Sunday, December 22, 2024
HomeBelagavi Newsಪಂಚಮಸಾಲಿ ಹೋರಾಟಗಾಗರರ ಮೇಲೆ ಲಾಠಿ ಚಾರ್ಜ್‌ ; ತೀವ್ರ ಸ್ವರೂಪ ಪಡೆದ ಮೀಸಲಾತಿ ಹೋರಾಟ.!
spot_img

ಪಂಚಮಸಾಲಿ ಹೋರಾಟಗಾಗರರ ಮೇಲೆ ಲಾಠಿ ಚಾರ್ಜ್‌ ; ತೀವ್ರ ಸ್ವರೂಪ ಪಡೆದ ಮೀಸಲಾತಿ ಹೋರಾಟ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಬೆಳಗಾವಿ : 2A ಮೀಸಲಾತಿಗಾಗಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ಇಡೀ ದಿನ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸ್ಥಳಕ್ಕೆ CM ಸಿದ್ದರಾಯಯ್ಯ ಬರದಿರುವ ಹಿನ್ನಲೆಯಲ್ಲಿ ಪಂಚಮಸಾಲಿ  ಶ್ರೀಗಳು ಸಂಘರ್ಷ ಯಾತ್ರೆ ಘೋಷಣೆ ಮಾಡಿದರು.

ಈ ಹಿನ್ನಲೆಯಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಪಂಚಮಸಾಲಿಗಳು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಹೊರಟರು.

ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ (Lathi Charge) ನಡೆಸಿದ್ದಾರೆ. ಮಾತ್ರವಲ್ಲ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಠಿ ಚಾರ್ಜ್ ಮಾಡಿದ ಪರಿಣಾಮ ಸಿಟ್ಟಿಗೆದ್ದ ಪ್ರತಿಭಟನಾಕರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಹಲವು ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದ್ದು, ಇಂದು ಹಿಂಸಾರೂಪ ಪಡೆದುಕೊಂಡಿದೆ.

ಇದನ್ನು ಓದಿ : ಭೀಕರ ರಸ್ತೆ ಅಪಘಾತ : 7 ಜನರ ಸಾವು, ಎದೆ ಝಲ್ಲೆನ್ನಿಸುವ ವಿಡಿಯೋ Viral.!

ಸುವರ್ಣಸೌಧ ಮುತ್ತಿಗೆ ಹಾಕಲು ಆಗಮಿಸುತ್ತಿದ್ದ ಪಂಚಮಸಾಲಿ ಹೋರಾಟಗಾರರನ್ನು ಪೋಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟ ನಡೆದಿದೆ.

ಇನ್ನು ಲಾಠಿ ಚಾರ್ಚ್‌ ನಡುವೆಯೇ  ಕೂಡಲಸಂಗಮದ  ಜಯಬಸವ ಮೃತ್ಯುಂಜಯ ಸ್ವಾಮಿಜೀಯರು ಸೇರಿದಂತೆ ಪಂಚಮಸಾಲಿ ಸಮಾಜದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.

ಪ್ರತಿಭಟನಾ ಸಮಯದಲ್ಲಿ ಸಚಿವರಾದ ಎಚ್‌.ಸಿ.ಮಹದೇವಪ್ಪ, ವೆಂಕಟೇಶ, ಲಕ್ಷ್ಮಿ ಹೆಬ್ಬಾಳಕರ, ಸುಧಾಕರ ಅವರ ಮನವಿಗೆ ಸ್ವಾಮೀಜಿ ಕಿವಿಗೊಡಲಿಲ್ಲ. ಮುಖ್ಯಮಂತ್ರಿ ಅವರೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.

ಇದನ್ನು ಓದಿ : ಯುವತಿಗೆ ಕೆಲಸ ಕೊಡಿಸುವ ನೆಪವೊಡ್ಡಿ ಮನೆಗೆ ಕರೆದೊಯ್ದ ಎಂಜಿನಿಯರ್ ; ಮುಂದೆನಾಯ್ತು? Video ನೋಡಿ.!

ಜನಸ್ತೋಮದಿಂದ ಭಾರೀ ಸದ್ದುಗದ್ದಲ ಚೀರಾಟ ಆರಂಭವಾಯಿತು. ಅನಿವಾರ್ಯವಾಗಿ ಸಚಿವರು ಸ್ಥಳದಿಂದ ಕಾಲ್ಕಿತ್ತರು.

ಜನಸ್ತೋಮ ರಾಷ್ಟ್ರೀಯ ಹೆದ್ದಾರಿ ತಲುಪಿ ಸಂಚಾರ ಬಂದ್ ಮಾಡಿತು. ಒಂದು ತಾಸಿನಿಂದ ಸಂಚಾರ ಸಂಪೂರ್ಣ ನಿಂತಿತು. ಮಾರ್ಗ ಮಧ್ಯೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದರು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments