ಜನಸ್ಪಂದನ ನ್ಯೂಸ್, ಕಲಬುರಗಿ : ಮನೆ ನೀಡಲು ಮನವಿ ಮಾಡಿದ ಮಹಿಳೆಯನ್ನು ಮನೆಗೆ ಬರುವಂತೆ ಗ್ರಾಮ ಪಂಚಾಯತ್ ಸದಸ್ಯ ಓರ್ವ ಬೇಡಿಕೆ ಇಟ್ಟ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಸರ್ಕಾರದ ವತಿಯಿಂದ ನೀಡಲಾಗುವ ಮನೆ ನೀಡಿ ಎಂದು ಮಹಿಳೆಯೊಬ್ಬರು ಮನವಿ ಮಾಡಿದ್ದು, ಈ ವೇಳೆ ಗ್ರಾಮ ಪಂಚಾಯತ್ ಸದಸ್ಯ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ (He demanded money). ಇಲ್ಲದಿದ್ದರೆ ಹಣದ ಬದಲು ನೀನು ಬಾ ಇಲ್ಲ ನಿನ್ನ ಮಗಳನ್ನು ಕಳಿಸು ಎಂದು ಮಂಚಕ್ಕೆ ಕರೆದು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.
ಇದನ್ನು ಓದಿ : ಪೊಲೀಸರು ತಮ್ಮ ಖಾಸಗಿ ವಾಹನದ ಮೇಲೆ “POLICE” ಅಂತ ಹಾಕಿಸಿಕೊಳ್ಳಬಹುದೇ.? ಇಲ್ಲಿದೆ ಗೃಹ ಸಚಿವರ ಸ್ಪಷ್ಟನೆ.!
ಗ್ರಾಮ ಪಂಚಾಯತ್ ಸದಸ್ಯ (Member of Gram Panchayat) ಮನೆ ಮಾಡಿಸಿಕೊಡುತ್ತೇನೆ, ನನ್ನ ಜೊತೆ ಮಲಕೋ, ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನು ಕಳಿಸು ಎಂದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಳಸಾಪುರ ಗ್ರಾಮದ ಮಹಿಳೆ ಮನೆ ಮಾಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿ ಸದಸ್ಯನಿಗೆ ಮನವಿ ಮಾಡಿದ್ದಾಳೆ. ಆಗ ಆತ ಪಂಚಾಯತಿಯಿಂದ ಮನೆ ಮಾಡಿಸಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ದುಡ್ಡು ಕೊಡಲು ಆಗದಿದ್ದರೆ ನನ್ನ ಜೊತೆ ಮಲಗು (sleep with me) ಎಂದು ಒತ್ತಾಯ ಮಾಡಿದ್ದಾನೆ. ಅಲ್ಲದೇ ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನ ಕಳುಹಿಸು ಎಂದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಇದನ್ನು ಓದಿ : ಇನ್ಮುಂದೆ Seniors ನೋಡಿಕೊಳ್ಳದಿದ್ದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿಲ್ಲ.!
ಈ ಸಂಬಂಧ ಮಹಿಳೆ ಗ್ರಾಮ ಪಂಚಾಯತಿ ಸದಸ್ಯನ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ (Kamalapur Police Station) ದೂರು ದಾಖಲಿಸಿದ್ದಾಳೆ.
ಹಿಂದಿನ ಸುದ್ದಿ : SEC Railway Recruitment : 1003 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ನೌಕರಿ : ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆ (South East Central Railway) ಯಲ್ಲಿ ಖಾಲಿಯಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅಜಿ೯ ಆಹ್ವಾನಿಸಲಾಗಿದೆ. ಅಹ೯ ಮತ್ತು ಆಸಕ್ತಿ ಇರುವವರು ಕೊನೆಯ ದಿನಾಂಕದೊಳಗೆ ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (Official) ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : CDR ಸಂಗ್ರಹಿಸಿ ಮಾರಾಟ ಮಾಡಿದ ಆರೋಪ : ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ ಇಬ್ಬರು ಅರೆಸ್ಟ್.!
ಹುದ್ದೆಗಳ ಮಾಹಿತಿ :
- ನೇಮಕಾತಿ ಸಂಸ್ಥೆ : ಆಗ್ನೇಯ ಮಧ್ಯೆ ರೈಲ್ವೆ/South Eastern Railway.
- ಹುದ್ದೆಗಳ ಹೆಸರು : ಅಪ್ರೆಂಟಿಸ್/Apprentice.
- ಹುದ್ದೆಗಳ ಸಂಖ್ಯೆ : 1003.
