ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಹೀನ ಕೃತ್ಯವೊಂದು ನಡೆದಿದ್ದು, ಬೆಳಗಾವಿಯ ವಡ್ಡರವಾಡಿಯಲ್ಲಿ (Waddarwadi) ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಲ್ಲೆ ಮಾಡಿದ ಘಟನೆ ನಡೆದಿದೆ.
ವಡ್ಡರವಾಡಿಯ ಮನೆಯೊಂದರಲ್ಲಿ ಮಹಿಳೆ ಸೇರಿದಂತೆ 5 ಜನ ವಾಸವಾಗಿದ್ದಾರೆ. ಇವರ ಮನೆಯ ವಾಸವಿರುವ ಮತ್ತೊಂದು ಕುಟುಂಬದವರು, ಮಹಿಳೆಯ ವಿರುದ್ಧ ವೇಶ್ಯಾವಾಟಿಕೆಯ (Prostitution) ಆರೋಪ ಹೊರಿಸಿ, ಮನೆಗೆ ನುಗ್ಗಿ ಮಹಿಳೆ ಹಾಗೂ ಆಕೆಯ ಪುತ್ರಿಯಾದ ಹೊರಗೆ ಎಳೆದು ತಂದು ಹಲ್ಲೆ (attack) ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಈ ಘಟನೆಯ ವಿಡಿಯೋ ಮೊಬೈಲಿನಲ್ಲಿ ಸೆರೆಯಾಗಿದೆ.
ಇದನ್ನು ಓದಿ : Health : ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತಿದೆಯೇ? ನಿಮಗೆ ಈ ಆರೋಗ್ಯ ಸಮಸ್ಯೆ ಇರಬಹುದು.!
ಸದ್ಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ (Malamaruti Police Station) ಪ್ರಕರಣ ದಾಖಲಾಗಿದೆ.
ಮಹಿಳೆಯ ಮನೆಗೆ ಸಂಬಂಧ ಇಲ್ಲದ ವ್ಯಕ್ತಿಗಳು ಬಂದು ಹೋಗುತ್ತಾರೆ. ಹೀಗಾಗಿ ಮಹಿಳೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ನೆರೆ ಮನೆಯವರು (neighbors) ಮಹಿಳೆಯೊಂದಿಗೆ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಎಲ್ಲರೆದುರೇ ಮಹಿಳೆಯ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕಮಿಷನರ್ ಸೂಚನೆ ಮೇರೆಗೆ (per instructions of Commissioner) ಮಾಳಮಾರುತಿ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Astrology : ನವೆಂಬರ್ 16ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಹಿಂದಿನ ಸುದ್ದಿ ಓದಿ : ನಗ್ನ ಪೋಟೋ ಕಳುಹಿಸುವಂತೆ ವೈದ್ಯೆಗೆ ಕಿರುಕುಳ ನೀಡಿದ PSI.!
ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಬಸವನಗುಡಿ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಖಾಸಗಿ ಆಸ್ಪತ್ರೆ ವೈದ್ಯೆಯೊಬ್ಬರು (private hospital doctor) ದೂರು ನೀಡಿದ್ದಾರೆ.
ವೈದ್ಯೆಗೆ ನಗ್ನ ಫೋಟೋ ಕಳಿಸುವಂತೆ ಪಿಎಸ್‌ಐ ಕಿರುಕುಳ (harassment) ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರಿಗೆ ವೈದ್ಯೆ ದೂರು ನೀಡಿದ್ದಾರೆ.
ಬಸವನಗುಡಿ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜಕುಮಾರ್ ಜೋಡಟ್ಟಿ ವಿರುದ್ಧ ಇಂತದ್ದೊಂದು ಆರೋಪ ಕೇಳಿಬಂದಿದೆ.
ಫೇಸ್‌ಬುಕ್ ಮೂಲಕ 2020ರಲ್ಲಿ ಪಿಎಸ್ಐಗೆ ವೈದ್ಯೆಯ ಪರಿಚಯವಾಗಿದೆ. ಈ ವೇಳೆ ಪೊಲೀಸ್ ಅಕಾಡೆಮಿಯಲ್ಲಿ PSI ಟ್ರೈನಿಂಗ್ನಲ್ಲಿದ್ದರು. ಯುವತಿ ಸಹ MBBS ವ್ಯಾಸಂಗ ಮಾಡುತ್ತಿದ್ದಳು. ಅದೇ ವರ್ಷ ಇಬ್ಬರೂ ಪರಸ್ಪರ ಸ್ನೇಹ ಬೆಳೆದು ಪ್ರೀತಿಯಲ್ಲಿ (love) ಬಿದ್ದಿದ್ದರು ಎನ್ನಲಾಗಿದೆ.
