Monday, March 17, 2025
HomeGovernment schemeಸರ್ಕಾರದಿಂದ ಪ್ರತಿ ತಿಂಗಳು ರೂ.3,000 Pension ಹೇಗೆ ಪಡೆಯುವುದು ಗೊತ್ತೇ.?
spot_img
spot_img
spot_img
spot_img
spot_img

ಸರ್ಕಾರದಿಂದ ಪ್ರತಿ ತಿಂಗಳು ರೂ.3,000 Pension ಹೇಗೆ ಪಡೆಯುವುದು ಗೊತ್ತೇ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ (Pradhan Mantri Shram Yogi Maan-dhan (PM-SYM)) ಯೋಜನೆ ಭಾರತದ ಅಸಂಘಟಿತ ಕಾರ್ಮಿಕ (Unorganized labor) ವರ್ಗದವರಿಗಾಗಿ ವಿನ್ಯಾಸಗೊಳಿಸಲಾದ ಪ್ರಮುಖ ಪಿಂಚಣಿ ಯೋಜನೆಯಾಗಿದೆ.

ಕೇಂದ್ರ ಸರ್ಕಾರದ (Central government) ಈ ಮಹತ್ವಾಕಾಂಕ್ಷಿ ಯೋಜನೆಯು ಪ್ರತಿಯೊಬ್ಬ ಕಾರ್ಮಿಕನಿಗೂ ವೃದ್ಧಾಪ್ಯದ ಆರ್ಥಿಕ ಭದ್ರತೆ ನೀಡುವ ಗುರಿಯನ್ನು ಹೊಂದಿದೆ. ದೇಶದ ದೊಡ್ಡ ಸಂಖ್ಯೆಯ ಅಸಂಘಟಿತ ಕಾರ್ಮಿಕರು ತಮ್ಮ ವೃದ್ಧಾಪ್ಯದ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗದಂತೆ, ಸರ್ಕಾರವು ಮಾದರಿಯ ಪರಿಹಾರವಾಗಿ ಈ ಪಿಂಚಣಿ ಯೋಜನೆಯನ್ನು (Pension scheme) ಪರಿಚಯಿಸಿದೆ.

ಇದನ್ನು ಓದಿ : Belagavi : ಮತ್ತೆ ಮರಾಠಿ ಪುಂಡರ ಉದ್ಧಟತನ ; ಕರವೇ ಉಪಾಧ್ಯಕ್ಷನ ಮೇಲೆ ಹಲ್ಲೆ.!

ಆಟೋ-ಡೆಬಿಟ್ ಪಾವತಿ ವ್ಯವಸ್ಥೆ/Auto Debit Payment system :
ನೋಂದಾಯಿತ ಕಾರ್ಮಿಕರು ನಿರ್ದಿಷ್ಟ ವಯಸ್ಸಿನವರೆಗೆ ಮಾಸಿಕ ಪಾವತಿಯನ್ನು ತಮ್ಮ ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಅನುಷ್ಠಾನಗೊಳಿಸಬಹುದು.

ಕುಟುಂಬ ಭದ್ರತೆ/Family safety :
ಫಲಾನುಭವಿಯ ನಿಧನದ ಸಂದರ್ಭದಲ್ಲಿ, ಪತ್ನಿ ಅಥವಾ ಕುಟುಂಬದ ಸದಸ್ಯರು ಯೋಜನೆಯನ್ನು ಮುಂದುವರಿಸಬಹುದು ಅಥವಾ ಠೇವಣಿಯೊಂದಿಗೆ ಬಡ್ಡಿ ಮೊತ್ತವನ್ನು ಪಡೆಯಬಹುದು.

ಇದನ್ನು ಓದಿ : ಅ*ಚಾರ ದೂರು ಕೊಡಲು ಬಂದ ಅಪ್ರಾಪ್ತೆ ಮೇಲೆ ರೇ* ಮಾಡಿದ ಕಾನ್ಸ್‌ಟೇಬಲ್.!

ಅರ್ಹತೆ/Qualification) :

  • ಅರ್ಜಿದಾರರ ವಯಸ್ಸು 18 ರಿಂದ 40 ವರ್ಷಗಳ ಮಧ್ಯದಲ್ಲಿರಬೇಕು.
  • ಮಾಸಿಕ ಆದಾಯ ರೂ.15,000ಕ್ಕಿಂತ ಕಡಿಮೆ ಇರಬೇಕು.
  • EPF, NPS ಅಥವಾ ESIC ಸದಸ್ಯರಾಗಿರಬಾರದು.
  • ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು.

ನೋಂದಣಿ/Registration :

  • ಅರ್ಜಿದಾರರು ತಮ್ಮ ಸಮೀಪದ ಕಾಮನ್ ಸರ್ವೀಸ್ ಸೆಂಟರ್ (Common Service Centre) ಗೆ ಭೇಟಿ ನೀಡಬೇಕು.
  • ನೋಂದಣಿಗೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ನೀಡಬೇಕು.
  • ನೋಂದಾಯಿತ ಹಂತದಲ್ಲಿ ಆರಂಭಿಕ ಠೇವಣಿ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಬೇಕು.
  • ಭವಿಷ್ಯದಲ್ಲಿ ಪಾವತಿಗಳನ್ನು ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ (Auto debit) ಮಾಡಿಕೊಳ್ಳಬಹುದು.

ಲಾಭಗಳು/Facilities :

  • ವೃದ್ಧಾಪ್ಯದಲ್ಲಿ ಸ್ಥಿರ ಆದಾಯ.
  • ಆರ್ಥಿಕ ಸುರಕ್ಷತೆ ಮತ್ತು ಕುಟುಂಬ ಭದ್ರತೆ.
  • ಸರಳ ನೋಂದಣಿ ಪ್ರಕ್ರಿಯೆ.
  • ಗಮನಾರ್ಹ ಯೋಜನಾ ನಿರ್ವಹಣೆ LIC ಮುಖಾಂತರವಾಗುತ್ತದೆ.

ಇದನ್ನು ಓದಿ : ಫೋನ್‌ಲ್ಲಿ ಮಾತನಾಡುತ್ತಾ ಕುಳಿತಿದ್ದ ಯುವಕನ ತಲೆಗೆ ಕಚ್ಚಿದ ಹಾವು ; Shocking Video Viral.!

  1. ಯೋಜನೆಗೆ ಸೇರಲು ಅರ್ಹತೆಗಳು/Eligibility for joining the scheme :
  • 18 ರಿಂದ 40 ವರ್ಷದೊಳಗಾಗಿರಬೇಕು.
  • ಅವರ ಮಾಸಿಕ ಆದಾಯ ರೂ.15,000/ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
  • ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
  • ಸಂಘಟಿತ ವಲಯದ ಕಾರ್ಮಿಕರಾಗಿರಬಾರದು ಹಾಗೂ ಇ.ಎಸ್.ಐ/ಪಿ.ಎಫ್/ಎನ್.ಪಿ.ಎಸ್ ಯೋಜನೆಗೆ ಒಳಪಟ್ಟಿರಬಾರದು.
  1. ಯೋಜನೆ ನೋಂದಣಿ ವಿಧಾನಗಳು/Scheme Registration Procedures
  • ಅರ್ಹ ಫಲಾನುಭವಿಗಳು ಹತ್ತಿರದ “ಸಾಮಾನ್ಯ ಸೇವಾ ಕೇಂದ್ರ (C.S.C)” ಗಳಲ್ಲಿ ಯೋಜನೆಯಡಿ ನೋಂದಾಯಿಸಬಹುದಾಗಿರುತ್ತದೆ. ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ. ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ESI. ಕಾರ್ಪೋರೇಷನ್, ಹಾಗೂ ಭವಿಷ್ಯನಿಧಿ ಇಲಾಖೆ ಹಾಗೂ ಅವರ ವೆಬ್ ವಿಳಾಸಗಳು ಹಾಗೂ ವೆಬ್ ವಿಳಾಸ http://locator.csccloud.in ಗಳಲ್ಲಿ ಪಡೆಯಬಹುದಾಗಿರುತ್ತದೆ.
  • ಫಲಾನುಭವಿಗಳು ತಮ್ಮೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಐ.ಎಫ್.ಎಸ್.ಸಿ ಕೋಡ್ (Aadhar card, bank account IFSC code) ವಿವರಗಳೊಂದಿಗೆ (Bank passbook/cheque book/bank statement) ಮತ್ತು ಮೊಬೈಲ್‍ನೊಂದಿಗೆ ಕಾಮನ್ ಸರ್ವಿಸ್ ಸೆಂಟರ್‌ಗಳಿಗೆ ತೆರಳುವುದು.
  • ಅನುಬಂದಲ್ಲಿ ತಿಳಿಸಿರುವಂತೆ ವಯಸ್ಸಿಗೆ ಅನುಗುಣವಾಗಿ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಲು ತೆರಳುವುದು. ತದ ನಂತರ ಮಾಸಿಕ ವಂತಿಕೆ (Monthly contribution) ಯನ್ನು ಅವರ ಖಾತೆಯಿಂದ ಆಟೋ-ಡೆಬಿಟ್ (Auto-debit) ಮಾಡಲಾಗುವುದು.
  1. ಯೋಜನೆಯ ಸೌಲಭ್ಯಗಳು/Project Facilities :
  • ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ.
  • 60 ವರ್ಷ ಪೂರ್ಣಗೊಂಡ ನಂತರ ಚಂದಾದಾರರು (The beneficiary) ತಿಂಗಳಿಗೆ ನಿಶ್ಚಿತ ರೂ.3,000/-ಗಳ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
  • ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತ ಪಟ್ಟಲ್ಲಿ ಅವರ ಪತ್ನಿ/ಪತಿ ಪಿಂಚಣಿಯ ಶೆ.50 ರಷ್ಟು ಪಿಂಚಣೆಯನ್ನು ಪಡೆಯಲು ಅರ್ಹರು.
  • ಫಲಾನುಭವಿಯು ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು ಅವರು 60 ವರ್ಷದ ಒಳಗಾಗಿ ಮೃತ ಪಟ್ಟಲ್ಲಿ ಅವನು/ ಅವಳ ಸಂಗಾತಿಯು ತದನಂತರವೂ ಯೋಜನೆಗೆ ಸೇರಬಹುದಾಗಿದ್ದು ವಂತಿಕೆಯನ್ನು ಪಾವತಿಸಿ ಮುಂದುವರಿಸಬಹುದಾಗಿರುತ್ತದೆ.

