Sunday, December 22, 2024
HomeSpecial NewsHealth : ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ಯಾಕೆ ತಿನ್ನಬೇಕು ಗೊತ್ತಾ.?
spot_img

Health : ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ಯಾಕೆ ತಿನ್ನಬೇಕು ಗೊತ್ತಾ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ತಳ್ಳುವ ಗಾಡಿ ಮಾರಾಟಗಾರರು, ತಮ್ಮ ಗಾಡಿ ತುಂಬ ಕಿತ್ತಳೆ ಹಣ್ಣುಗಳನ್ನು (Orange fruit) ಇಟ್ಟು ಮಾರುತ್ತಿರುತ್ತಾರೆ. ಏಕೆಂದರೆ, ಕಿತ್ತಳೆ ಚಳಿಗಾಲದ ಸೀಸನಲ್ ಫ್ರೂಟ್‌.

ಹಾಗಾದರೆ ಚಳಿಗಾಲದಲ್ಲಿ ಈ ಹಣ್ಣನ್ನು ಯಾಕೆ ತಿನ್ನಬೇಕು ಗೊತ್ತಾ.?

ಇದನ್ನು ಓದಿ : ಇವರೇ ನೋಡಿ 33 ವರ್ಷಗಳ ಸೇವಾವಧಿಯಲ್ಲಿ 57 ಬಾರಿ ವರ್ಗಾವಣೆಯಾದ IAS ಅಧಿಕಾರಿ.!

ದೇಹದಲ್ಲಿ ಬಿಳಿ ರಕ್ತ ಕಣಗಳನ್ನು (White blood cells) ಹೆಚ್ಚು ಉತ್ಪತ್ತಿ ಮಾಡಿ ಸೋಂಕುಗಳು ಹಾಗೂ ಕಾಯಿಲೆಗಳ ವಿರುದ್ಧ ರಕ್ಷಣೆ (Protection against infections and diseases) ನೀಡುತ್ತದೆ.

ತನ್ನಲ್ಲಿ ವಿಟಮಿನ್ ಸಿ ಪ್ರಮಾಣವನ್ನು ಅಧಿಕವಾಗಿ (Vitamin C levels are high) ಹೊಂದಿರುವ ಕಿತ್ತಳೆ ಹಣ್ಣು, ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು (Immune system) ಬಲಪಡಿಸುತ್ತದೆ.

ಕಿತ್ತಳೆ ಹಣ್ಣು ದೇಹದ ತೂಕ ನಿಯಂತ್ರಣದಲ್ಲಿಡಲು (Body weight control) ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ನೀರಿನ ಪ್ರಮಾಣ ಇದ್ದು, ಹೊಟ್ಟೆ ತುಂಬಿಕೊಂಡ ಅನುಭವ ಉಂಟಾಗುತ್ತದೆ (Stomach- full feeling).

ಸೂರ್ಯನ ಹಾನಿಕಾರಕ ಕಿರಣಗಳಿಂದ (harmful rays of the sun) ನಮ್ಮ ಚರ್ಮವನ್ನು ರಕ್ಷಿಸುವುದು.

ಇದನ್ನು ಓದಿ : ‘ಸಹಕರಿಸಿದರೆ ಪ್ರಕರಣದಲ್ಲಿ ಸಹಾಯ’ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ; Video ವೈರಲ್.!

ಹೃದಯ ಹಾಗೂ ಹೃದಯ ರಕ್ತನಾಳದ ಕಾಯಿಲೆಗಳನ್ನು ಗುಣಪಡಿಸಿ ಪಾರ್ಶ್ವವಾಯು (Paralysis) ಉಂಟಾಗದಂತೆ ನೋಡಿಕೊಳ್ಳುತ್ತದೆ.

ಕಿತ್ತಳೆ ಹಣ್ಣಿನಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಾಗಿದ್ದು (High potassium levels), ಇದು ಹೃದಯದ ಆರೋಗ್ಯಕ್ಕೆ ಅನುಕೂಲ.

ಗಾಯ ಆದಂತಹ ಸಂದರ್ಭದಲ್ಲಿ ಬೇಗನೆ ವಾಸಿ ಮಾಡುತ್ತದೆ.

