Saturday, January 18, 2025
HomeViral Videoಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವು ; ಭಯಾನಕ ವಿಡಿಯೋ Viral.!
spot_img

ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವು ; ಭಯಾನಕ ವಿಡಿಯೋ Viral.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಚಾಲಕನ ನಿಯಂಣತ್ರಣ ತಪ್ಪಿದ ಬಸ್​ವೊಂದು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಏಳು ಜನ ಸಾವಿಗೀಡಾದ ಘಟನೆ ಮುಂಬೈನ ಕುರ್ಲಾ (Kurla, Mumbai) ಪ್ರದೇಶದಲ್ಲಿ ನಡೆದಿದ್ದು,‌ ಇದೀಗ ಬಸ್​ ಡಿಕ್ಕಿ ಹೊಡೆದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್​ ಆಗಿವೆ.

ಇದನ್ನು ಓದಿ Health : ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ.?

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಬಸ್​ನಲ್ಲಿ ಕಂಡಕ್ಟರ್​ ಬಸ್​ ಟಿಕೆಟ್​ ಕೊಡುತ್ತಿದ್ದಾರೆ. ಬಳಿಕ ಅದೇನಾಯ್ತು ಗೊತ್ತಿಲ್ಲ ಬಸ್​ ಏಕಾಏಕಿ ಅಲುಗಾಡುವಂತೆ (sudden shaking) ವಿಡಿಯೋದಲ್ಲಿ ಕಾಣುತ್ತದೆ. ಇದ್ದಕ್ಕಿದ್ದಂತೆ ಪ್ರಯಾಣಿಕರು (passengers) ಏನಾಯಿತೆಂದು ಭಯಗೊಂಡಿದ್ದಾರೆ.

ಬಸ್​ ಡಿಕ್ಕಿ ಆಗುತ್ತಿದ್ದಂತೆ ಎಚ್ಚೆತ್ತ (wake up) ಪ್ರಯಾಣಿಕರು ಬಸ್​​ನ ಕಿಟಕಿಯಿಂದ ಆಚೆ ಜಂಪ್ ಮಾಡಿ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಚಾಲಕ ಕುಡಿದ ಅಮಲಿನಲ್ಲಿ (driver was drunk) ಬಸ್ ಚಲಾಯಿಸಿದ್ದಾನೆ. ಹಾಗಾಗಿಯೇ ಈ ಅವಘಡ ಸಂಭವಿಸಿದೆ. ಅಲ್ಲದೇ ಬಸ್ ಚಾಲಕನಿಗೆ ದೊಡ್ಡ ವಾಹನ (A large vehicle) ಚಲಾಯಿಸಿದ ಅನುಭವ ಸಹ ಇರಲಿಲ್ಲ ಎಂದು ವರದಿ ತಿಳಿಸಿದೆ.

ಇದನ್ನು ಓದಿ : ಸ್ಮಾರ್ಟ್‌ಫೋನ್‌ಲ್ಲಿ ಇರುವ aeroplane ಮೋಡ್’ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

ಆತ ಬ್ರೇಕ್ ಬದಲಿಗೆ ಕ್ಲಚ್ ಆಕ್ಸಿಲರೇಟರ್ (Clutch accelerator instead of brake) ಅನ್ನು ಒತ್ತಿದ (pressed) ಕಾರಣ ಬಸ್ ನಿಲ್ಲುವ ಬದಲು ವೇಗ ಹೆಚ್ಚಾಗಿ ರಸ್ತೆಯಲ್ಲಿ ಜನಸಂದಣಿಯನ್ನು ನೋಡಿದ ಸಂಜಯ್, ಅನಿಯಂತ್ರಿತ ಬಸ್ ಅನ್ನು (Uncontrolled bus) ನಿಲ್ಲಿಸಲು‌ ಭದ್ರತಾ ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ (Hit the security wall).

ಡಿಸೆಂಬರ್ 1ರಿಂದ ಸರ್ಕಾರಿ ಬಸ್ ಚಲಾಯಿಸುತ್ತಿದ್ದು, ಚಾಲಕನ ಅನುಭವದ ಕೊರತೆಯಿಂದಾಗಿ (Lack of experience) ಈ ಅಪಘಾತ ನಡೆದಿದೆಯೇ ಅಥವಾ ಅಪಘಾತಕ್ಕೆ ಬೇರೆ ಕಾರಣವಿದೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ :

ಹಿಂದಿನ ಸುದ್ದಿ : ವಿವಾಹಿತ ಮಹಿಳೆಯರಿಂದ ಕಾನೂನು ದುರ್ಬಳಕೆ; ಸುಪ್ರೀಂ ಕೋರ್ಟ್

ಜನಸ್ಪಂದನ ನ್ಯೂಸ್, ಡೆಸ್ಕ್ : ತಮ್ಮ ಸ್ವಾರ್ಥಕ್ಕಾಗಿ (own selfishness) ಗಂಡ ಮತ್ತು ಅತ್ತೆ ಮಾವಂದಿರಿಗೆ ಕಿರುಕುಳ ನೀಡಲು ವಿವಾಹಿತ ಮಹಿಳೆಯರು (Married women) ಕ್ರೌರ್ಯ ಕಾನೂನನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಅಲ್ಲದೇ ಕ್ರೌರ್ಯ ಕಾನೂನನ್ನು ದುರ್ಬಳಕೆ (Abuse of Cruelty Law) ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ಇದನ್ನು ಓದಿ : ಮದುವೆಯಾಗಿ ಏಳು ವರ್ಷ ಕಳೆದರೂ First Night ಗೆ ಒಪ್ಪದ ಮಹಿಳೆ; ಹೈಕೋರ್ಟ್ ಹೇಳಿದ್ದೇನು.?

ಕೆಲ‌ ದಿನಗಳ ಹಿಂದೆ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ (34) ಅವರು ಹಣ ಸುಲಿಗೆ ಮಾಡಲು ಪತ್ನಿ ಮತ್ತು ಆಕೆಯ ಕುಟುಂಬ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು (false case) ದಾಖಲಿಸುತ್ತಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಟೆಕ್ಕಿಯ ಸಾವಿನ ನ್ಯಾಯಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಗಳ ಮಧ್ಯೆ ಸುಪ್ರೀಂ ಕೋರ್ಟ್ ಈ ಕಳವಳ ವ್ಯಕ್ತಪಡಿಸಿದೆ.

ಗಂಡ ಮತ್ತು ಆತನ ಸಂಬಂಧಿಕರಿಂದ ಕ್ರೌರ್ಯವನ್ನು ದಂಡಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅನ್ನು ವಿವಾಹಿತ ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ (misuse) ಎಂದು ನ್ಯಾಯಾಲಯ ಮಂಗಳವಾರ ಪ್ರಕರಣದ (ದಾರಾ ಲಕ್ಷ್ಮಿ ನಾರಾಯಣ ಮತ್ತು ಇತರರು ವಿರುದ್ಧ ತೆಲಂಗಾಣ ರಾಜ್ಯ ಮತ್ತು ಇನ್ನೊಂದು) ವಿಚಾರಣೆ ವೇಳೆ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ಇದನ್ನು ಓದಿ : ಯುವತಿಗೆ ಕೆಲಸ ಕೊಡಿಸುವ ನೆಪವೊಡ್ಡಿ ಮನೆಗೆ ಕರೆದೊಯ್ದ ಎಂಜಿನಿಯರ್ ; ಮುಂದೆನಾಯ್ತು? Video ನೋಡಿ.!

ಈ ನಿಬಂಧನೆಯು (Provision) ಮಹಿಳೆಯರನ್ನು ಕೌಟುಂಬಿಕ ಹಿಂಸಾಚಾರ ಮತ್ತು ಕಿರುಕುಳದಿಂದ ರಕ್ಷಿಸುವ ಉದ್ದೇಶವನ್ನು (Intended to protect against domestic violence and harassment) ಹೊಂದಿದ್ದು, ವೈಯಕ್ತಿಕ ದ್ವೇಷವನ್ನು ಬಿಚ್ಚಿಡಲು ಮಹಿಳೆಯರು ಈ ನಿಬಂಧನೆಯನ್ನು ಸಾಧನವಾಗಿ ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ.

ಕೆಲವು ಮಹಿಳೆಯರು ಪತಿ ಮತ್ತು ಅವರ ಕುಟುಂಬಸ್ಥರನ್ನು ತಮ್ಮ ಅಸಮಂಜಸ ಬೇಡಿಕೆಗಳನ್ನು (unreasonable demands) ಅನುಸರಿಸುವಂತೆ ಒತ್ತಾಯಿಸಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ನ್ಯಾಯಪೀಠವು ತಿಳಿಸಿದೆ.

ಇದನ್ನು ಓದಿ : ಪಂಚಮಸಾಲಿ ಹೋರಾಟಗಾಗರರ ಮೇಲೆ ಲಾಠಿ ಚಾರ್ಜ್‌ ; ತೀವ್ರ ಸ್ವರೂಪ ಪಡೆದ ಮೀಸಲಾತಿ ಹೋರಾಟ.!

ಮಹಿಳೆಯೊಬ್ಬರು ಪತಿ ಮತ್ತು ಅತ್ತೆ ಮಾವನ ವಿರುದ್ಧ ದಾಖಲಿಸಿದ್ದ ಕ್ರೌರ್ಯ ಮತ್ತು ವರದಕ್ಷಿಣೆ ಪ್ರಕರಣಗಳನ್ನು (Dowry cases) ವಜಾಗೊಳಿಸುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತೆಲಂಗಾಣ ಹೈಕೋರ್ಟ್ (Telangana High Court) ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಮತ್ತು ಅವರ ಕುಟುಂಬ ಸದಸ್ಯರು ಮೇಲ್ಮನವಿ ಸಲ್ಲಿಸಿದ್ದರು. ಪತಿ ಡಿವೋರ್ಸ್ ಕೋರಿದ ಬಳಿಕ ಮಹಿಳೆ ಕೇಸ್ ದಾಖಲಿಸಿದ್ದರು. ವಾದಗಳನ್ನು ಪರಿಶೀಲಿಸಿದ (Arguments checked) ನಂತರ, ಆಕೆ ತನ್ನ ವೈಯಕ್ತಿಕ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಪ್ರಕರಣ ದಾಖಲಿಸಿದ್ದಾಳೆ. ಮಹಿಳೆಯರನ್ನು ರಕ್ಷಿಸುವ ಉದ್ದೇಶದ ಕಾನೂನು ನಿಬಂಧನೆಗಳನ್ನು ಈಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ (Supreme Court) ತೀರ್ಮಾನಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!