ಜನಸ್ಪಂದನ ನ್ಯೂಸ್, ಧಾರವಾಡ : ಡಿಸೆಂಬರ್ 8ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (Panchayat Development Officer) ನೇಮಕಾತಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ಆರೋಪ ಕೇಳಿ ಬಂದಿದೆ.
ಅಂತೆಯೇ ಧಾರವಾಡದಲ್ಲಿ (Dharwad) ಪ್ರಶ್ನೆ ಪತ್ರಿಕೆಗಳ ಮೇಲಿನ ಸೀಲ್ ಓಪನ್ ಮಾಡಲಾಗಿದೆ (seal on the question papers has been opened) ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನು ಓದಿ : Health : ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ.?
ಡಿಸೆಂಬರ್ 8ರಂದು ಪಿಡಿಒ ನೇಮಕಾತಿಗೆ ಸಂಬಂಧಿಸಿ ನಡೆದಿತ್ತು. ಹೀಗಾಗಿ ತಪ್ಪಿತಸ್ಥರನ್ನು ಶಿಕ್ಷಿಸಿ ಮರುಪರೀಕ್ಷೆಗೆ ಆದೇಶ ನೀಡಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಸಾಮಾನ್ಯವಾಗಿ ಪಿಡಿಒ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು (PDO Recruitment Exam Question Papers) ಮೂರು ಹಂತದ ಸೀಲ್ ಭದ್ರತೆಯನ್ನು ಹೊಂದಿರುತ್ತವೆ. ಪರೀಕ್ಷಾ ಕೇಂದ್ರದ ಪ್ರಶ್ನೆ ಪತ್ರಿಕೆಗಳ ಬಂಡಲ್ಗೆ ಸಮಗ್ರವಾಗಿ (Comprehensive) ಪ್ಲಾಸ್ಟಿಕ್ ಕವರ್ನ ಸೀಲ್ ಹಾಕಿರಲಾಗುತ್ತದೆ.
ಬಳಿಕ ಆಯಾ ಪರೀಕ್ಷಾ ಕೊಠಡಿಯ ಪ್ರಶ್ನೆ ಪತ್ರಿಕೆಗಳಿಗೆ ಕಾಗದದ ಕವರ್ನ ಜೊತೆಗೆ ಸೀಲ್ ಹಾಕಿರುತ್ತಾರೆ. ಕೊನೆಗೆ ಪ್ರತಿಯೊಂದು ಪ್ರಶ್ನೆ ಪತ್ರಿಕೆಗೂ ಪ್ರತ್ಯೇಕ ಸೀಲ್ ಇರುತ್ತದೆ. ಆದರೆ, ಪ್ರಶ್ನೆ ಪತ್ರಿಕೆಯ ಮೇಲಿನ ಸೀಲ್ ಓಪನ್ ಮಾಡಿ ಮತ್ತೆ ಅಂಟಿಸಿದ್ದಾರೆಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಇದನ್ನು ಓದಿ : ಯುವಕನ ಜೀವ ಬಾಯಿಗೆ ಬಂದಂತೆ ಮಾಡಿದ ಸಿಂಹ; ವಿಡಿಯೋ Viral.!
ಕೆಪಿಎಸ್ಸಿ ಸರಿಯಾಗಿ ಪರೀಕ್ಷೆ ನಡೆಸಿಲ್ಲವೆಂದು ಅಭ್ಯರ್ಥಿಗಳು ಆರೋಪ ಮಾಡಿದ್ದು, ಮರು ಪರೀಕ್ಷೆ (Re- examination) ನಡೆಸುವಂತೆ ಆಗ್ರಹಿಸಿದ್ದಾರೆ.
ಇನ್ನೂ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳನ್ನು ಜೈಲಿಗಟ್ಟಿ, ಮರು ಪರೀಕ್ಷೆ ನಡೆಸುವಂತೆ KPSC ಗೆ ಆದೇಶಿಸಬೇಕೆಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ) ವಿದ್ಯಾರ್ಥಿ ಘಟಕದ ಕಾಂತಕುಮಾರ್ ಆರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಆಗ್ರಹಿಸಿದ್ದಾರೆ.
X ಸಂದೇಶದ ಮೂಲಕ ಪ್ರಶ್ನೆ ಪತ್ರಿಕೆ ಸೀಲ್ ಓಪನ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ.
ಹಿಂದಿನ ಸುದ್ದಿ : ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ.?
ಜನಸ್ಪಂದನ ನ್ಯೂಸ್, ಆರೋಗ್ಯ : ಬಹಳಷ್ಟು ಜನರಿಗೆ ಮೊಟ್ಟೆಯೆಂದರೆ (Egg) ಪಂಚಪ್ರಾಣ. ನಮ್ಮ ದೇಹಕ್ಕೆ ಅಗತ್ಯವಾದ ಪ್ರಮುಖ ಪೋಷಕಾಂಶಗಳನ್ನು ಮೊಟ್ಟೆ ಸೇವನೆಯಿಂದ ಪಡೆಯಬಹುದು.