ಕಿತ್ತಳೆ ಹಣ್ಣಿನಲ್ಲಿ ಕರಗುವ ನಾರಿನ ಅಂಶವಿದ್ದು (Soluble fiber content), ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಆರೋಗ್ಯಕರವಾದ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಇದನ್ನು ಓದಿ : Belagavi : ನಾಪತ್ತೆಯಾಗಿದ್ದ ಅಥಣಿ ವಕೀಲನ ಶವ ಕೃಷ್ಣಾ ನದಿಯಲ್ಲಿ ಪತ್ತೆ.!

ಕಿತ್ತಳೆ ಹಣ್ಣಿನಲ್ಲಿ ದೇಹವನ್ನು ತಂಪಾಗಿಸುವ ಗುಣವಿದ್ದು, ಇದೇ ಗುಣದಿಂದ ಹೊಟ್ಟೆ ಉರಿ, ಎದೆ ಉರಿ, (stomach burn, heart burn) ಎಲ್ಲವೂ ಮಾಯವಾಗುತ್ತದೆ.

ಚರ್ಮದ ಸೌಂದರ್ಯವನ್ನು ಹಾಗೂ ಸಾಂದ್ರತೆಯನ್ನು (density) ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕಿತ್ತಳೆ ಹಣ್ಣಿನಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶ (Naturalism Sugar content) ಇರುವುದರಿಂದ ಸಿಹಿ ಹಾಕುವ ಅವಶ್ಯಕತೆ ಇಲ್ಲ.

 

ಹಿಂದಿನ ಸುದ್ದಿ : ಬೆಳಗಾವಿ : ನಾಪತ್ತೆಯಾಗಿದ್ದ ಅಥಣಿ ವಕೀಲನ ಶವ ಕೃಷ್ಣಾ ನದಿಯಲ್ಲಿ ಪತ್ತೆ.!

ಜನಸ್ಪಂದನ ನ್ಯೂಸ್, ಅಥಣಿ : ಕಳೆದ 3 ದಿನಗಳ ಹಿಂದೆ ನಾಪತ್ತೆಯಾಗಿದ್ದ (missing) ಅಥಣಿ ವಕೀಲರೊಬ್ಬರು (lawyer) ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಇದನ್ನು ಓದಿ : KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಅಥಣಿ ನ್ಯಾಯವಾದಿ ಸುಭಾಷ್ ಪಾಟಣಕರ ( 56) ಕೃಷ್ಣಾ ನದಿಯಲ್ಲಿ (Krishna River) ಇಂದು (ಡಿ.6) ಶವವಾಗಿ ಪತ್ತೆಯಾಗಿದ್ದಾರೆ.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ (Kokatanur village of Athani taluk) ನಿವಾಸಿಯಾದ ವಕೀಲ ಸುಭಾಷ್‌ ಅವರು ಡಿ. 3ರಂದು ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.

ನ್ಯಾಯವಾದಿ ಸುಭಾಷ್ (55) ಅವರು ಕಾಣೆಯಾಗಿದ್ದಾರೆ ಎಂದು ವದಂತಿ ಹಬ್ಬಿತ್ತು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ತನಿಖೆಗಿಳಿದ ಅಥಣಿ ಪೊಲೀಸರಿಗೆ ಹಳ್ಯಾಳ ಗ್ರಾಮದ ಹೊರವಲಯದ ಕೃಷ್ಣಾ ನದಿ ಸೇತುವೆ ಮೇಲೆ ನ್ಯಾಯವಾದಿ ಸುಭಾಷ್ ಬೈಕ್ ಬಿಟ್ಟಿದ್ದರು ಎನ್ನಲಾಗಿದೆ.

ಇದನ್ನು ಓದಿ : Health : ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?

ಈ ಆಧಾರದ ಮೇಲೆ ನದಿಗೆ ಹಾರಿರಬಹುದು ಎಂದು ಶಂಕಿಸಲಾಗಿತ್ತು. ನಿನ್ನೆಯಿಂದ ಪೊಲೀಸರು, ಅಗ್ನಿಶಾಮಕ ಹಾಗೂ ಎಸ್ ಡಿ ಆರ್ ಎಫ್ ತಂಡದಿಂದ ಶೋಧ ಕಾರ್ಯ ನಡೆದಿತ್ತು.

ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments