Sunday, December 8, 2024
HomeSpecial Newsದುಬೈನ ದುಬಾರಿ Tea ಇದು; ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.?
spot_img

ದುಬೈನ ದುಬಾರಿ Tea ಇದು; ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಒಂದು ವಸ್ತು ಕೊಂಡುಕೊಳ್ಳಬೇಕಾದರೆ (buy) ಅದಕ್ಕೆ ಎಷ್ಟು ಕೊಡಬೇಕು ಎಂದು ನಿರ್ಧರಿಸಿ ಚೌಕಾಸಿ ಮಾಡಿ ಖರೀದಿ (purchase) ಮಾಡುತ್ತೇವೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟೀ ಬೆಲೆಯ (tea rate) ಕುರಿತಾದ ವಿಡಿಯೋವೊಂದು ವೈರಲ್​ ಆಗುತ್ತಿದೆ. ಈ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ. ದುಬೈನ (Dubai) ಕೆಫೆಯೊಂದರ (Cafe) ಟೀ ಬೆಲೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ಇದನ್ನು ಓದಿ : Health : ಹೂಕೋಸು ತಿನ್ನುವುದಕ್ಕಿಂತ ಮುಂಚೆ ಈ ವಿಚಾರಗಳು ಗಮನದಲ್ಲಿರಲಿ.!

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಬೋಹೊ ಕೆಫೆ ಮತ್ತು ರೆಸ್ಟೋರೆಂಟ್‌ (Boho Cafe and Restaurant), ಜಗತ್ತಿನ ಅತ್ಯಂತ ಐಷಾರಾಮಿ ಬೆಲೆಯ ಚಹಾವನ್ನು (World’s most expensive tea) ಕುಡಿಯಬಹುದಾದ ಏಕೈಕ ಜಾಗ ಎಂದು ವಿವರಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ಚಹಾವನ್ನು ಸರ್ವ್ ಮಾಡಲು ಬೆಳ್ಳಿಯಿಂದ ಮಾಡಿದ ಪ್ಲೇಟ್ ಮತ್ತು ಕಪ್ (plate and cup made of silver ​) ಗಳನ್ನು ಬಳಕೆ ಮಾಡಲಾಗುತ್ತದೆ. ಚಹಾವನ್ನು 24-ಕ್ಯಾರಟ್ ಚಿನ್ನದ ಹಾಳೆಯಿಂದ ಮುಚ್ಚಲಾಗುತ್ತದೆ. ಈ ಚಹಾದೊಂದಿಗೆ ಬಂಗಾರದ ಧೂಳಿನ ಕ್ರೋಸೆಂಟ್ (Gold Dust Croissant) ಅನ್ನು ಸಹ ನೀವು ಸೇವಿಸಬಹುದು. ಈ ಕೆಫೆಯಲ್ಲಿ ಚಿನ್ನದ ಚಹಾದ ಬೆಲೆ 1 ಲಕ್ಷ ರೂಪಾಯಿ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.

ಇದನ್ನು ಓದಿ : ಎಷ್ಟೇ ವಯಸ್ಸಾದರೂ young ಆಗಿ ಕಾಣಬೇಕಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ.!

ಇನ್ನೂ ಒಂದು ವೇಳೆ ನಿಮಗೆ ಚಹಾ ಇಷ್ಟ ಆಗದೇ ಹೋದರೆ ನೀವು ಅದೇ ದರದಲ್ಲಿ ಇತರ ಕಾಫಿಗಳನ್ನು ಆರ್ಡರ್ ಮಾಡಬಹುದು. ಈ ಕೆಫೆಯಲ್ಲಿ ಚಹಾ ಕುಡಿಯುವ ಇನ್ನೊಂದು ಸ್ಪೆಶಾಲಿಟಿ ಎಂದರೆ ಚಹಾದೊಂದಿಗೆ ಬರುವ ಬೆಳ್ಳಿಯ ಕಪ್ ಅನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದಂತೆ.

ವೈರಲ್ ವಿಡಿಯೋ ಇಲ್ಲಿದೆ :

 

View this post on Instagram

 

A post shared by Gulf Buzz (@gulfbuzz)

ಹಿಂದಿನ ಸುದ್ದಿ : Special news : ಈ ಗುಣಗಳಿರುವ ಸ್ತ್ರೀಯರಿಗೆ ಪುರುಷರ ಅಗತ್ಯವೇ ಇರುವುದಿಲ್ಲವಂತೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಹಿಂದಿನ ಕಾಲದಿಂದಲೂ ಸ್ತ್ರೀಯು ತಾನು ಚಿಕ್ಕವಳಾಗಿದ್ದಾಗ ತಂದೆಯ ಕಾಳಜಿಯಲ್ಲಿ (care), ಯೌವನದಲ್ಲಿ ಪತಿಯ ನೆರಳಿನಲ್ಲಿ, ಮುಪ್ಪಿನಲ್ಲಿ ಗಂಡು ಮಕ್ಕಳ ಆಶ್ರಯದಲ್ಲಿ ಇರಬೇಕು ಎಂದು ಹೇಳುವುದನ್ನು ಕೇಳಿರುತ್ತೇವೆ.

ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!

ಆದರೆ ಇಂದು ಮಹಿಳೆ (woman) ಯಾರ ಹಂಗಿನಲ್ಲಿಯೂ ಜೀವನ ನಡೆಸಲು ಇಷ್ಟಪಡದೇ, ತನ್ನ ಸ್ವಂತ ದುಡಿಮೆಯಲ್ಲಿ (own labor) ಜೀವನ ನಡೆಸುವ ಮಟ್ಟಕ್ಕೆ ತಲುಪಿದ್ದಾಳೆ.