ಪಿಎಸ್‌ಐ ಯುವತಿಗೆ ನಗ್ನ ಫೋಟೋ (Nude photo) ಕಳಿಸುವಂತೆ ಕಿರುಕುಳ ನೀಡಿದ್ದು, ಈ ಮಾತಿಗೆ ಒಪ್ಪದಿದ್ದಕ್ಕೆ ವೈದ್ಯೆಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ವೈದ್ಯೆಯ call record ತೆಗೆದು ಕಿರುಕುಳ ನೀಡುತ್ತಿರುವ ಆರೋಪಿಸಲಾಗಿದೆ. ಇದರಿಂದ ನೊಂದ ವೈದ್ಯೆ ಬೆಂಗಳೂರು ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ ವೈದ್ಯೆಯಿಂದ ಸಬ್ ಇನ್ಸ್‌ಪೆಕ್ಟರ್ ರಾಜಕುಮಾರ್ ಹಂತ ಹಂತವಾಗಿ 1.71 ಲಕ್ಷ ರೂ. ಹಣ ಪಡೆದಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಹಣ ಬೇಕಾದರೆ ಠಾಣೆಗೆ ಬಂದು ತೊಗೊಂಡು ಹೋಗು ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ತೀವ್ರ ಮನನೊಂದ ವೈದ್ಯೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು (suicide attempt) ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ ಈ ಕೇಸಿನಲ್ಲಿ ವೈದ್ಯೆಯ ಹೆಸರಿನಲ್ಲಿ ಫೇಸ್‌ಬುಕ್ fake account ಕ್ರಿಯೇಟ್ ಮಾಡಲಾಗಿದೆ ಎನ್ನಲಾಗಿದೆ. ಅಸಲಿಗೆ ಸ್ವಾತಿ ದ್ಯಾಮಕ್ಕನವರ್ ಅನ್ನುವ ಡಾಕ್ಟರ್ ಅಕೌಂಟ್ ಫೇಕ್ ಆಗಿದೆ. ಈ ಫೇಕ್ ಅಕೌಂಟ್ ನ್ನು ಸ್ವಾತಿಯ ಸಹೋದರ ಎಂದು ಹೇಳಿಕೊಂಡು ಬಂದಿರುವ ಇದೇ ಸಿದ್ದಪ್ಪ ದ್ಯಾಮಕ್ಕನವರ್ ಕ್ರಿಯೆಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಆಸಾಮಿ ವೈದ್ಯೆ ಸ್ವಾತಿ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಹಣ ಹೊಡೆಯಲು ಉಪಾಯ ಮಾಡಿದ್ದ. ಫೇಸ್‌ಬುಕ್ ಮೂಲಕ PSI ಪರಿಚಯ ಮಾಡಿಕೊಂಡು ಹಂತ ಹಂತವಾಗಿ ಹಣ ವಸೂಲಿ ಮಾಡಿದ್ದನು. ಸ್ವಾತಿ ಹೆಸರಿನಲ್ಲಿ ಇಲ್ಲಿಯವರೆಗೆ ಪಿಎಸ್‌ಐ 50 ಸಾವಿರ ರೂ. ಹಣ ಪಡೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಹಣವನ್ನು ಮರಳಿ ಕೊಡದಿದ್ದಾಗ ಸಬ್ ಇನ್ಸಪೆಕ್ಟರ್ ಕೋಪಗೊಂಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು fake Facebook account ಎಂಬುದು ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತ ನಗರ ಠಾಣೆ ಇನ್ಸಪೆಕ್ಟರ್ ತನಿಖೆ ಮಾಡುತ್ತಿದ್ದಾರೆ. ಈವರೆಗೂ ಆ ಯುವತಿ (ವೈದ್ಯೆ) ವಿಚಾರಣೆಗೆ ಹಾಜರಾಗಿಲ್ಲ. ಹುಡುಗಿ ರೀತಿ ಚಾಟ್ ಮಾಡಿ ಹುಡುಗಿ ಧ್ವನಿಯಲ್ಲಿ ಮಾತನಾಡಿ ಟ್ರ್ಯಾಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಸಬ್ ಇನ್ಸ್‌ಪೆಕ್ಟರ್ ಮತ್ತು ಯುವತಿ ನಡುವೆ ಹಣದ ವ್ಯವಹಾರ ನಡೆದಿದೆ. ಸಹೋದರ ಅಂತ ಬಂದಿರುವ ವ್ಯಕ್ತಿಯ ಬಗ್ಗೆ ಅನುಮಾನವಿದೆ. ಅಧಿಕಾರಿಯನ್ನೇ trap ಮಾಡಲು ಯತ್ನಿಸಿದಂತಿದೆ. ತನಿಖೆ ನಂತರ ಅಸಲಿ ಕಹಾನಿ ಗೊತ್ತಾಗಲಿದೆ ಎಂದು ಬೆರಳು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.