Sunday, December 22, 2024
HomeLocal NewsHealth : ಕಡಲೆಕಾಯಿಯನ್ನು ಚಳಿಗಾಲದಲ್ಲಿ ಏಕೆ ತಿನ್ನಬೇಕು.?
spot_img

Health : ಕಡಲೆಕಾಯಿಯನ್ನು ಚಳಿಗಾಲದಲ್ಲಿ ಏಕೆ ತಿನ್ನಬೇಕು.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಆರೋಗ್ಯ : ಬಡವರ ಬಾದಾಮಿ (A poor man’s almond) ಅಂದ್ರೆ ಅದು ಕಡಲೆಕಾಯಿ (peanut) (ಶೇಂಗಾ). ಇದರಲ್ಲಿ ರಂಜಕ, ಮೆಗ್ನೀಸಿಯಮ್, ಬಯೋಟಿನ್, ನಿಯಾಸಿನ್, ಫೋಲೇಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಥಯಾಮಿನ್ ಇದ್ದು ಉತ್ತಮ ಆರೋಗ್ಯ ಪಡೆಯಲು ಕಡಲೆಕಾಯಿ ಸೇವನೆ ಒಳ್ಳೆಯದು.

ಇನ್ನೂ ಶೇಂಗಾವನ್ನು ಚಳಿಗಾಲದಲ್ಲಿ ಸೇವಿಸಬೇಕು (Should be consumed in winter) ಏಕೆಂದರೆ ನೀವು ಈ ಸೀಜನಲ್ಲಿ ಕಡಲೆಕಾಯಿ ತಿಂದರೆ ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಇದರಿಂದ ಅಸಂಖ್ಯಾತ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನು ಓದಿ : Railway ಇಲಾಖೆಯಲ್ಲಿ ಖಾಲಿ ಇರುವ 1,785 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!

ಹಾಗಾದರೆ ಈ ಶೇಂಗಾವನ್ನು ಚಳಿಗಾಲದಲ್ಲಿ ಏಕೆ ತಿನ್ನಬೇಕು (Why should peanuts be eaten in winter?) ಯಾವ ರೀತಿ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಅಂತ ನಿಮಗೇನಾದರೂ ಗೊತ್ತಾ.?

* ಇದು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬನ್ನು (Monounsaturated fat) ಹೊಂದಿದೆ.

* ಕಡಲೆಕಾಯಿಯಿಂದ ತಯಾರಿಸಿದ ಆಹಾರಗಳನ್ನು ಮಕ್ಕಳಿಗೆ ಪ್ರತಿದಿನ ಕೊಡುವುದರಿಂದ ಮಕ್ಕಳ ಸ್ನಾಯುಗಳು ಸ್ಟ್ರಾಂಗ್ ಆಗುತ್ತವೆ. ಆರೋಗ್ಯ ತಜ್ಞರು ಸಹ ದೇಹದ ಬೆಳವಣಿಗೆಗೂ ಸಹಕಾರಿ (Helps in body growth) ಎಂದು ತಿಳಿಸಿದ್ದಾರೆ.

* ಕಡಲೆಕಾಯಿಯು ಹೆಚ್ಚಿನ ಮಟ್ಟದ ಆ್ಯಂಟಿ- ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಇವು ತ್ವಚೆಯಲ್ಲಿ ಫ್ರೀ ರ್ಯಾಡಿಕಲ್‌ಗಳಿಂದ ಉಂಟಾಗುವ ಹೆಚ್ಚಿನ ಹಾನಿಯನ್ನು ಕಡಿಮೆ ಮಾಡುತ್ತವೆ (Most damage reduction).

* ಕಡಲೆಕಾಯಿಯಲ್ಲಿರುವ ಪಿ- ಆಮ್ಲವು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು (Ability to reduce the risk of cancer) ಹೊಂದಿದೆ.

* ಕಡಲೆಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವ (Anti- bacterial properties) ಮಲ್ಟಿವಿಟಮಿನ್‌ಗಳು ಚರ್ಮದ ಆರೈಕೆಗೆ ಸಹಾಯ ಮಾಡುತ್ತವೆ.

* ಕಡಲೆಕಾಯಿಯಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ (Iron and Calcium) ಹೇರಳವಾಗಿದ್ದು, ರಕ್ತಕ್ಕೆ ಆಮ್ಲಜನಕವನ್ನು ಒದಗಿಸುವಲ್ಲಿ ಮತ್ತು ಮೂಳೆಗಳನ್ನು ಬಲಪಡಿಸುವಲ್ಲಿ (strengthening the bones) ಇವು ಸಹಾಯಕ.

* ವಿಟಮಿನ್ ಬಿ ಯ ಉತ್ತಮ ಮೂಲವೆಂದರೆ ಅದು ಕಡಲೆಕಾಯಿ.

ಇದನ್ನು ಓದಿ : Video : ಕಣ್ಣಿಗೆ ಕನ್ನಡಕ, ತಲೆಗೆ ಟವಲ್, ದೇಹಕ್ಕೆ ಬಾತ್ ಟವೆಲ್ ಧರಿಸಿ ಮೆಟ್ರೋಗೆ ಕಾಲಿಟ್ಟ ಯುವತಿಯರು.!

* ಎಸ್ಜಿಮಾ ಮತ್ತು ಸೋರಿಯಾಸಿಸ್ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಈ ಕಡಲೆಕಾಯಿ.

* ಶಕ್ತಿಯ ಉತ್ತಮ ಮೂಲವೆಂದರೆ (good source of energy) ಅದು ಕಡಲೆಕಾಯಿ. ನಿಮ್ಮ ದೇಹಕ್ಕೆ ಸಾಕಷ್ಟು ಖನಿಜಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ.

* ಪ್ರತಿದಿನ ಕಡಲೆಕಾಯಿಯನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು (May reduce the risk of cardiovascular diseases).

 

ಹಿಂದಿನ ಸುದ್ದಿ : ಕುಡುಗೋಲಿನಿಂದ ಮಹಿಳಾ ಕಾನ್ಸ್‌ಟೇಬಲ್ ಬರ್ಬರ ಹತ್ಯೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳಾ ಕಾನ್ಸ್‌ಟೇಬಲ್ ನನ್ನು (lady constable) ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಆಕೆಯ ಸ್ವಂತ ಅಣ್ಣನೇ ಕೊಲೆ ಮಾಡಿದ ಆಘಾತಕಾರಿ ಘಟನೆ (shocking incident) ಹೈದರಾಬಾದ್​ ಸಮೀಪದ ಇಬ್ರಾಹಿಂ ಪಟ್ಟಣದಲ್ಲಿ (Ibrahim pattan near Hyderabad) ನಡೆದಿದೆ ಎಂದು ವರದಿಯಾಗಿದೆ.

ಕೊಲೆಯಾದ ಮಹಿಳಾ ಕಾನ್ಸ್‌ಟೇಬಲ್ ಹಯತ್​ನಗರದ ಪೊಲೀಸ್​ ಠಾಣೆಯ ನಾಗರತ್ನ ಎಂದು ವರದಿ ತಿಳಿಸಿದೆ. ಇದು ಮರ್ಯಾದೆಗೇಡು ಹತ್ಯೆ (Dishonorable killing) ಎಂಬ ಅನುಮಾನ ಮೂಡಿದೆ.

ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?

ಈ ಕೊಲೆ ರಂಗಾರೆಡ್ಡಿ ಜಿಲ್ಲೆಯ (Rangareddy District) ಇಬ್ರಾಹಿಂ ಪಟ್ಟಣದ ರಾಯ್​ಪೋಲ್​ – ಮನ್ಯಗಢ ರಸ್ತೆಯಲ್ಲಿ (On Raipol – Manyagadh Road) ನಡೆದಿದೆ.

ಸೋಮವಾರ (ಡಿ. 02) ಎಂದಿನಂತೆ ಕರ್ತವ್ಯ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಸಹೋದರ ಪ್ರಮೇಶ್​ ಕಾರನ್ನು ಅಡ್ಡಗಟ್ಟಿ (Block the car) ಮಹಿಳಾ ಕಾನ್ಸ್‌ಟೇಬಲ್ ನಾಗಮಣಿಯನ್ನು ಕುಡುಗೋಲಿನಿಂದ ಹತ್ಯೆ ಮಾಡಿದ್ದಾನೆ (Killed with a scythe) ಎಂದು ವರದಿ ತಿಳಿಸಿದೆ.

ಕೊಲೆಯಾದ ಮಹಿಳಾ ಪೇದೆಯ ಶವವನ್ನು ಕಂಡು ಪಾದಚಾರಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್​ನ ಸರ್ಕಾರಿ ಜನರಲ್​ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ (The body has been sent to the Government General Hospital, Hyderabad for post-mortem examination) ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Special news : ಮುಖಕ್ಕೆ ಬ್ಲಾಂಕೆಟ್ ಹೊದ್ದಿಕೊಂಡು ಮಲಗುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

ಇನ್ನು ನಾಗಮಣಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ (Intercaste marriage) ಆಕೆಯ ಕೊಲೆಯಾಗಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ (primary information) ತಿಳಿದು ಬಂದಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಾಗಮಣಿ ಈಗಾಗಲೇ ಮದುವೆಯಾಗಿದ್ದು, 10 ತಿಂಗಳ ಹಿಂದೆಯೇ ಡಿವೋರ್ಸ್ ಪಡೆದಿದ್ದರು. ಇತ್ತೀಚಿಗೆ ಶ್ರೀಕಾಂತ್​ ಎಂಬ ಪೊಲೀಸ್​ ಪೇದೆಯನ್ನು ಅಂತರ್ಜಾತಿ ವಿವಾಹವಾಗಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments