ಜನಸ್ಪಂದನ ನ್ಯೂಸ್, ಡೆಸ್ಕ್ : ಆದಾಯ ಮೀರಿದ ಆಸ್ತಿ ಸಂಪಾದನೆಯ ಆರೋಪದ ಮೇಲೆ ಸಾರಿಗೆ ಇಲಾಖೆಯ ಮಾಜಿ ಕಾನ್ಸ್ಟೆಬಲ್ವೊಬ್ಬರ (Former Constable of Transport Department) ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಪತ್ತೆ (large amount of property was discovered) ಮಾಡಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ (Bhopal, Madhya Pradesh) ಈ ಘಟನೆ ನಡೆದಿದ್ದು, ಈ ಕುರಿತು ವಿಡಿಯೋಗಳು ವೈರಲ್ ಆಗುತ್ತಿವೆ.
ದಾಳಿ ನಡೆಸಿದ ವೇಳೆ ₹200 ಮುಖ ಬೆಲೆಯ ನೋಟುಗಳ ಬಂಡಲ್ ಹಾಗೂ 40 ಕೆ.ಜಿ ಗಟ್ಟಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ.
ಇದನ್ನು ಓದಿ : ಏಕಾಂತದಲ್ಲಿದ್ದಾಗ ಮನೆಗೆ ಬಂದ ಪತಿ ; ಎದ್ನೋ ಬಿದ್ನೋ ಅಂತ ಅರಬೆತ್ತಲಾಗಿ ಓಡಿದ ಪತ್ನಿಯ Lover ; ವಿಡಿಯೋ ನೋಡಿ.!
ಲೋಕಾಯುಕ್ತ ಪೊಲೀಸರು ₹2.85 ಕೋಟಿ ನಗದು ಸೇರಿದಂತೆ 3 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ (The property has been confiscated) ಎಂದು ವರದಿಯಿಂದ ತಿಳಿದು ಬಂದಿದೆ.
ನಗದು ಜತೆಗೆ ₹50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ (seize). ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಎಸ್ಪಿ ಮಾಹಿತಿ ನೀಡಿದ್ದಾರೆ.
ವಿಡಿಯೋ :
#WATCH | Madhya Pradesh | 40 kg of silver and bundle of notes were recovered from the house of a former constable of the Transport Department during a Lokayukta Raid, yesterday, in Bhopal: Lokayukta
(Visual source: Lokayukta) pic.twitter.com/MTgKrBdfo5
— ANI (@ANI) December 21, 2024
ಹಿಂದಿನ ಸುದ್ದಿ : ಕುಂಬಳಕಾಯಿ ಬೀಜ ಚಿಕ್ಕದಾದರೂ ಅದರ ಉಪಯೋಗಗಳು ಹತ್ತು ಹಲವು.!
ಜನಸ್ಪಂದನ ನ್ಯೂಸ್, ಆರೋಗ್ಯ : ಕುಂಬಳಕಾಯಿಯು (Pumpkin) ಭಾರತದಲ್ಲಿ ತರಕಾರಿಗಳಲ್ಲಿ ಪ್ರಸಿದ್ಧಿ ಪಡೆದ ಒಂದು ವಿಶಿಷ್ಠವಾದ ತರಕಾರಿ (special vegetable). ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತದೆ.
ಕುಂಬಳಕಾಯಿ ತರಕಾರಿ ಮಾಡುವಾಗ ಬಹಳಷ್ಟು ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ನಿಮಗೆ ಗೊತ್ತಾ. ವಿಶ್ವದ 100 ಅತ್ಯಂತ ಶಕ್ತಿಶಾಲಿ ಆಹಾರಗಳ ಪಟ್ಟಿಯನ್ನು BBCಯು ಸಿದ್ಧಪಡಿಸಿದೆ. ಇದರಲ್ಲಿ ಈ ತರಕಾರಿಯ ಬೀಜವು 6ನೇ ಸ್ಥಾನ ಪಡೆದಿದೆ ಎಂದು (BBC has prepared a list of the 100 most powerful foods in the world).
ಇದನ್ನು ಓದಿ : India Post : ಇಂಡಿಯಾ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಪೌಷ್ಠಿಕಾಂಶದ ವಿಷಯದಲ್ಲಿ ಮೀನಿಗಿಂತಲೂ ಹೆಚ್ಚು ಕುಂಬಳಕಾಯಿ ಬೀಜ ಶಕ್ತಿಯುತವಾಗಿದೆ (More powerful than fish) ಎಂಬುದು ಇನ್ನೊಂದು ಅಚ್ಚರಿಯ ಸಂಗತಿ.
* ಕುಂಬಳಕಾಯಿ ಬೀಜಗಳು ಕೂದಲು ಉದುರುವುದನ್ನು ತಡೆಯುತ್ತವೆ. ಕೂದಲು ಉದುರುವಿಕೆಗೆ ಕಾರಣವಾಗುವ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಉತ್ಪಾದನೆಯನ್ನು ಈ ಬೀಜಗಳಲ್ಲಿನ ಫೈಟೊಕೆಮಿಕಲ್ ಸಂಯುಕ್ತಗಳು (Phytochemical compounds) ತಡೆಗಟ್ಟಲು ಸಹಾಯ ಮಾಡುತ್ತವೆ.
ಕುಂಬಳಕಾಯಿ ಬೀಜಗಳು DHT ಮಟ್ಟವನ್ನು ಕಡಿಮೆ ಮಾಡುವ ಮೂಲಕ ಕೂದಲು ಉದುರುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಿ, ಇರುವ ಕೂದಲನ್ನು ಸಂರಕ್ಷಿಸಲು (To preserve existing hair) ಸಹಾಯ ಮಾಡುತ್ತವೆ.
ಇದನ್ನು ಓದಿ : ‘ನನ್ನ girlfriend ನಿಂಗೆ, ನಿನ್ನ girlfriend ನಂಗೆʼ ; ಬೆಂಗಳೂರಲ್ಲಿ ಹೊಸ ವರ್ಷಕ್ಕೆ ಸ್ವ್ಯಾಪಿಂಗ್ ದಂಧೆ.?
* ಕುಂಬಳಕಾಯಿ ಬೀಜಗಳಲ್ಲಿ ಇರುವ ಸತುವು ದೇಹವನ್ನು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು (The immune system) ಬಲಪಡಿಸುತ್ತದೆ.
* ಇದರಲ್ಲಿರುವ ಕ್ಯಾರೊಟಿನಾಯ್ಡ್ಗಳು ಮತ್ತು ಆಂಟಿಆಕ್ಸಿಡೆಂಟ್ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಕೆಲಸ ಮಾಡುತ್ತವೆ.
* ಈ ಬೀಜಗಳು ವಿಟಮಿನ್ ಇ ಹೊಂದಿದ್ದು, ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತವೆ.