ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ 9,000 ಹುದ್ದೆಗಳ ನೇಮಕಾತಿಯ ಜೊತೆಗೆ 2,000 ಚಾಲಕ ಕಂ ನಿರ್ವಾಹಕರು (Driver cum Operator) ಮತ್ತು 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಆದೇಶಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ಒಂದು ಗುಡ್ ನ್ಯೂಸ್ (good news) ನೀಡಿದೆ. ಸದ್ಯ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಪರಿಣಾಮ KSRTC ಬಸ್‌ಗಳು ಪ್ರಯಾಣಿಕರಿಂದ ತುಂಬಿ ಹೋಗುತ್ತಿವೆ. ಶಕ್ತಿ ಯೋಜನೆ (Shakti Yojana) ಜಾರಿಯ ಪರಿಣಾಮ ಮಹಿಳೆಯರು ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ (employment, education and travel) ಸೇರಿದಂತೆ ಮುಂತಾದ ಕಾರಣಗಳಿಗಾಗಿ ಉಚಿತ ಪ್ರಯಾಣದ ಸೌಲಭ್ಯ ಪಡೆದು ಸಂಚಾರ ನಡೆಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಹೇಳಿದ್ದಾರೆ.
ಇದನ್ನು ಓದಿ : ಸೂಟ್ಕೇಸ್ನಲ್ಲಿ Congress ಕಾರ್ಯಕರ್ತೆಯ ಶವ ಪತ್ತೆ.!
KSRTC ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದುಪ್ಪಟ್ಟು (double) ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಸ್‌ಗಳನ್ನು ಖರೀದಿಸಲಾಗಿದೆ. ಹೆಚ್ಚಿನ ಬಸ್ ಗಳ ಖರೀದಿಯ ಪರಿಣಾಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯು (job creation) ಹೆಚ್ಚಾಗಿದೆ. ಹೀಗಾಗಿ ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ 9,000 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ (Finance Department) ಅನುಮತಿ ನೀಡುವುದರ ಜೊತೆಗೆ 2,000 ಚಾಲಕ ಕಂ ನಿರ್ವಾಹಕರು ಮತ್ತು 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಆದೇಶಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಶಕ್ತಿ ಯೋಜನೆ ಜಾರಿಯಿಂದ KSRTC ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಹೊಸದಾಗಿ ಬಸ್‌ಗಳನ್ನು ಖರೀದಿಸುವುದರ ಜೊತೆ ಬಸ್ ಟ್ರಿಪ್ಗಳ (trips) ಸಂಖ್ಯೆಯನ್ನು ಸಹ ಹೆಚ್ಚಳ ಮಾಡಲಾಗಿದೆ. ಮೊದಲೆಲ್ಲಾ ಪ್ರತಿದಿನ 1,54,955 ಟ್ರಿಪ್ಗಳಷ್ಟು ಸಂಖ್ಯೆಯಲ್ಲಿ ಬಸ್ಗಳು ಸಂಚರಿಸುತ್ತಿದ್ದರೆ, ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಟ್ರಿಪ್ಗಳಷ್ಟು ಸಂಖ್ಯೆ 1,76,787 ಕ್ಕೆ ಏರಿಕೆಯಾಗಿದೆ. ಅಂದರೆ ಪ್ರತಿದಿನ 21,832 ಹೆಚ್ಚುವರಿ ಟ್ರಿಪ್‌ಗಳ ಕಾರ್ಯಾಚರಣೆಯಾಗುತ್ತಿದೆ.
ಇದನ್ನು ಓದಿ : ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿದ Officers ಮೇಲೆ ಹಲ್ಲೆ.!
ಪ್ರಯಾಣಿಕರ (passengers) ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸು ನಿಟ್ಟಿನಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಹೊಸದಾಗಿ 5,800 ಬಸ್‌ಗಳ ಸೇರ್ಪಡೆಗೆ ಅನುಮೋದನೆ ನೀಡಲಾಗಿದ್ದು, ಈವರೆಗೆ 4,891 ಹೊಸ ಬಸ್‌ಗಳನ್ನು ಖರೀದಿಸಲಾಗಿದೆ.
ಈ ಮೂಲಕ ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಖಕರ ಮತ್ತು ಆರಾಮದಾಯಕವಾಗಿಸಲು (making your journey more pleasant and comfortable) ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಹಿಂದಿನ ಸುದ್ದಿ : ಜಗತ್ತಿನ ಅತಿ ಚಿಕ್ಕ ಕಳ್ಳನ ಕಿತಾಪತಿ : ವಜ್ರವನ್ನೇ ಕದ್ದೊಯ್ದ ಇರುವೆ, Video Viral.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾಗಳಲ್ಲಿ ಸ್ಪೆಷಲ್ ವಿಡಿಯೋವೊಂದು ವೈರಲ್ ಆಗಿದ್ದು, ಜಗತ್ತಿನ ಚಿಕ್ಕ ಕಳ್ಳನ ಕಿತಾಪತಿ (The book of the world’s smallest thief) ಸಿಸಿಟಿಯಲ್ಲಿ ದಾಖಲಾಗಿದೆ. 2018ರಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ.
ಸಣ್ಣ ಇರುವೆ ಸಕ್ಕರೆಯನ್ನು ಬಾಯಿಯಲ್ಲಿ ಹಿಡಿದುಕೊಂಡು ಹೋಗುವಂತೆ (A small ant is carrying sugar in its mouth) ವಿಡಿಯೋದಲ್ಲಿ ಕಾಣಿಸುತ್ತದೆ. ಜೂಮ್ ಕ್ಯಾಮೆರಾದಲ್ಲಿ ಇದನ್ನು ಶೂಟ್ ಮಾಡಲಾಗಿದ್ದು, ಇದು ಸಕ್ಕರೆಯೇ ಅಂತ ಬಹುತೇಕ ಎಲ್ಲರೂ ಅಂದುಕೊಳ್ಳುತ್ತಾರೆ.
ಇದನ್ನು ಓದಿ : ಪ್ಯಾಂಟ್ ಜಾರಿಸಿ 360 ಡಿಗ್ರಿ ಕ್ಯಾಮೆರಾಗೆ ಪೋಸ್ ನೀಡಿದ್ದ ನಟಿ ; ವಿಡಿಯೋ ವೈರಲ್.!
ಆದರೆ ನಿಜವಾಗಿಯೂ ಇದು ಸಕ್ಕರೆಯಲ್ಲ, ವಜ್ರ (Not sugar, but diamonds) ಅಂದ್ರೆ ನೀವ ನಂಬ್ತೀರಾ.? ವಜ್ರದ ಅಂಗಡಿಗೆ ಕನ್ನ ಹಾಕಿರುವ ಈ ಇರುವೆ ಅಲ್ಲಿಂದ ವಜ್ರವನ್ನು ಕಚ್ಚಿಕೊಂಡು ಎಸ್ಕೇಪ್ ಆಗಿದೆ.
ಮೇಜಿನ ಮೇಲೆ ಇರುವ ಬ್ಲಾಟರ್‌ನಲ್ಲಿ ಬಹಳ ಚಿಕ್ಕ ವಜ್ರಗಳ ರಾಶಿಯನ್ನು (A pile of small diamonds) ವಿಡಿಯೋದಲ್ಲಿ ನೋಡಬಹುದು. ಕ್ಯಾಮೆರಾ ಜೂಮ್ ಮಾಡಿ ಬ್ಲಾಟರ್‌ನ ಒಂದು ಮೂಲೆಯಲ್ಲಿ ಇರುವೆ ಇರುವುದನ್ನು ಕಾಣಬಹುದು.
ಇದನ್ನು ಓದಿ : ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿ ಪುಂಡಾಟ ; ರೈಲ್ವೆ ಪೊಲೀಸ್ ಮಾಡಿದ್ದೇನು ; ಈ ವಿಡಿಯೋ ನೋಡಿ.!
ಇರುವೆಯು ತನ್ನ ಬಾಯಲ್ಲಿ ವಜ್ರವನ್ನು ಹಿಡಿದು ಹೋಗುತ್ತಿರುವುದನ್ನು ನೋಡಬಹುದು. ಸುಮಾರು 47 ಸೆಕೆಂಡುಗಳ ಕಾಲ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇರುವೆ ಚಲನವಲನ ದಾಖಲಾಗಿದೆ. ಕೆಲವೊಮ್ಮೆ ಇರುವೆ ಮುಂದೆ- ಹಿಂದೆ ಸಾಗುವುದನ್ನು ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇರುವೆ ಸಕ್ಕರೆ ಕಂಡುಹಿಡಿಯುವಲ್ಲಿ ಎಕ್ಸ್ಪರ್ಟ್. ಆದರೆ ಇದನ್ನು ವೀಕ್ಷಣೆ ಮಾಡಿದರೆ ಸಕ್ಕರೆ ಕಂಡಂತೆ ಕಾಣಿಸುವುದು ನಿಜ. ಆದರೆ ಇದು ವಜ್ರದ ಅಂಗಡಿ ಎನ್ನುವುದು ಸಾಬೀತಾಗಿದೆ.
ಇದನ್ನು ಓದಿ : ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇರುವೆ ವಜ್ರವನ್ನು ಹೊತ್ತೊಯ್ಯುತ್ತಿರುವ ವಿಡಿಯೋ ಇಲ್ಲಿದೆ ನೋಡಿ :
View this post on Instagram