಿದ ನೆಟ್ಟಿಗರು, video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತೆಲುಗು ಚಿತ್ರರಂಗದ ಮಾಸ್ ಹೀರೋಗಳಲ್ಲಿ‌ (Mass hero) ಬಾಲಕೃಷ್ಣ ಪ್ರಮುಖರು. ವಯಸ್ಸು 63ರಲ್ಲೂ ಅವರಿಗೆ ಅಪಾರ ಅಭಿಮಾನಿ ಬಳಗವಿದೆ.

ಇವರು ಏನೇ ಮಾಡಿದರೂ ಅವರ ಅಭಿಮಾನಿಗಳು ಎಂಜಾಯ್ ಮಾಡುವುದರಿಂದ ಅವರ ಸಿನಿಮಾಗಳಲ್ಲಿ ಲಾಜಿಕ್ ಉಪಯೋಗವಿಲ್ಲ. ಇನ್ನು ನಟ ಬಾಲಕೃಷ್ಣ ಆಗಾಗ ವಿವಾದಗಳಿಗೆ (controversy) ಗುರಿಯಾಗುತ್ತಾರೆ.

ಇದನ್ನು ಓದಿ : RTO : ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ.!

ಇನ್ನೂ ಕೆಲ ದಿನಗಳ ಹಿಂದಷ್ಟೇ ಮುಕ್ತಾಯಗೊಂಡ ತಮಿಳು ಬಿಗ್ ಬಾಸ್ ಕಾರ್ಯಕ್ರಮದ 7ನೇ ಸೀಸನ್ ನಲ್ಲಿ ಭಾಗವಹಿಸಿದ್ದ ನಟಿ ವಿಚಿತ್ರಾ, ಬಾಲಕೃಷ್ಣ ಚಿತ್ರದಲ್ಲಿ ನಟಿಸುವಾಗ ಲೈಂಗಿಕ ಕಿರುಕುಳದ (sexual harassment) ಸಮಸ್ಯೆ ಎದುರಿಸಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ಈ ಹೇಳಿಕೆ ಸಂಚಲನ ಮೂಡಿಸಿದ್ದು, ಇದೀಗ ಈ ನಟಿಯ ಮೇಲೆ ದೌರ್ಜನ್ಯ ನಡೆದಿದೆ ಎಂಬ ವಿವಾದ ಭುಗಿಲೆದ್ದಿದೆ.

ತೆಲುಗು ಚಿತ್ರ ಗ್ಯಾಂಗ್ಸ್ ಆಫ್ ಗೋದಾವರಿಯಲ್ಲಿ ಅಂಜಲಿ, ನಾಸರ್, ನೇಹಾ ಶೆಟ್ಟಿ ಮತ್ತು ವಿಶ್ವಗ್ ಸೇನ್ ನಟಿಸುತ್ತಿದ್ದಾರೆ. ಇವರ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ (guest) ನಟ ಬಾಲಕೃಷ್ಣ ಭಾಗವಹಿಸಿದ್ದರು.

ಆಗ ನೀರಿನ ಬಾಟಲಿಯಲ್ಲಿ ಮದ್ಯ ತಂದಿರುವುದಾಗಿ ಕೆಲ ವಿಡಿಯೋ ದೃಶ್ಯಾವಳಿಗಳು ಬಿಡುಗಡೆಯಾಗಿದ್ದು ವೈರಲ್ ಆಗಿದೆ.

ಇದನ್ನು ಓದಿ : ಎಣ್ಣೆ party ವೇಳೆ ಕಿರಿಕ್ ; ಸರ್ಕಾರಿ ನೌಕರರ ನಡುವೆ ರಣರೋಚಕ ಕಾಳಗ.!

ವೇದಿಕೆ ಮೇಲೆ ಪಕ್ಕದಲ್ಲಿಯೇ ನಿಂತಿದ್ದ ನಟಿ ಅಂಜಲಿ ಅವರನ್ನು ಬಾಲಕೃಷ್ಣ ತಳ್ಳುತ್ತಿರುವ ದೃಶ್ಯಗಳೂ ವೈರಲ್ ಆಗುತ್ತಿವೆ.

ಅಂಜಲಿ, ನೇಹಾ ಶೆಟ್ಟಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು. ಬಾಲಯ್ಯ ಅವರು ಅಂಜಲಿಗೆ ಏನನ್ನೋ ಹೇಳುವ ಪ್ರಯುತ್ನ ಮಾಡಿದ್ದಾರೆ. ಆದರೆ, ಅವರಿಗೆ ಇದು ಕೇಳಿಲ್ಲ. ಇದರಿಂದ ಸಿಟ್ಟಾದ ಬಾಲಯ್ಯ ಅವರು ಅಂಜಲಿಯನ್ನು ತಳ್ಳಿದ್ದಾರೆ. ಅಲ್ಲೇ ಇದ್ದ ನೇಹಾ ಶೆಟ್ಟಿ ಈ ಘಟನೆಯಿಂದ ಶಾಕ್ ಆದರು. ಆದರೆ, ಅಂಜಲಿ ಅವರು ಏನನ್ನೂ ತೋರಿಸಿಕೊಳ್ಳದೆ ನಕ್ಕಿದ್ದಾರೆ

ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಬಾಲಕೃಷ್ಣ ವೇದಿಕೆಯ ಮೇಲೆ ನಟಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

spot_img
spot_img
- Advertisment -spot_img