ಜನಸ್ಪಂದನ ನ್ಯೂಸ್, ರಾಯಬಾಗ : ಜಗತ್ತಿನ ಎಲ್ಲ ದೇಶಗಳ ಸಂವಿಧಾನಗಳಿಗಿಂತ ಭಾರತ ದೇಶದ ಸಂವಿಧಾನಕ್ಕೆ ಉತ್ತಮ ಸ್ಥಾನವಿದೆ ಎಂದು ಖ್ಯಾತ ನ್ಯಾಯವಾದಿಗಳಾದ ಎಲ್.ಬಿ ಚೌಗಲೆ ಹೇಳಿದರು.
ಪಟ್ಟಣದ ಭರಮಾ ಅಣ್ಣಪ್ಪ ಚೌಗಲೆ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನು ಓದಿ : Health : ಹೂಕೋಸು ತಿನ್ನುವುದಕ್ಕಿಂತ ಮುಂಚೆ ಈ ವಿಚಾರಗಳು ಗಮನದಲ್ಲಿರಲಿ.!
ಸಂವಿಧಾನದ ಶಿಲ್ಪಿಗಳು ವಿಶ್ವದ ಎಲ್ಲ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಬಹಳ ಅಚ್ಚುಕಟ್ಟಾಗಿ ನಮ್ಮ ಸಂವಿಧಾನವನ್ನು ಬರೆದಿದ್ದಾರೆ ಆದ್ದರಿಂದ ವಿಶ್ವದ ಅತಿ ದೊಡ್ಡ ಮತ್ತು ಯಶಸ್ವಿ ಪ್ರಜಾಪ್ರಭುತ್ವ ಎಂಬ ಗೌರವ ನಮಗಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಎಸ್. ಎಸ್. ಕುರಬೇಟಿ ಮಾತನಾಡಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು ಭಾರತದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಗೂ ಮೊದಲು ಈ ದಿನವನ್ನು ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು. ದೇಶದ ಜನತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಸಲುವಾಗಿ ಈ ದಿನದ ಆಚರಣೆಯೂ ಅಸ್ತಿತ್ವಕ್ಕೆ ಬಂದಿತು ಎಂದು ಹೇಳಿದರು.
ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಹಿರಾಬಾಯಿ ಭರಮಾ ಚೌಗಲೆ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಸ್ ಎಸ್ ದಿಗ್ಗೆವಾಡಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಬಿ. ಎ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನಯ ಚೌಗಲೆ, ಉಪನ್ಯಾಸಕರಾದ ಪಿ. ಆರ್ ಸವದತ್ತಿ, ಎಸ್.ಎಮ್. ಲೈನದಾರ , ಆಯ್.ಆರ್ ಪತ್ತಾರ, ಎಮ್.ಆರ್ ಕಠಾರಿ, ಸುರೇಶ ಶಿಂಧೆ,ಕುಮಾರ ಭಜಂತ್ರಿ, ಪಿ ಡಿ ಲಂಗೋಟಿ, ಸುನೀಲ ಕಲಿಗುಡಿ, ಜಿ ಡಿ ಪೂಜಾರಿ, ಕಾವೇರಿ ಪಾಟೀಲ, ಎ.ವಿ ಪಾಟೀಲ, ಆಶಾ ಕಾಂಬಳೆ, ಪಿ.ಎಸ್ ಕಾಳೆ, ರಾಮು ಕಾಕಡೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.