ಇದನ್ನು ಓದಿ : ವಿವಾಹಿತ ಮಹಿಳೆಯರಿಂದ ಕ್ರೌರ್ಯ ಕಾನೂನು ದುರ್ಬಳಕೆ : Supreme Court
ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎನ್ನಬಹುದು. ಕೆಲವರು ಮೊಟ್ಟೆಯನ್ನು ಬೇಯಿಸಿ ತಿಂದರೆ ಇನ್ನೂ ಕೆಲವರು ಆಮ್ಲೆಟ್ ಮಾಡಿ ತಿನ್ನಲು ಇಷ್ಟಪಡುತ್ತಾರೆ.
ಆದರೆ ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ (Omelet or boiled eggs) ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂಬುದು ಗೊತ್ತಾ.?
ಇವೆರಡರಲ್ಲಿ ನಿಮ್ಮ ಮೊದಲ ಆಯ್ಕೆ ಬೇಯಿಸಿದ ಮೊಟ್ಟೆಯಾಗಿರಲಿ. ಏಕೆಂದರೆ ಬೇಯಿಸಿದ ಮೊಟ್ಟೆಯಲ್ಲಿ ಕಡಿಮೆ ಕ್ಯಾಲೋರಿಗಳನ್ನು (Low calories) ಇರುತ್ತದೆ. ಮೊಟ್ಟೆಯನ್ನು ಕುದಿಸುವುದರಿಂದ ಅದರ ಎಲ್ಲಾ ಪೋಷಕಾಂಶಗಳು ಸಂರಕ್ಷಿಸಲ್ಪಡುತ್ತವೆ (Nutrients are preserved).
ಇದನ್ನು ಓದಿ : ಇಂಡಿಯಾ ಗೇಟ್ ಬಳಿ ಕೇವಲ ಟವೆಲ್ ಕಟ್ಟಿಕೊಂಡು Dance ಮಾಡಿ ಛೀಮಾರಿ ಹಾಕಿಸಿಕೊಂಡ Model.!
ಮೊಟ್ಟೆಯು ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ, ಮೆಗ್ನೀಸಿಯಮ್, ಸತು, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಬಿ 12 ಮತ್ತು ವಿಟಮಿನ್ ಇ, ಆರೋಗ್ಯಕರ ಕೊಬ್ಬುಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳನ್ನು ಹೊಂದಿದೆ.
ಮೊಟ್ಟೆಗಳು ಸಂಪೂರ್ಣ ಪ್ರೋಟೀನ್ ಭರಿತವಾಗಿದ್ದು (Full of protein), ಎಲ್ಲ ಒಂಬತ್ತು ಅಮೈನೋ ಆಮ್ಲಗಳನ್ನು ಹೊಂದಿವೆ. ಇದು ಸ್ನಾಯುಗಳ ಆರೋಗ್ಯ, ಬೆಳವಣಿಗೆ ಮತ್ತು ದೇಹದ ತೂಕ ನಿರ್ವಹಣೆಗೆ (Growth and body weight maintenance) ಸಹಾಯಕ.
ಪೋಷಕಾಂಶಗಳ ವಿಚಾರಕ್ಕೆ ಬಂದರೆ ಬೇಯಿಸಿದ ಮೊಟ್ಟೆಗಳು ತಿನ್ನಲು ತುಂಬಾ ಯೋಗ್ಯವಾಗಿವೆ ಎನ್ನಲಾಗಿದೆ. ತರಕಾರಿಗಳೊಂದಿಗೆ ತಯಾರಿಸಿದ್ದಲ್ಲಿ ಬೇಯಿಸಿದ ಮೊಟ್ಟೆಗಳಿಗಿಂತ ಆಮ್ಲೆಟ್ ಆರೋಗ್ಯಕರ ಆಯ್ಕೆಯಾಗಿದೆ. ಆದರೆ, ಎಣ್ಣೆ ಮತ್ತು ಚೀಸ್ (oil and cheese) ಬಳಸಿ ಆಮ್ಲೆಟ್ ತಯಾರಿಸಿದರೆ ಅದು ಆರೋಗ್ಯಕ್ಕೆ ಉತ್ತಮವಲ್ಲ.
ಇದನ್ನು ಓದಿ : ಸ್ಮಾರ್ಟ್ಫೋನ್ಲ್ಲಿ ಇರುವ aeroplane ಮೋಡ್’ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?
ಆಮ್ಲೆಟ್ ವಿಚಾರಕ್ಕೆ ಬರುವುದಾದರೆ, ಇದು ರುಚಿಕರವಾಗಿರುತ್ತದೆ. ಇನ್ನೂ ಆಮ್ಲೆಟ್ಗೆ ತರಕಾರಿಗಳನ್ನು ಸೇರಿಸಿದರೆ ಮಾತ್ರ ಅದು ಆರೋಗ್ಯಕರ ಆಹಾರವಾಗಿದೆ.
ತರಕಾರಿ ಬೇಡವೆಂದು ಬೆಣ್ಣೆ ಮತ್ತು ಅಡುಗೆ ಎಣ್ಣೆಗಳಂತಹ ಪದಾರ್ಥಗಳನ್ನು ಬಳಸಿದರೆ ಆಮ್ಲೆಟ್ಗಳಲ್ಲಿ ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗುತ್ತದೆ ಎಂದು ವರದಿಗಳು ತಿಳಿಸಿವೆ.