* ಪುರುಷ ಅಗತ್ಯವಿಲ್ಲದ ಮಹಿಳೆಯರು ಸಕಾರಾತ್ಮಕ ದೃಷ್ಟಿಕೋನ ಹೊಂದಿರುತ್ತಾರೆ. ಇವರ ಬದುಕಿನಲ್ಲಿ ಏರಿಳಿತಗಳಾದರೂ ಅದನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತಾರೆ. ಇವರು ಸಮಸ್ಯೆಗಳನ್ನು ನಿರ್ಲಕ್ಷಿಸುವುದಿಲ್ಲ, ಬದಲಾಗಿ ಆ ಸಮಸ್ಯೆಗಳನ್ನು ಒಪ್ಪಿಕೊಂಡು ವ್ಯವಹರಿಸುವ ಗುಣ ಇವರಲ್ಲಿರುತ್ತದೆ.

ಇದನ್ನು ಓದಿ : Health : ಕಾಲು ಸೆಳೆತದಿಂದ ಬಳಲುತ್ತಿದ್ದೀರಾ.? ಈ ರೀತಿ ಮಾಡಿ ನಿಮಿಷಗಳಲ್ಲಿ ಮಾಯವಾಗುತ್ತೆ ನೋವು.!

* ಒಂಟಿಯಾಗಿರಲಿ (alone) ಅಥವಾ ಕುಟುಂಬದ ಸದಸ್ಯರ ಜೊತೆಗಿರಲಿ ಇವರು ಸದಾ ಸಂತೋಷವಾಗಿರುತ್ತಾರೆ. ಇಂತಹ ಮಹಿಳೆಗೆ ಗಂಡಿನ ಅಗತ್ಯವೇ ಇರುವುದಿಲ್ಲ. ಎಲ್ಲರಲ್ಲಿಯೂ ಸಂತೋಷವನ್ನು ಕಾಣುವ ಮೂಲಕ ಕುಟುಂಬ, ಮನೆ ಮಕ್ಕಳನ್ನು ನಿಭಾಯಿಸುತ್ತಾಳೆ ಈ ಮಹಿಳೆ. ಯಾರಾದರೂ ಸಹಾಯ ಮಾಡಿದರೆ ಈ ಮಹಿಳೆಯರಲ್ಲಿ ಕೃತಜ್ಞತೆ ಭಾವನೆ (Feeling grateful) ಇರುತ್ತದೆ.

* ಕೆಲ ಮಹಿಳೆಯರು ಧೈರ್ಯವಂತ ವ್ಯಕ್ತಿತ್ವ (courageous personality) ಇರುವವರು. ಜೀವನದಲ್ಲಿ ಏನೇ ಬಂದರೂ ಭಯಪಡದೇ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಹೀಗಾಗಿ ಈ ಗುಣವಿರುವ ಮಹಿಳೆಯರು ಪುರುಷರಿಲ್ಲದೇ ತಮ್ಮ ಜೀವನವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ.

ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!

* ಕೆಲ ಜನರಲ್ಲಿ ಮಾತ್ರ ಜೀವನದಲ್ಲಿ ಸಮತೋಲನವನ್ನು (balance) ಕಾಯ್ದುಕೊಳ್ಳುವ ವ್ಯಕ್ತಿತ್ವ ಇರುತ್ತದೆ. ಈ ಮಹಿಳೆಯರು ಜೀವನದಲ್ಲಿ ಪ್ರತಿಯೊಂದು ಅಂಶದಲ್ಲಿಯೂ ಸಮತೋಲನವನ್ನು ಕಾಯ್ದುಕೊಂಡು ಹೋಗುತ್ತಾರೆ. ತಮ್ಮ ಸ್ವಂತ ನಿರ್ಧಾರದಲ್ಲಿ (own decision) ನಿಖರತೆ ಹಾಗೂ ದೃಢತೆ ಇರುವ ಈ ಹೆಂಗಸರು ಪುರುಷರ ಮೇಲೆ ಅವಲಂಬಿತರಾಗುವುದು ಕಡಿಮೆ‌.

* ಕೆಲ ಮಹಿಳೆಯರೂ ಯಾರ ಮೇಲು‌ ಅವಲಂಬಿತರಾಗಿರುವುದಿಲ್ಲ ಸ್ವಾವಲಂಬಿಗಳಾಗಿರುತ್ತಾರೆ (Self- sufficient). ಇವರು ಜೀವನದ ಪ್ರತಿ ಕ್ಷಣವನ್ನು ಆಸ್ವಾದಿಸುತ್ತಾರೆ. ಹೀಗಾಗಿ ಈ ಗುಣವಿರುವ ಹೆಣ್ಣು ಮಕ್ಕಳಿಗೆ ಗಂಡಸರ ಅವಶ್ಯಕತೆಯೇ ಇರಲ್ಲ. ಸ್ವತಂತ್ರ ನಿರ್ಧಾರದೊಂದಿಗೆ (independent decision) ತಮ್ಮ ಇಷ್ಟದಂತೆ ಜೀವನ ನಡೆಸುತ್ತಾರೆ. ಸದಾ ಆರಾಮದಾಯಕವಾಗಿದ್ದು ಕೊಂಡೆ ತಾವು ಅಂದುಕೊಂಡಂತೆ ಬದುಕು ಸಾಗಿಸುತ್ತಾರೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments