ಜನಸ್ಪಂದನ ನ್ಯೂಸ್, ಬೆಳಗಾವಿ : ಹಲ್ಲೆಗೊಳಗಾದ KSRTC ಬಸ್ ಕಂಡಕ್ಟರ್ ಮೇಲೆ ಪೋಕ್ಸೋ (POCSO) ಕೇಸ್ ದಾಖಲಿಸಿಕೊಂಡಿದ್ದ ಮಾರಿಹಾಳ ಪೊಲೀಸ್ ಠಾಣೆಯ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ಅವರ ತಲೆದಂಡವಾಗಿದೆ.
ಸದ್ಯ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶದಂತೆ ಮಾರಿಹಾಳ ಠಾಣೆಯಿಂದ ಬೆಳಗಾವಿಯ ಸಿಸಿಆರ್ಬಿಗೆ ಗುರುರಾಜ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೆಎಸ್ಆರ್ಟಿಸಿ ಬಸ್ ನಿರ್ವಾಹಕನ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ನಾಲ್ಕು ಜನರನ್ನು ಅರೆಸ್ಟ್ (Arrest) ಮಾಡಿದ್ದರು. ಆದರೆ ಈ ಮರಾಠಿ ದುರುಳರು ಕಂಡಕ್ಟರ್ ವಿರುದ್ಧ ಪಿತೂರಿ ಮಾಡಿ ಆವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದರು.
ಇದನ್ನು ಓದಿ : ಮೀನು ಅಂತ ತಿಳಿದು ಮೊಸಳೆ ಹಿಡಿದ ವ್ಯಕ್ತಿ ; ಮುಂದೆನಾಯ್ತು.? ಈ Video ನೋಡಿ.!
ಈ ಘಟನೆಗೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ಬೀದಿಗೆ ಬಂದು ಹೋರಾಟ ನಡೆಸಿದ್ದಲ್ಲದೇ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಕಂಡಕ್ಟರ್ ಬೆನ್ನಿಗೆ ನಿಂತಿದ್ದಾರೆ.
ಕಂಡಕ್ಟರ್ ಮೇಲೆಯೇ POCSO Case :
KSRTC ಬಸ್ ಕಂಡಕ್ಟರ್ನ ಮೇಲೆ ಹಲ್ಲೆ ಪ್ರಕರಣ POCSO ಕೇಸ್ ದಾಖಲಿಸಿದ ಹಿನ್ನಲೇಯಲ್ಲಿ ತಿರುವು ಪಡೆದುಕೊಂಡಿತು. ಹಲ್ಲೆಗೊಳಗಾದ ಕಂಡಕ್ಟರ್ ವಿರುದ್ಧವೇ ಅಪ್ರಾಪ್ತ ಬಾಲಕಿಯಿಂದ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಮಾರಿಹಾಳ ಪೊಲೀಸರು ಎಫ್ಐಆರ್ (FIR) ದಾಖಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನು ಓದಿ : Belagavi : ಮತ್ತೆ ಮರಾಠಿ ಪುಂಡರ ಉದ್ಧಟತನ ; ಕರವೇ ಉಪಾಧ್ಯಕ್ಷನ ಮೇಲೆ ಹಲ್ಲೆ.!
ಏನಿದು ಪ್ರಕರಣ :
ಮರಾಠಿಯಲ್ಲಿ ಮಾತನಾಡಲು ನನಗೆ ಬರುವುದಿಲ್ಲ, ಕನ್ನಡದಲ್ಲಿ ಹೇಳಿ ಎಂದಿದ್ದಕ್ಕೆ ಜನರನ್ನು ಕರೆಸಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ಸುಳೇಬಾವಿ – ಬಾಳೇಕುಂದ್ರಿ ಗ್ರಾಮದ ಮಧ್ಯೆ ದಿ.21 ರಂದು ಗಲಾಟೆ ನಡೆದಿತ್ತು.
ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ (Marihal Police Station, Belagavi) ವ್ಯಾಪ್ತಿಯಲ್ಲಿ KSRTC ಬಸ್ ಕಂಡಕ್ಟರ್ ಮಹದೇವ ಹಲ್ಲೆಗೊಳಗಾದವರು. ಇವರಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ (He is being treated at BIMS Hospital, Belagavi).
ಇದನ್ನು ಓದಿ : ಫೋನ್ಲ್ಲಿ ಮಾತನಾಡುತ್ತಾ ಕುಳಿತಿದ್ದ ಯುವಕನ ತಲೆಗೆ ಕಚ್ಚಿದ ಹಾವು ; Shocking Video Viral.!
ಹುಡುಗಿಯೊಬ್ಬಳು ಹುಡುಗನ ಜತೆ ಕುಳಿತಿದ್ದು, ಎರಡು ಟಿಕೆಟ್ ಕೇಳಿದ್ದರು. ಫ್ರೀ ಟಿಕೆಟ್ ಮಹಿಳೆಯರಿಗೆ ಮಾತ್ರ, ಹುಡುಗನಿಗೆ ಟಿಕೆಟ್ ಕೊಡಿ ಎಂದು ಕಂಡಕ್ಟರ್ ಕೇಳಿದ್ದರು. ಆಗ ಮರಾಠಿಯಲ್ಲಿ ಏನೇನೋ ಮಾತನಾಡಿಕೊಂಡಿದ್ದರು ಎಂದು ಕಂಡಕ್ಟರ್ ಆರೋಪಿಸಿದ್ದರು.
ಆಗ ಕಂಡಕ್ಟರ್ ಮಹದೇವ್, ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಹೇಳಿ (I don’t know Marathi, tell me in Kannada). ಅವರ ಟಿಕೆಟ್ ಹಣ ನೀಡಿ, ನಿಮ್ಮಿಬ್ಬರಿಗೆ ಬೇರೆ ಬೇರೆ ಟಿಕೆಟ್ ಕೊಡುತ್ತೇನೆ ಎಂದಿದ್ದರು. ಇದಕ್ಕೆ ಕೋಪಗೊಂಡ ಯುವಕ ಜನರನ್ನು ಕರೆಯಿಸಿ, ಬಸ್ ತಡೆದು ಮಹದೇವ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : 10th, 12th, ಡಿಗ್ರಿ ಪಾಸಾದವರಿಗೆ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ನಲ್ಲಿ ಉದ್ಯೋಗ.!
ಮಹದೇವ್ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಿಸಿಪಿ ರೋಹನ್ ಜಗದೀಶ್ (DCP Rohan Jagadish) ಅವರು ಆಸ್ಪತ್ರೆಗೆ ಭೇಟಿ ನೀಡಿ ಕಂಡಕ್ಟರ್ ಮಹದೇವ್ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಆ ನಂತರ ಬಾಲಕಿಯಿಂದ ಕಂಡಕ್ಟರ್ ವಿರುದ್ಧ ಅತ್ಯಾಚಾರ ಆರೋಪಿ ಹೊರಸಿ ಪ್ರಕರಣ ದಾಖಲಿಸಲಾಗಿತ್ತು.