ಹಿಂದಿನ ಸುದ್ದಿ : 10th, 12th, ಡಿಗ್ರಿ ಪಾಸಾದವರಿಗೆ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ನಲ್ಲಿ ಉದ್ಯೋಗ.!

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ (Animal Husbandry Corporation of India Limited) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಭೀಕರ ರಸ್ತೆ ಅಪಘಾತ : ಕುಂಭಮೇಳಕ್ಕೆ ತೆರಳಿದ್ದ Gokak ಮೂಲದ 6 ಜನರ ಸಾ*.!

ಹುದ್ದೆಗಳ ಮಾಹಿತಿ :

ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆ :

ಅ. ನಂ

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ

1

ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಆಫೀಸರ್ :

362

2 ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್ :

1428

3 ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್ :

362

ವೇತನ ಶ್ರೇಣಿ :

ಅ. ನಂ

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ

1

ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಆಫೀಸರ್ : Rs.38,200/-
2 ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್ :

Rs.30,500/-

3 ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್ :

Rs.20,000/-

ಇದನ್ನು ಓದಿ : Youtube ಚಾನೆಲ್ ಹೆಸರಿನಲ್ಲಿ ಒಳಗಡೆ ನಡೆಯುತ್ತಿದ್ದದ್ದೇ ಬೇರೆ ; ವಿಡಿಯೋ ನೋಡಿ.!

ವಿದ್ಯಾರ್ಹತೆ ವಿವರ :

ಅ. ನಂ

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ

1

ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಆಫೀಸರ್ :

ಪದವಿ ಪಾಸ್.

2 ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್ :

ದ್ವಿತೀಯ ಪಿಯುಸಿ ಪಾಸ್.

3

ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್ : ಎಸ್‌ಎಸ್‌ಎಲ್‌ಸಿ ಪಾಸ್.

ವಯೋಮಿತಿ :

ಅ. ನಂ

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ

1

ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಆಫೀಸರ್ : 21-45 ವರ್ಷ.
2 ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್ :

21- 40 ವರ್ಷ.

3 ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್ :

18-40 ವರ್ಷ.

ಇದನ್ನು ಓದಿ : ಮೀನು ಅಂತ ತಿಳಿದು ಮೊಸಳೆ ಹಿಡಿದ ವ್ಯಕ್ತಿ ; ಮುಂದೆನಾಯ್ತು.? ಈ Video ನೋಡಿ.!

ವರ್ಗಾವಾರು ವಯಸ್ಸಿನ ಸಡಿಲಿಕೆ :

  • ಒಬಿಸಿ ವರ್ಗದವರಿಗೆ 3 ವರ್ಷ ಮತ್ತು
  • ಎಸ್‌ಸಿ/ಎಸ್‌ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ.

ಪ್ರಮುಖ ದಿನಾಂಕಗಳು :

  • ಆನ್‌ಲೈನ್‌ ಅರ್ಜಿ ಕೊನೆ ದಿನಾಂಕ : 12 ಮಾರ್ಚ್‌ 2025.
  • ಲಿಖಿತ ಪರೀಕ್ಷೆ ಮತ್ತು ಸಂದರ್ಶನ ದಿನಾಂಕ : ಮುಂದಿನ ದಿನಗಳಲ್ಲಿ BPNL ಪ್ರಕಟಿಸಲಿದೆ.

ಶುಲ್ಕ ವಿವರ :

ಅ. ನಂ

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ

1

ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಆಫೀಸರ್ :

Rs.944/-

2

ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್ :

Rs.826/-

3 ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್ :

Rs.708/-

ಇದನ್ನು ಓದಿ : ಸೆಲ್ಪಿ ನೆಪದಲ್ಲಿ‌ ನಟಿಗೆ Kiss ಮಾಡಲು ಮುಂದಾದ ವ್ಯಕ್ತಿ ; ಶಾಕಿಂಗ್ ವಿಡಿಯೋ ವೈರಲ್.!

ಅರ್ಜಿ ಸಲ್ಲಿಸುವ ವಿಧಾನ :

  • ಬಿಪಿಎನ್‌ಎಲ್‌ ನೇಮಕಾತಿ Application Portal Direct Link ಕ್ಲಿಕ್ ಮಾಡಿ.
  • Open ಆದ Web page ನಲ್ಲಿ ಏನೆಲ್ಲಾ ಮಾಹಿತಿಗಳನ್ನು ಕೇಳಲಾಗಿದೆ ಎಂಬುದನ್ನು ಗಮನಿಸಿಕೊಳ್ಳಿ.
  • ಆಮೇಲೆ ಮಾಹಿತಿಗಳನ್ನು ಸಿದ್ಧ ಪಡಿಸಿಕೊಂಡು, ಅರ್ಜಿ ಸಲ್ಲಿಸಲು ಮುಂದಾಗಿ.
  • ಮೊದಲು ನಿಮ್ಮ ವಿದ್ಯಾರ್ಹತೆಗೆ ತಕ್ಕ ಹುದ್ದೆ (Position appropriate to qualification) ಆಯ್ಕೆ ಮಾಡಿಕೊಂಡು, ನಂತರ ಅರ್ಜಿ ಪ್ರಕ್ರಿಯೆ ಮುಂದುವರೆಸಿ.
  • ಅರ್ಜಿ ಪೂರ್ಣಗೊಳಿಸಿದ ನಂತರ, ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ (Print) ತೆಗೆದುಕೊಳ್ಳಿ.

ಆಯ್ಕೆ ವಿಧಾನ :

  • ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು
  • ಸಂದರ್ಶನಗಳನ್ನು ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.

[Note : ಅರ್ಜಿ ಭರ್ತಿಯ ಸಮಯದಲ್ಲಿ ಯಾವುದೇ ತಪ್ಪು ಮಾಹಿತಿ ನೀಡಬಾರದು.
ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳ ಪ್ರತಿ ತಯಾರಿಸಿಕೊಳ್ಳಿ.
ಅರ್ಜಿ ಸ್ವೀಕರಿಸಿದ ನಂತರ ಯಾವುದೇ ತಿದ್ದುಪಡಿ ಮಾಡುವ ಅವಕಾಶ ಇರುವುದಿಲ್ಲ].

ಪ್ರಮುಖ ಲಿಂಕ್‌ :

ಇತರೆ ಹೆಚ್ಚಿನ ಮಾಹಿತಿಗಳು ಹಾಗೂ ಅಧಿಸೂಚನೆಗಾಗಿ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ ವಿಳಾಸ https://www.bharatiyapashupalan.com/ ಕ್ಕೆ ಭೇಟಿ ನೀಡಿರಿ.

Disclaimer : The above given information is available On online, candidates should check it properly before applying. This is for information only.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!