ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನಲ್ಲಿ ಖಾಸಗಿ ಪಾರ್ಟಿಗಳ ಸೋಗಿನಲ್ಲಿ ಅಕ್ರಮ “ಗೆಳತಿ ವಿನಿಮಯ/girlfriend swapping” ಜಾಲವನ್ನು ನಡೆಸುತ್ತಿದ್ದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗ ಹರೀಶ್ ಹಾಗೂ ಹೇಮಂತ್ ಎಂಬ (CCB) ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ.
“Swingers” ಎಂದು ಹೆಸರಿಸಲಾದ ಒಂದು ವಾಟ್ಸಾಪ್ (WhatsApp) ಗುಂಪು ಮಾಡಿಕೊಂಡು ಅದರ ಮೂಲಕ ದಂಪತಿಗಳನ್ನು ಲೈಂಗಿಕ ಚಟುವಟಿಕೆಗಳಿಗೆ ಪಾಲುದಾರರನ್ನು ವಿನಿಮಯ (exchange partners for sexual activities) ಮಾಡಿಕೊಳ್ಳುವಂತೆ ಬಲವಂತ ಮತ್ತು ಬ್ಲ್ಯಾಕ್‌ಮೇಲ್ ಮೂಲಕ ಮಹಿಳೆಯರನ್ನು ಶೋಷಿಸುವಂತೆ ಆಮಿಷವೊಡ್ಡುತ್ತಿತ್ತು ಎಂದು ವರದಿಯಾಗಿದೆ.
Read it : ಸಿಂಹಿಣಿ, ಬಾಡಿಬಿಲ್ಡರ್ ಮಧ್ಯೆ ಹಗ್ಗಜಗ್ಗಾಟ; ಗೆದ್ದವರಾರು ಗೊತ್ತಾ? Video ನೋಡಿ.!
ಈ ಯೋಜನೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಿಸಿಬಿಗೆ ದೂರು ನೀಡಿದ ನಂತರ ಈ ಜಾಲ ಬೆಳಕಿಗೆ ಬಂದಿದೆ. ಆರೋಪಿಗಳು ಮತ್ತು ಅವರ ಪರಿಚಯಸ್ಥರೊಂದಿಗೆ ನಿಕಟ ಸಂಬಂಧದಲ್ಲಿ ತೊಡಗಿಸಿಕೊಳ್ಳುವಂತೆ (one with the girlfriend of the other and the other with the girlfriend of the Anther) ಒತ್ತಾಯಿಸಲಾಗಿದೆ ಎಂದು ಸಂತ್ರಸ್ತೆ ಬಹಿರಂಗಪಡಿಸಿದ್ದಾರೆ. ಮಹಿಳೆಯು ಇದಕ್ಕೆ ವಿರೋಧಿಸಿದಾಗ ಖಾಸಗಿ ಫೋಟೋ (private photos) ಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ ಆಘಾತಕಾರಿ ಸತ್ಯ ಬಯಲಾಗಿದೆ. ಮೊಬೈಲ್ ಫೋನ್‌ನಲ್ಲಿ ಡಜನ್‌ಗಂಟ್ಟಲೆ ಯುವತಿಯರ ನಗ್ನ ಫೋಟೋಗಳು ಪತ್ತೆಯಾಗಿವೆ (Dozens of nude photos of young women were found on the mobile phone). ಅದೇ ವಿಡಿಯೋವನ್ನು ತೋರಿಸಿ ಯುವತಿಯನ್ನು ಬ್ಲ್ಯಾಕ್‌ಮೇಲ್ (Blackmail) ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
Read it : Health : ಕುಂಬಳಕಾಯಿ ಬೀಜ ಚಿಕ್ಕದಾದರೂ ಅದರ ಪ್ರಯೋಜನಗಳು ಅಪಾರ.!
ಬೆಂಗಳೂರಿನ ಹೊರವಲಯ (outskirts of Bengaluru) ದಲ್ಲಿ ಖಾಸಗಿ ಪಾರ್ಟಿಗಳನ್ನು ಆಯೋಜಿಸಲು ಆರೋಪಿಗಳು ವಾಟ್ಸಾಪ್ ಗುಂಪುಗಳನ್ನು ಬಳಸುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳೆಂದು ಜಾಹೀರಾತು (advertised) ನೀಡಲಾದ ಈ ಕೂಟಗಳು ಅವರ ಅಕ್ರಮ ಚಟುವಟಿಕೆಗಳಿಗೆ ಒಂದು ವೇದಿಕೆಯಾಗಿತ್ತು.