ಜನಸ್ಪಂದನ ನ್ಯೂಸ್, ಡೆಸ್ಕ್ : ಕರ್ತವ್ಯ ಲೋಪ, ನಿರ್ಲಕ್ಷ್ಯ, ಇನ್ನಿತರೆ ಕಾರಣಗಳಿಂದ ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ ಆಗುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಜೀವನ ನಡೆಸಲು ಅರ್ಧ ಸಂಬಳವನ್ನು (Half salary to live on) ಕೂಡ ನೀಡಲಾಗುತ್ತದೆ.
ಇದೀಗ ಉತ್ತರ ಪ್ರದೇಶದಲ್ಲಿ ಅಮಾನತಾದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಈ ಅರ್ಧ ಸಂಬಳವನ್ನು ಬೇಡವೆಂದು ನಿರಾಕರಿಸಿ ಟೀ ಅಂಗಡಿಯೊಂದನ್ನು ಇಟ್ಟುಕೊಂಡಿದ್ದಾರೆ (He refused the salary and kept the tea shop) ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಆನೆ ಮತ್ತು JCB ನಡುವೇ ಕದನ ; ಇಲ್ಲಿ ಗೆದ್ದಿದ್ಯಾರು.? ಈ ವಿಡಿಯೋ ನೋಡಿ.!
ಅಮಾನತುಗೊಂಡ ಅಧಿಕಾರಿಯನ್ನು ಪೊಲೀಸ್ ಇನ್ಸ್‌ಪೆಕ್ಟರ್ ಮೋಹಿತ್ ಯಾದವ್ (suspended officer is Police Inspector Mohit Yadav) ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಝಾನ್ಸಿಯಲ್ಲಿ (In Jhansi, Uttar Pradesh) ಪೊಲೀಸ್ ಇನ್ಸ್‌ಪೆಕ್ಟರ್, ಸಿನಿಯರ್ಸ್ ಆಫೀಸರ್ ಮುಂದೆ ಚಹಾ ಮಾರಾಟಗಾರನಾಗಿ ನಿಂತುಕೊಂಡು ಚಹಾ ವಿತರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : ಪತಿಗೆ ‘ಹೆತ್ತವರನ್ನು ಬಿಟ್ಟು ನನ್ನ ಜೊತೆ ವಾಸಿಸು’ ಎಂದು ಹೇಳುವುದು ಕ್ರೌರ್ಯಕ್ಕೆ ಸಮ : Highcourt
ಇನ್ನೂ ಟೀ ಅಂಗಡಿಯನ್ನು ನಡೆಸುವ ಮೂಲಕ ಗಳಿಸಿದ ಹಣದಲ್ಲಿ ಮನೆಯನ್ನು ನಡೆಸುತ್ತೇನೆ ಎಂದು ತಿಳಿಸಿ ಮೇಲಾಧಿಕಾರಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಮೋಹಿತ್ ಪತ್ರವನ್ನು ಬರೆದಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಸಸ್ಪೆಂಡ್ ಆದ ಪೊಲೀಸ್ ಇನ್ಸ್‌ಪೆಕ್ಟರ್ ಮೋಹಿತ್ ಯಾದವ್ ಅವರ ಈ ನಡೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಸದ್ಯ ಇನ್ಸ್‌ಪೆಕ್ಟರ್ ಟೀ ತಯಾರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನು ಓದಿ : Vedio : ಗಂಡನಿಗೆ ಸರ್ಪ್ರೈಸ್ ಕೊಡಲು ಮನೆಯ ಬಾಗಿಲು ತೆರೆದ ಪತ್ನಿಗೆ ಕಾದಿತ್ತು ಬಿಗ್ ಶಾಕ್.!
ರಿಸರ್ವ್ ಇನ್ಸ್‌ಪೆಕ್ಟರ್ (RI) ಅವರೊಂದಿಗಿನ ವಿವಾದದ ನಂತರ ಪೊಲೀಸ್ ಇನ್ಸ್‌ಪೆಕ್ಟರ್ ಮೋಹಿತ್ ಯಾದವ್ ಅವರನ್ನು ತಾತ್ಕಾಲಿಕವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ (Temporarily fired).
ವರದಿಗಳ ಪ್ರಕಾರ, ಘಟನೆಯ ಬಳಿಕ ಇನ್ಸ್‌ಪೆಕ್ಟರ್ ಇಲಾಖೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಇನ್ಸ್‌ಪೆಕ್ಟರ್ ಯಾದವ್ ಅಮಾನತಿಗೆ ಕಾರಣವಾದ ವಿವಾದವು (controversy) ಜನವರಿ 15 ರಂದು ಪೊಲೀಸ್ ಲೈನ್ಸ್‌ನಲ್ಲಿ ಸಂಭವಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.
A suspended police inspector opened a tea stall in Uttar Pradesh's Jhansi. Watch the video for full story. #UPPolice #suspended #PoliceInspector #TeaStall #viralvideo #ViralStory #Jhansi #JhansiStory pic.twitter.com/EwAzdKY6KO
— Dynamite News (@DynamiteNews_) February 2, 2025
ಇದನ್ನು ಓದಿ : Strange Tradition : ಈ ರಾಜ್ಯದಲ್ಲಿ ಅಣ್ಣನನ್ನೇ ಮದುವೆಯಾಗ್ತಾಳೆ ತಂಗಿ ; ತಪ್ಪಿದರೆ ಕಟ್ಟಬೇಕಾಗುತ್ತದೆ ಭಾರೀ ದಂಡ.!
ಹಿಂದಿನ ಸುದ್ದಿ : ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ಬಳಿಕ ; ತೂಕ ಇಳಿಕೆಗೆ ಯಾವ ನಡಿಗೆ ಪರಿಣಾಮಕಾರಿ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಳಿಗ್ಗೆ ಅಥವಾ ಸಾಯಂಕಾಲ ಬಹಳಷ್ಟು ಜನರು ವಾಕಿಂಗ್ ಹೋಗಿ ಬರುತ್ತಾರೆ. ಇನ್ನೂ ಈ ವಾಕಿಂಗ್ ತೂಕವನ್ನು ಕ್ರಮೇಣವಾಗಿ, ಸಮರ್ಥವಾಗಿ ಕಳೆದುಕೊಳ್ಳಲು ಅತ್ಯಂತ ಪರಿಣಾಮಕಾರಿ ವಿಧಾನ.
ಇದನ್ನು ಓದಿ : ಅತ್ಯಾಚಾರಿಗಳಿಗೆ ಪುರುಷತ್ವ ಹರಣ : ಕೇಂದ್ರಕ್ಕೆ 6 ವಾರಗಳ ಗಡುವು ನೀಡಿದ ಸುಪ್ರೀಂ ಕೋರ್ಟ್.!
ಅಲ್ಲದೇ ಪ್ರತಿ ದಿನ ನಡೆಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು (Good for physical and mental health) ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.
ಆದರೆ ನಡಿಗೆಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಬೆಳಗಿನ ನಡಿಗೆಯು ಒಂದು. ತೂಕ ಇಳಿಸಿಕೊಳ್ಳಬೇಕು ಎಂದು ಬಯಸುವವರು ಕ್ಯಾಲೊರಿಗಳನ್ನು ತ್ವರಿತವಾಗಿ ಸುಡುವುದನ್ನು (Burns calories quickly) ಖಚಿತಪಡಿಸಿಕೊಳ್ಳಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳಗಿನ ನಡಿಗೆಗೆ ಆದ್ಯತೆ ನೀಡುತ್ತಾರೆ.
ಆದರೆ ಅಜೀರ್ಣ ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದ ಬಗ್ಗೆ ಆತಂಕ ಇರುವವರು ಊಟದ ನಂತರದ ನಡಿಗೆಯನ್ನು ಆರಿಸಿಕೊಳ್ಳುತ್ತಾರೆ.
