ಜನಸ್ಪಂದನ ನ್ಯೂಸ್, ವೈರಲ್ ವಿಡಿಯೋ : ಪ್ರಕೃತಿಯೇ (nature) ಒಂದು ವಿಸ್ಮಯ (awe). ಪ್ರಕೃತಿಯು ಪ್ರತಿಯೊಂದು ಜೀವಿಗೂ ಒಂದು ವಿಶೇಷವಾದ ಶಕ್ತಿಯನ್ನು (special power) ನೀಡಿದೆ. ಬೇಟೆಯಾಡುವ ವಿಷಯಕ್ಕೆ ಬಂದರೆ ಒಂದು ಬಲಿಷ್ಠ ಜೀವಿ ಮತ್ತೊಂದು ಸಾಧು ಜೀವಿಯನ್ನು ಬೇಟೆಯಾಡುವ ಶಕ್ತಿಯನ್ನು ಹೊಂದಿದೆ.
ಆದರೆ ಕೆಲವೊಮ್ಮೆ ಬಲಿಷ್ಠ ಜೀವಿಯೇ (strong creature) ಇತರ ಜೀವಿಗಳಿಗೆ ಆಹಾರವಾಗುತ್ತವೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿದೆ.
ಇದನ್ನು ಓದಿ : Belagavi : ಬೆಳಗಾವಿಯಲ್ಲಿ ಹೀನ ಕೃತ್ಯ ; ಸಾರ್ವಜನಿಕವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ.!
ಮರದ ಕೊಂಬೆಯಲ್ಲಿ ಕುಳಿತು ಬೇಟೆಯಾಡಲು ಹೊಂಚು ಹಾಕುತ್ತಿದ್ದ ಹಾವನ್ನೇ (Snake) ಮೀನೊಂದು ಬೇಟೆಯಾಡಲು (hunt) ಮುಂದಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಹಾವುಗಳು ಕಪ್ಪೆ, ಮೀನಿನಂತಹ ಹಲವು ಜೀವಿಗಳನ್ನು ಬೇಟೆಯಾಡಿ ತಿಂದು ತೇಗುತ್ತವೆ. ಆದರೆ ನೀರಿನಲ್ಲಿದ್ದ ಮೀನು ಹಾವನ್ನೇ ಬೇಟೆಯಾಡಲು ಸಿದ್ಧವಾಗಿದೆ.
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಕೆರೆಯ ಪಕ್ಕದಲ್ಲಿ ಸಣ್ಣ ಮರದ ರೆಂಬೆಯಲ್ಲಿ ಕುಳಿತು ಬೇಟೆಗೆ ಹೊಂಚು ಹಾಕುತ್ತಿದ್ದ (ambush) ಹಾವನ್ನು ಕೆರೆಯಲ್ಲಿದ್ದ ಮೀನೊಂದು (fish) ಬೇಟೆಯಾಡಲು ಜಿಗಿದಿದೆ. ಹಾವಿನ ತಲೆಯನ್ನು ಕಚ್ಚಿ ಹಿಡಿದು ಮೀನು ಕೆಲ ಹೊತ್ತು ಪ್ರಯತ್ನ ನಡೆಸಿದೆ. ಆದರೆ ಹಾವು ಮರದಲ್ಲಿ ಸುತ್ತು ಹಾಕಿಕೊಂಡಿದ್ದರಿಂದ ಮೀನು ಎಷ್ಟೇ ಪ್ರಯತ್ನ ಪಟ್ಟರೂ (No matter how hard you try) ಬೇಟೆಯಾಡಲು ಸಾಧ್ಯವಾಗಲಿಲ್ಲ.
ಇದನ್ನು ಓದಿ : Belagavi : ಘಟಪ್ರಭಾ ನದಿ ಹಿನ್ನಿರಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲು.!
ಬಳಿಕ ನೀರಿನಲ್ಲಿದ್ದ ಇನ್ನೊಂದು ಮೀನು ಜಿಗಿದು ಹಾವನ್ನು ಬೇಟೆಯಾಡುತ್ತಿದ್ದ ಮೀನಿನ ಬಾಲವನ್ನು ಕಚ್ಚಿ ಎಳೆದಿದೆ. ಹಾವು ಬದುಕಿದೆ ಬಡಜೀವ ಎಂದು ಸ್ಥಳದಿಂದ ಎಸ್ಕೇಪ್ ಆಗಿದೆ.
