Wednesday, May 22, 2024
spot_img
spot_img
spot_img
spot_img
spot_img
spot_img

ಪೆಟ್ರೋಲ್‌ ಬಂಕ್ ಸಿಬ್ಬಂದಿ ಮೇಲೆ MLA ಪುತ್ರನಿಂದ ಹಲ್ಲೆ ; ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಹಣ, ಅಧಿಕಾರದ ಮದದಲ್ಲಿ ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು, ಅವರ ಕುಟುಂಬಸ್ಥರು ಸಾರ್ವಜನಿಕರೊಂದಿಗೆ ದುರಹಂಕಾರದಿಂದ ವರ್ತಿಸುತ್ತಾರೆ.

ಚುನಾವಣೆ ಸಂದರ್ಭ ಹೊರತುಪಡಿಸಿ ಅವರು ಉಳಿದ ಸಮಯದಲ್ಲಿ ಅಹಂಕಾರಿಗಳಾಗೇ ಇರ್ತಾರೆ ಎಂಬುದರಲ್ಲಿ ತಪ್ಪೆನಿಲ್ಲ.

ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಆಮ್‌ ಆದ್ಮಿ ಪಕ್ಷದ (Aam Aadmy Party) ಶಾಸಕ ಅಮಾನತುಲ್ಲಾ ಖಾನ್‌ ಅವರ ಪುತ್ರನು ಪೆಟ್ರೋಲ್‌ ಪಂಪ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಆತನ ವಿರುದ್ಧ ಕೇಸ್‌ ದಾಖಲಾಗಿದೆ.

ನೊಯ್ಡಾದ ಸೆಕ್ಟರ್‌ 95 ಪ್ರದೇಶದಲ್ಲಿರುವ ಪೆಟ್ರೋಲ್‌ ಬಂಕ್‌ನಲ್ಲಿ ಅಲ್ಲಿನ ಸಿಬ್ಬಂದಿ ಮೇಲೆ ಶಾಸಕರ ಪುತ್ರ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಕಾರಿನ ಡಿಕ್ಕಿಯಿಂದ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗಿ, ಹಲ್ಲೆ ಮಾಡಿದ್ದಾನೆ.

ಸದ್ಯ ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ವೈರಲ್‌ ಆಗುತ್ತಲೇ ಜನ ಶಾಸಕನ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಅಮಾನತುಲ್ಲಾ ಖಾನ್‌ನ ಪುತ್ರನು ಕಾರಿನಲ್ಲಿ ಪೆಟ್ರೋಲ್‌ ಬಂಕ್‌ಗೆ ಬಂದಿದ್ದಾನೆ. ಆದರೆ, ಹಲವು ವಾಹನಗಳನ್ನು ಸಾಲಿನಲ್ಲಿ ನಿಲ್ಲಿಸಿದ ಕಾರಣ, ಕ್ಯೂ ಬಿಟ್ಟು ಹೋಗಿ, ಮೊದಲು ಪೆಟ್ರೋಲ್‌ ಹಾಕಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

ಆಗ ಅಲ್ಲಿದ್ದ ಸಾರ್ವಜನಿಕರು, ಪೆಟ್ರೋಲ್‌ ಬಂಕ್‌ ಸಿಬ್ಬಂದಿಯು ಆತನನ್ನು ತಡೆದಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ಎಂಎಲ್‌ಎ ಪುತ್ರನು, ಕಾರಿನ ಡಿಕ್ಕಿಯಲ್ಲಿದ್ದ ಮಾರಕಾಸ್ತ್ರವನ್ನು ತೆಗೆದುಕೊಂಡು ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.

spot_img
spot_img
spot_img
- Advertisment -spot_img