ಹುದ್ದೆಗಳ ವಿವರ :
ಅ.ನಂ | ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ವೆಲ್ಡರ್ (ಗ್ಯಾಸ್ ಅಂಡ್ ಇಲೆಕ್ಟ್ರಿಕಲ್) | 185 | |
2 | ಟರ್ನರ್ | 14 |
3 | ಫಿಟ್ಟರ್ | 188 |
4 | ಸ್ಟೆನೋಗ್ರಾಫರ್ (ಹಿಂದಿ) | 08 |
5 | ಇಲೆಕ್ಟ್ರೀಷಿಯನ್ | 199 |
6 | ಸ್ಟೆನೋಗ್ರಾಫರ್ (ಇಂಗ್ಲಿಷ್) | 13 |
7 | ಪೇಂಟರ್ | 06 |
8 | ಕಾರ್ಪೆಂಟರ | 06 |
9 | ಪೈಪ್‌ಲೈನ್ ಫಿಟ್ಟರ್ | 02 |
10 | ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ | 09 |
11 | ಮೇಷನ್ | 02 |
12 | ಹ್ಯಾಮರ್‌ಮ್ಯಾನ್ | 01 |
13 | ಬ್ಲ್ಯಾಕ್‌ಸ್ಮಿತ್ | 02 |
14 | ಮೆಕ್ಯಾನಿಕ್ ರೆಫ್ರಿಜರೇಷನ್ ಅಂಡ್ ಎಸಿ | 11 |
15 | ಕೋಪಾ | 10 |
16 | ಮೆಕ್ಯಾನಿಕ್ ಡೀಸೆಲ್ | 34 |
17 | ಮಷಿನಿಸ್ಟ್ | 12 |
18 | ಆರೋಗ್ಯ ಮತ್ತು ಸ್ವಚ್ಛತಾ ನಿರೀಕ್ಷಕರು | 32 |
ಇದನ್ನು ಓದಿ : ಪೊಲೀಸ್ ಠಾಣೆಯಲ್ಲಿ ಪೊಲೀಸರ Mobile ನ್ನೇ ಎಗರಿಸಿದ ಖತರ್ನಾಕ್ ಆಸಾಮಿ.!
ವಿದ್ಯಾಹ೯ತೆ :
ಅಜಿ೯ ಸಲ್ಲಿಸುವ ಅಭ್ಯಥಿ೯ಗಳು ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ (ITI) ಶಿಕ್ಷಣ ಪಡೆದಿರಬೇಕು.
ವಯೋಮಿತಿ :
- ಅಭ್ಯರ್ಥಿಯು ಕನಿಷ್ಠ 15 ವರ್ಷ ಪೂರ್ಣಗೊಳಿಸಿರಬೇಕು ಮತ್ತು,
- ಅಭ್ಯರ್ಥಿಯು ಗರಿಷ್ಠ ವರ್ಷ 24 ವರ್ಷಗಳು.
ವಯೋಮಿತಿ ಸಡಲಿಕೆ :
- ವರ್ಗವಾರು ವಯಸ್ಸಿನ ಸಡಿಲಿಕೆ (Age relaxation) ನಿಯಮಗಳು ಅನ್ವಯವಾಗಲಿವೆ.
ಮಾಸಿಕ ಸ್ಟೈಫಂಡ್ :
- ರೂ. 9,000/- ರಿಂದ ರೂ. 15,000/- ವರೆಗೆ ವೇತನ ನೀಡಲಾಗುವುದು.
ಇದನ್ನು ಓದಿ : ಪೊಲೀಸ್ ಇಲಾಖೆಯಲ್ಲಿ 18,581 ಹುದ್ದೆಗಳು ಖಾಲಿ : ಗೃಹ ಸಚಿವ ಪರಮೇಶ್ವರ್.!
ಅರ್ಜಿ ಶುಲ್ಕ :
- ಈ ಹುದ್ದೆಗಳಿಗೆ ಆರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
* ಆಧಾರ್ ಕಾರ್ಡ್/Aadhaar card.
* ಎಸ್‌ಎಸ್ಎಲ್‌ಸಿ ಅಂಕಪಟ್ಟಿ/SSLC Marks card.
* ಐಟಿಐ ಶಿಕ್ಷಣದ ದಾಖಲೆಗಳು/ITI Education Records.
* ಜಾತಿ ಪ್ರಮಾಣಪತ್ರ/Caste Certificate.
* ಇಮೇಲ್ ವಿಳಾಸ/Email address.
* ಮೊಬೈಲ್ ನಂಬರ್/Mobile Number.
* ಇತರೆ/Others.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03 March 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02 April 2025.
- ಸೆಲೆಕ್ಷನ್ ಲಿಸ್ಟ್ ಬಿಡುಗಡೆ ದಿನಾಂಕ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ :
- Web ವಿಳಾಸ : https://www.apprenticeshipindia.gov.in/ ಕ್ಕೆ ಭೇಟಿ ನೀಡಿ.
- ‘Login/Register’ ಎಂದಿರುವಲ್ಲಿ Click ಮಾಡಿ.
- ತೆಗೆದ Web page ನಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ, ಅರ್ಜಿ Submite ಮಾಡಿ.
ಇದನ್ನು ಓದಿ : ದೈತ್ಯ ಮೊಸಳೆಗೆ ಆಹಾರ ತಿನ್ನಿಸುತ್ತಿರುವ ಭೂಪ ; ಬೆಚ್ಚಿಬೀಳಿಸುವ Video ನೋಡಿ.!
ಪ್ರಮುಖ ಲಿಂಕ್‌ಗಳು :
- ಅಧಿಕೃತ ಅಧಿಸೂಚನೆ ಓದಲು : ಇಲ್ಲಿ ಕ್ಲಿಕ್ ಮಾಡಿ
- ಆನ್‌ಲೈನ್ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್ ವಿಳಾಸ : secr.indianrailways.gov.in.
Disclaimer : The above given information is available On online, candidates should check it properly before applying. This is for information only.