ವೈರಲ್ ಆದ ವಿಡಿಯೋ ಇಲ್ಲಿದೆ :
The fish mistakenly bit on a snake this time and his fish friend warned and saved him. pic.twitter.com/ydZyGplO71
— Figen (@TheFigen_) November 18, 2024
ಹಿಂದಿನ ಸುದ್ದಿ : ಮಾಜಿ RCB ಸ್ಟಾರ್ ಆಟಗಾರನ ಪತ್ನಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ; ಯಶ್ ಜೊತೆ ಆ್ಯಕ್ಟಿಂಗ್.!
ಜನಸ್ಪಂದನ ನ್ಯೂಸ್, ಸಿನಿಮಾ : ಕ್ರಿಕೆಟಿಗರನ್ನು (cricketers) ಸಿನಿಮಾ ತಾರೆಯರು ಮದುವೆಯಾಗುವ ಸಂಪ್ರದಾಯ ಹೊಸದೇನಲ್ಲ. ಇನ್ನು ಕ್ರಿಕೆಟಿಗರನ್ನು ಮದುವೆಯಾದ ನಂತರ ಸಿನಿಮಾ ನಟಿಯರು (movie actresses) ಚಿತ್ರರಂಗದಿಂದ ದೂರ ಉಳಿದ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಆದರೆ ಇದೀಗ ಖ್ಯಾತ ಕ್ರಿಕೆಟಿಗನ ಪತ್ನಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಅದರಲ್ಲೂ ತೆಲುಗು ಸಿನಿಮಾ (Telugu cinema) ಮೂಲಕ, ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮತ್ತು ಮಾಜಿ ಆರ್‌ಸಿಬಿ (RCB) ಸ್ಟಾರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ (Dhanashree) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದ ಸ್ಟಾರ್ (social media star) ಆಗಿರುವ ಅವರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಇದನ್ನು ಓದಿ : ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ PM ವಿದ್ಯಾಲಕ್ಷ್ಮೀ ಯೋಜನೆ ; 10 ಲಕ್ಷದವರೆಗೆ ಸಾಲ.!
ಧನಶ್ರೀ ಅದ್ಭುತ ಡ್ಯಾನ್ಸರ್ ಆಗಿದ್ದು, ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ (Instagram and YouTube) ನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಡ್ಯಾನ್ಸ್ ರಿಯಾಲಿಟಿ ಶೋ (dance reality shows) ಗಳಲ್ಲೂ ಚಹಾಲ್ ಪತ್ನಿ ಧನಶ್ರೀ ಭಾಗವಹಿಸಿದ್ದಾರೆ. ಈಗ ಧನಶ್ರೀ ತೆಲುಗು ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡು (Dance as its main) ತಯಾರಾಗುತ್ತಿರುವ ಆಕಾಶಂ ದಾಟಿ ವಾಸ್ತವ ನಾಯಕಿ.
ಖ್ಯಾತ ಡ್ಯಾನ್ಸ್ ಮಾಸ್ಟರ್ (famous dance master) ಯಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಶಿಕುಮಾರ್ ಮುತ್ತುಲೂರಿ (Shashikumar Muthuluri) ಚಿತ್ರಕ್ಕೆ action cut ಹೇಳುತ್ತಿದ್ದಾರೆ. ದಿಲ್ ರಾಜು ಪ್ರೊಡಕ್ಷನ್ ಹೌಸ್ ಬ್ಯಾನರ್ ( Dil Raju Production House) ಅಡಿಯಲ್ಲಿ ಹರ್ಷಿತ್ ರೆಡ್ಡಿ ಮತ್ತು ಹನ್ಸಿತಾ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಅಪ್ರಾಪ್ತ ಪತ್ನಿ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಸಹ ಅತ್ಯಾಚಾರಕ್ಕೆ ಸಮ; Highcourt.!
ಚಿತ್ರದ ಕೆಲವು ಭಾಗಗಳನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಉಳಿದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಲಿದೆ. ಚಿತ್ರದಲ್ಲಿ ಧನಶ್ರೀ ಜೊತೆಗೆ ಮತ್ತೊಬ್ಬ ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸೀರತ್ ಕಪೂರ್ (Seerat Kapoor) ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.