Friday, June 14, 2024
spot_img
spot_img
spot_img
spot_img
spot_img
spot_img

ವಾಹನ ಸವಾರರಿಗೆ Shock : ಇಂದಿನಿಂದ ದೇಶಾದ್ಯಂತ ಟೋಲ್ ದರ ಹೆಚ್ಚಳ.!

spot_img

ಜನಸಪಂದನ ನ್ಯೂಸ್‌, ಬೆಂಗಳೂರು : ಇಂದಿನಿಂದ ದೇಶ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ(Toll Fee Hike)ವನ್ನು 3% ರಿಂದ 5% ರಷ್ಟು ಹೆಚ್ಚಿಸಲಾಗುತ್ತಿದ್ದು, ವಾಹನ ಸವಾರರಿಗೆ ಕೇಂದ್ರ ಸರ್ಕಾರ ಶಾಕ್‌ ನೀಡಿದೆ.

ಲೋಕಸಭಾ ಚುನಾವಣೆ ಕಾರಣದಿಂದಾಗಿ ಏಪ್ರಿಲ್‌ನಲ್ಲಿ ವಾರ್ಷಿಕ ಹೆಚ್ಚಳವನ್ನು ತಡೆ ಹಿಡಿಯಲಾಗಿತ್ತು. ಇದೀಗ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಹೆದ್ದಾರಿ ಟೋಲ್‌ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ : Be alert : ಕಬ್ಬಿನ ರಸ ಮಾತ್ರವಲ್ಲ, ಹಣ್ಣಿನ ರಸವನ್ನು ಸಹ ಕುಡಿಯಬಾರದಂತೆ.!

ದೇಶದಲ್ಲಿ ಟೋಲ್ ಶುಲ್ಕಗಳನ್ನು ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಪರಿಷ್ಕರಿಸಲಾಗುತ್ತದೆ ಮತ್ತು ಹೆದ್ದಾರಿ ನಿರ್ವಾಹಕರು ಸೋಮವಾರದಿಂದ ಸುಮಾರು 1,100 ಟೋಲ್ ಪ್ಲಾಜಾಗಳಲ್ಲಿ 3% ರಿಂದ 5% ರಷ್ಟು ಹೆಚ್ಚಳ ಮಾಡಲಾಗುವುದೆಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಪ್ರಯಾಣಿಕರ ಮೇಲೂ ಭಾರೀ ಹೊರೆ :

ಟೋಲ್ ಶುಲ್ಕಗಳು ಮತ್ತು ಇಂಧನ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳವು ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗ ಮತ್ತು ಅಭಿವೃದ್ಧಿಗೆ ಸಹಾಯ ಮಾಡಲಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ವಿರೋಧ ಪಕ್ಷಗಳು ಹಾಗೂ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಪಶುಪಾಲನಾ ಇಲಾಖೆಯಲ್ಲಿ ಖಾಲಿ ಇರುವ 5,250 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಐಆರ್​ಬಿ ಇನ್​​​ಫ್ರಾಸ್ಟ್ರಕ್ಚರ್​​ ಡೆವಲಪರ್ಸ್​ ಮತ್ತು ಅಶೋಕ್​​ ಬಿಲ್ಡ್​ಕಾನ್​ ಲಿಮಿಟೆಡ್​ನಂತರ ಉನ್ನತ ನಿರ್ವಾಹರಿಗೆ ಟ್ರೋಲ್​ ತೆರಿಗೆ ಹೆಚ್ಚಳದಿಂದ ಪ್ರಯೋಜನ ಸಿಗಲಿದೆ.

ಈ ಹಿಂದೆ ಹಣಕಾಸು ವರ್ಷದ ಆರಂಭದಲ್ಲೇ ರಾಜ್ಯದ ವಾಹನ ಸವಾರರಿಗೆ ಮತ್ತೆ ಟೋಲ್‌ ಬರೆ ಬಿದ್ದಿತ್ತು.

spot_img
spot_img
- Advertisment -spot_img