ತೂಕ ಇಳಿಸಿಕೊಳ್ಳಲು, ಖಾಲಿ ಹೊಟ್ಟೆಯಲ್ಲಿ (empty stomach) ಅಥವಾ ಊಟದ ಬಳಿಕ ನಡೆಯುವುದು (after a meal). ಇವುಗಳಲ್ಲಿ ಯಾವುದು ಬೆಸ್ಟ್.?
ಖಾಲಿ ಹೊಟ್ಟೆಯಲ್ಲಿ ನಡೆಯುವುದು ಆಗುವ ಆರೋಗ್ಯ ಪ್ರಯೋಜನಗಳು :
ಖಾಲಿ ಹೊಟ್ಟೆಯ ನಡಿಗೆಯು ಹೊಟ್ಟೆಯ ಕೊಬ್ಬು ಸೇರಿದಂತೆ ದೇಹದ ಎಲ್ಲಾ ರೀತಿಯ ಕೊಬ್ಬು ನಷ್ಟಕ್ಕೆ ಪರಿಣಾಮಕಾರಿ (Effective for fat loss).
ಬೆಳಗಿನ ಉಪಾಹಾರದ ಮೊದಲು ಯಾವುದೇ ವ್ಯಾಯಾಮವನ್ನು ಮಾಡುವುದರಿಂದ ಕೊಬ್ಬಿನ ಆಕ್ಸಿಡೀಕರಣವನ್ನು (Fat oxidation) ಹೆಚ್ಚಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡುವುದರಿಂದ ಚಯಾಪಚಯವನ್ನು ಸುಧಾರಿಸಬಹುದು (Improve metabolism).
ಖಾಲಿ ಹೊಟ್ಟೆಯಲ್ಲಿ ವ್ಯಾಯಾಮವು ತೂಕ ಮತ್ತು ಕೊಬ್ಬನ್ನು ಸುಡುವ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಇದು ತೂಕ ನಷ್ಟ ಉತ್ಸಾಹಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ದೇಹವು ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ನಡೆಯುವುದರಿಂದ ದಿನವಿಡೀ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದಾಗಿದೆ.
ವಿಟಮಿನ್ ಡಿ ಕೊರತೆಯಿಂದ ಆರೋಗ್ಯ ಸಮಸ್ಯೆಗಳ ಜೊತೆಗೆ ಮೂಡ್ ಸ್ವಿಂಗ್, ನೋವುಗಳು ಉಂಟಾಗಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಡೆಯುವುದು ಸಹ ವಿಟಮಿನ್ ಡಿ ಅನ್ನು ಪಡೆಯಬಹುದು.
ಊಟದ ಬಳಿಕ ನಡೆಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು :
ಊಟದ ಬಳಿಕ ಮಲಗುವುದು ಅಥವಾ ಕುಳಿತುಕೊಳ್ಳುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಅಭ್ಯಾಸವಾಗಿದೆ. ಇದು ನಿಮ್ಮ ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಬದಲಿಗೆ ಊಟದ ನಂತರ ನಡೆಯುವುದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯಕವಾಗಿದೆ.
ಊಟದ ಬಳಿಕ ನಡೆಯುವುದು ಹೊಟ್ಟೆಯುಬ್ಬರ ಮತ್ತು ಅಸ್ವಸ್ಥತೆಯನ್ನು (Bloating and discomfort) ಅನುಭವಿಸುವ ಜನರು ಅತ್ಯುತ್ತಮವಾಗಿದೆ.
ಉಬ್ಬುವಿಕೆಯನ್ನು ಕಡಿಮೆ ಮಾಡಲು ಮತ್ತು ಅನಿಲವನ್ನು ಬಿಡುಗಡೆ ಮಾಡಲು (To release gas and reduce bloating) ಅದ್ಭುತವಾದ ಮಾರ್ಗವೆಂದರೆ ಅದು ಊಟದ ಬಳಿಕ ನಡೆಯುವುದು.
ಊಟದ ನಂತರದ ನಡಿಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.
ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವುದು.