Friday, October 18, 2024
spot_img
spot_img
spot_img
spot_img
spot_img
spot_img
spot_img

ನಿಮ್ಮ ಆಧಾರ್ Number ಮರೆತು ಹೋಗಿದಿಯೇ ; ಹೀಗೆ ಮಾಡಿ ಮರಳಿ ಪಡೆಯಿರಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ನಿಮಗೆ ಆಧಾರ್ ನಂಬರ್ ಮರೆತೇಹೋಯ್ತಾ.? ಹಾಗಿದ್ರೆ ಚಿಂತೆ ಬಿಡಿ. ಆನ್‌ಲೈನ್‌ನಲ್ಲೇ ಈ ರೀತಿ ಮಾಡಿ ಮತ್ತೆ ನಿಮ್ಮ ಆಧಾರ ಕಾರ್ಡ್‌ ಪಡೆಯಿರಿ.

ಕೆಲವೊಮ್ಮೆ ಆಧಾರ್ ಕಾರ್ಡ್ ಕಳೆದುಹೋಗಿ, ಅದರ ನಂಬರ್ ಕೂಡ ಮರೆತುಹೋಗಿರುವ ಸಾಧ್ಯತೆ ಇಲ್ಲದಿಲ್ಲ. ಆಧಾರ್ ಸಂಖ್ಯೆಯೂ ಗೊತ್ತಿಲ್ಲ, ಅದರೆ ಎನ್ಲೋಲ್ಮೆಂಟ್ ನಂಬರ್ ಗೊತ್ತಿದ್ದರೆ ಆಧಾರ್ ಸಂಖ್ಯೆ ಹೊರತೆಗೆಯಬಹುದು. ಒಂದು ವೇಳೆ ಎನ್​ರೋಲ್ಮೆಂಟ್ ನಂಬರ್ ಕೂಡ ಗೊತ್ತಿಲ್ಲದಿದ್ದರೆ.?

ಇದನ್ನು ಓದಿ : Health : ಬೆಳಿಗ್ಗೆ ಉಪಹಾರಕ್ಕೆ ಏನೇನು ತಿನ್ನಬಾರದು ಗೊತ್ತಾ.?

ಈ ಸನ್ನಿವೇಶದಲ್ಲೂ ಆಧಾರ್ ಸಂಖ್ಯೆಯನ್ನು ಮರಳಿ ಪಡೆಯುವ ಅವಕಾಶ ಇದೆ. ಇದು ಬಹಳ ಸರಳ. ಯುಐಡಿಎಐ ವೆಬ್​ಸೈಟ್​ನಲ್ಲಿ ಮರೆತುಹೋದ ಆಧಾರ್ ನಂಬರ್ ಅನ್ನು ಕಂಡುಹಿಡಿಯಬಹುದು. ಆದರೆ, ಆಧಾರ್ ಕಾರ್ಡ್​ನಲ್ಲಿ ನೀವು ನೀಡಿರುವ ನಿಮ್ಮ ಹೆಸರು ಮತ್ತು ಅದಕ್ಕೆ ನೊಂದಾಯಿಸಿರುವ ಮೊಬೈಲ್ ನಂಬರ್ ಇದ್ದರೆ ಸಾಕು. ಆಧಾರ್ ಸಂಖ್ಯೆ ಸುಲಭವಾಗಿ ಕಂಡುಹಿಡಿಯಬಹುದು.

ಮರೆತುಹೋದ ಆಧಾರ್ ಸಂಖ್ಯೆಯನ್ನು ಕಂಡು ಹಿಡಿಯಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ :

myaadhaar.uidai.gov.in/retrieve-eid-uid

ಇಲ್ಲಿ ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ಪೂರ್ಣ ಹೆಸರು, ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ನಮೂದಿಸಿ. ಕ್ಯಾಪ್ಚಾ ಹಾಕಿ ಒಟಿಪಿ ಪಡೆಯಿರಿ.

ಇದನ್ನು ಓದಿ : Job alert : ಕೇಂದ್ರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ.!

ಒಟಿಪಿಯನ್ನು ಹಾಕಿ ಸಲ್ಲಿಸಿ. ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ಗೆ ಆಧಾರ್ ನಂಬರ್ ಅನ್ನು ಯುಐಡಿಎಐ ವತಿಯಿಂದ ಕಳುಹಿಸಲಾಗುತ್ತದೆ.

ಒಂದು ವೇಳೆ ಆಧಾರ್​ಗೆ ನೀವು ಮೊಬೈಲ್ ನಂಬರ್ ಲಿಂಕ್ ಮಾಡದೇ ಹೋಗಿದ್ದು, ಆಗ ಆಧಾರ್ ಸಂಖ್ಯೆ ಮರೆತುಹೋಗಿದ್ದರೆ ಅದನ್ನು ಪಡೆಯುವ ಅವಕಾಶ ಇರುತ್ತದೆ. ಅದಕ್ಕೆ ಆಧಾರ್ ಕೇಂದ್ರಕ್ಕೆ ಹೋಗಿ ಪ್ರಿಂಟ್ ಆಧಾರ್ ಸರ್ವಿಸ್ ಪಡೆಯಬಹುದು.

ಆಧಾರ್ ಸೆಂಟರ್​ಗೆ ಹೋಗಿ ನಿಮ್ಮ ಹೆಸರು, ಊರು ಇತ್ಯಾದಿ ವಿವರವನ್ನು ನಮೂದಿಸಿ. ಫಿಂಗರ್ ಪ್ರಿಂಟ್ ಇತ್ಯಾದಿ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಿ. ಇದು ಸರಿಹೊಂದಿದರೆ ನಿಮಗೆ ಆಧಾರ್ ಕಾರ್ಡ್ ಅನ್ನು ಅಲ್ಲಿಯೇ ನೀಡಲಾಗುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img